ಯಾವುದು ಈ  ಎಸ್‍ಸಿ ಎಸ್‍ಪಿ ಮತ್ತು ಟಿಎಸ್ ಪಿ ಯೋಜನೆ ?

  ಅಶ್ವಿನಿ ಕೃಷ್ಣೆಗೌಡ   ಕರ್ನಾಟಕ ಅನುಸೂಚಿತ ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಅಧಿ ನಿಯಮ 2013 ರಲ್ಲಿ ಯೋಜನ ಆಯೋಗದಿಂದ ರಚಿತವಾದ ಹಾಗೂ  2015- 16 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ಜಾತಿಯಾಧಾರಿತ  ಯೋಜನೆಗಳು ಹಾಗೂ ಬುಡಕಟ್ಟು ಯೋಜನೆಯ ( ಹಣಕಾಸು, ಸಂಪನ್ಮೂಲಗಳ ಹಂಚಿಕೆ ಹಾಗೂ ಉಪಯುಕ್ತತೆ ) ಅನ್ವಯ ಕರ್ನಾಟಕ ಅನುಸೂಚಿತ ಜಾತಿ ಮತ್ತು ಉಪ ಜಾತಿ ಯೋಜನೆ,  ಹಾಗೂ ಗಿರಿಜನ ಉಪ  ಯೋಜನೆಯ  ಅಧಿನಿಯಮ … More ಯಾವುದು ಈ  ಎಸ್‍ಸಿ ಎಸ್‍ಪಿ ಮತ್ತು ಟಿಎಸ್ ಪಿ ಯೋಜನೆ ?

ಇಂದು (ಜೂನ್ 6, 2017) ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಡಿ ದೇವರಾಜ ಅರಸು ಅವರ 35ನೇ ಪುಣ್ಯ ಸ್ಮರಣೆ ದಿನ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಡಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿದರು. ಈ ಸಂದರ್ಭದ ಚಿತ್ರ ಇಲ್ಲಿದೆ.

ಕ್ಯಾನ್ವಾಸ್ ನಲ್ಲಿ ಸಿ.ಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ಪರಿಸರ ದಿನಾಚರಣೆ ಮತ್ತು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ಜಿ ಕೆ ವಿ ಕೆ ಕೃಷಿ ವಿಶ್ವ ವಿದ್ಯಾಲಯದ ಡಾ ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಕಲಾವಿದರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ರಚಿಸಿದ ಕ್ಯಾನ್ವಾಸನ್ನು ಮುಖ್ಯಮಂತ್ರಿಗಳಿಗೆ ಕೊಡುಗೆಯಾಗಿ ನೀಡಿದರು.

‘ಟ್ರಿಣ್ ಟ್ರಿಣ್’ .. ಏನಿದು?

ಸಾಕ್ಷಿ ಸಜೀಪ ಚಿತ್ರಗಳು– ವೆಂಕಟ್ ರೆಡ್ಡಿ ಸುಂದರವಾದ ನಗರ, ಸಾಂಸ್ಕೃತಿಕ ನಗರ ಎಂದೇ ಕರೆಯಲ್ಪಡುವ ಮೈಸೂರು ನಗರದಲ್ಲಿ  ನಗರದಲ್ಲಿ 12 ಲಕ್ಷ ಜನಸಂಖ್ಯೆಯಿದ್ದು, ಆರೂವರೆ ಲಕ್ಷ ವಾಹನಗಳಿವೆ. ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ, ಮತ್ತು ನಾನಾ ಕಡೆಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ‘ಟ್ರಿಣ್ ಟ್ರಿಣ್’ ಹೆಸರಿನಲ್ಲಿ ಸಾರ್ವಜನಿಕ ಸೈಕಲ್ ವ್ಯವಸ್ಥೆ ಯೋಜನೆಯನ್ನು ಜಾರಿಗೆ ತಂದಿದೆ. ಅರೆ! ಏನಿದು ಈ ‘ಟ್ರಿಣ್ ಟ್ರಿಣ್’ … More ‘ಟ್ರಿಣ್ ಟ್ರಿಣ್’ .. ಏನಿದು?