ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗದಗ ಜಿಲ್ಲೆ ನರಗುಂದದಲ್ಲಿ ಇಂದು ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. Advertisements

ಮೆಟ್ರೋ ಸೇವೆಗೆ ಇನ್ನೆರಡು ಹೊಸ ಮಾರ್ಗ

ಬೆಂಗಳೂರು ನಗರ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲು ಬಿಡಿಎ ತನ್ನ ‘ಪರಿಷ್ಕೃತ ಮಹಾಯೋಜನೆ-2031ರಲ್ಲಿ’ ಪೂರ್ಣವರ್ತುಲ ರಸ್ತೆಗಳಿಗೆ ಸಮಾನಾಂತರವಾಗಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾಪಿಸಿದೆ. ಸಿಲ್ಕ್ ಬೋರ್ಡ್, ಕೆ.ಆರ್.ಪುರ ಮತ್ತು ಹೆಬ್ಬಾಳ ಹೊರವರ್ತುಲ ರಸ್ತೆಯ ಸಮೀಪದಲ್ಲಿ ಮೆಟ್ರೋ 3ನೇ ಹಂತದ ಮಾರ್ಗಗಳು ಸಂಪರ್ಕ ಸಾಧಿಸಲಿದ್ದು, ನಿತ್ಯ ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆಯಿದೆ.  

‘ನೋ ಬ್ಯಾಗ್ ಡೇ’ ಜಾರಿಗೆ ಸರ್ಕಾರ ಚಿಂತನೆ

ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ, ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಪೂರಕವಾಗುವ ವಾರದಲ್ಲಿ ಒಂದು ದಿನ `ನೋಬ್ಯಾಗ್ ಡೇ’ಅನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಿಎಂ ಶುಭಾಶಯ

ಭಾಷೆ ಬೆಳೆಯಲು ಸಾಹಿತ್ಯವೂ ಅತ್ಯಂತ ಮುಖ್ಯ. ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಿ,ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿದ್ದೇವೆ. ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಕಂಪನ್ನು ನಾಡಿನ ಮೂಲೆಮೂಲೆಗೂ ಹರಡುವಲ್ಲಿ ಯಶಸ್ವಿಯಾಗಲಿ,ಕನ್ನಡ ನಾಡು-ನುಡಿ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

ಮೌಡ್ಯ ನಿಷೇಧ ವಿಧೇಯಕ್ಕೆ ಮೇಲ್ಮನೆ ಅಸ್ತು

ದೇವರು ಧರ್ಮ ಆಚರಣೆಗಳ ಹೆಸರಿನಲ್ಲಿ ಆಗುತ್ತಿರುವ ಶೋಷಣೆಯ ತಡೆಗೆ ರಾಜ್ಯ ಸರ್ಕಾರ ಅಂಗೀಕರಿಸಿರುವ ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಒಪ್ಪಿಗೆ ಸಿಕ್ಕಿದೆ. ಸಿಡಿ, ಮಡೆಯಂಥಾ ಅಮಾನವೀಯ ಪದ್ಧತಿಗಳನ್ನೂ ಒಳಗೊಂಡಂತೆ ಎಲ್ಲ ಅನಿಷ್ಟ ಆಚರಣೆಗಳಿಗೆ ಇನ್ನು ತಡೆ ಬೀಳಲಿದೆ.

ಬೆಂಗಳೂರಿನ ಬಡ ಜನರಿಗೆ `ಲಕ್ಷ ವಸತಿ ಯೋಜನೆ’

ಕರ್ನಾಟಕ ಸರ್ಕಾರದಿಂದ ಬೆಂಗಳೂರು ಮಹಾನಗರದ ಬಡವರಿಗಾಗಿ `ಲಕ್ಷ ವಸತಿ ಯೋಜನೆ’ ಘೋಷಣೆಯಾಗಿದ್ದು, ಈ ಯೋಜನೆಯಡಿ ಚಲನ ಚಿತ್ರ ಕಾರ್ಮಿಕರು ಮತ್ತು ಲೈಂಗಿಕ ಕಾರ್ಯಕರ್ತೆಯರಿಗೂ ಮನೆಗಳನ್ನು ಮೀಸಲಿಡಲಾಗಿದೆ. ಸದರಿ ಯೋಜನೆಗಳ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂಚಾರ ದಟ್ಟನೆ ನಿಯಂತ್ರಕ್ಕೆ ಎರಡು ಹೊಸ ವರ್ತುಲ ರಸ್ತೆ ನಿರ್ಮಾಣ

ಮುಂದಿನ 15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಎರಡು ಹೊಸ ವರ್ತುಲ ರಸ್ತೆ ನಿರ್ಮಾಣಕ್ಕೆ ಬಿಡಿಎ ತನ್ನ ‘ಪರಿಷ್ಕೃತ ಮಹಾಯೋಜನೆ-2031ರಲ್ಲಿ’ ಪ್ರಸ್ತಾಪಿಸಿದೆ. ಜೊತೆಗೆ 6 ಸಾವಿರ ಬಿಎಂಟಿಸಿ ಬಸ್‍ಗಳನ್ನು 15 ಸಾವಿರಕ್ಕೆ ಏರಿಕೆ ಮಾಡಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.