ಸಿಎಂ ಮತ್ತು ಆರ್ಯನ್

ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ರಾಂತಿಗೆಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿರುವುದನ್ನು ತಿಳಿದುಕೊಂಡು ಅಲ್ಲಿಗೆ ಬಂದ ಬಾಲಕನ ಹೆಸರು ಆರ್ಯನ್ ಗಿರಿ. ಈತ ಎಂ. ಆರ್ ಸಾಕರೆ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ. ಬೆಳ್ಳಿಗೆ ಸುಮಾರು 9 ಗಂಟೆಯ ಸಮಯದಲ್ಲಿ ಸರ್ಕ್ಯೂಟ್ ಹೌಸ್‍ಗೆ ಬಂದ ಬಾಲಕ ಆರ್ಯನ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನ್ನ ಊರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾನೆ. ಬಿಡುವಿಲ್ಲದ … More ಸಿಎಂ ಮತ್ತು ಆರ್ಯನ್

ದಾಖಲೆಗಾಗಿ ಯೋಗ

ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಜೂನ್ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತವು ಸೇರಿದಂತೆ ಒಟ್ಟು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವ ಸಿದ್ದತೆಯಾಗಿ ಮೈಸೂರು ಜಿಲ್ಲಾಡಳಿತವು ಸುಮಾರು 60 ಸಾವಿರ ಜನರನ್ನು ಸೇರಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಸಜ್ಜಾಗಿದೆ. ಈ ಮೂಲಕ ಗಿನ್ನೀಸ್ ದಾಖಲೆಯನ್ನು ಬರೆಯಲು ಮೈಸೂರು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಈವರೆಗೆ ದೆಹಲಿಯ ರಾಜ ಪಥದಲ್ಲಿ 38500 ಜನ … More ದಾಖಲೆಗಾಗಿ ಯೋಗ

ಮಾಲ್ಡೀವ್ಸ್ ರಾಯಬಾರಿ ವಾರ್ತಾ ಇಲಾಖೆಯಲ್ಲಿ

ಮಾಲ್ಡೀವ್ಸ್‍ನ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ಅವರು ಸಾರ್ವಾಜನಿಕ ಮತ್ತು ವಾರ್ತಾ ಇಲಾಖೆಗೆ ಭೇಟಿ ನೀಡಿ ಇಲಾಖೆಯ ಕಾರ್ಯವೈಖರಿಗಳನ್ನ ವೀಕ್ಷಿಸಿದರು. ಈ ಸಂದರ್ಭದಲ್ಲಿ ರೀತಿ ಮಿಶ್ರಾ, ಹಾಗೂ ವಾರ್ತಾ ಮತ್ತು ಸಾರ್ವಾಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್ ವಿಶು ಕುಮಾರ್ ಮತ್ತು ಉಪನಿರ್ದೇಶಕ ಹೆಚ್ ಎನ್ ದಿನೇಶ್ ಜೊತೆಗಿದ್ದರು.