ಯೋಗ ದಾಖಲೆಗೆ ಮೈಸೂರು ಸಜ್ಜು

ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಈ ಬೃಹತ್ ಯೋಗ ಶಿಬಿರದಲ್ಲಿ 60ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು ಗಿನ್ನೆಸ್ ದಾಖಲೆಯ ಆಶಯವನ್ನು ಮೂಡಿಸಿದೆ.

ಕರ್ನಾಟಕ ಮತ್ತು ಯೋಗ

ಯೋಗ ಕುರಿತು ಅಷ್ಟೊಂದು ಅರಿವು ಇಲ್ಲದ ದಿನಗಳಲ್ಲಿ ಕರ್ನಾಟಕ ಯೋಗ ಪಸರಿಸುವಿಕೆಗೆ ತಳಹದಿಯನ್ನು ಹಾಕಿತು. ಪ್ರಾಚೀನ ಪರಂಪರೆಯಿರುವ ಯೋಗಾಸನ ಪದ್ದತಿಯನ್ನು ರೂಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದ ಗುರು ಪರಂಪರೆಯನ್ನು ಇತಿಹಾಸದಲ್ಲಿ ಕಾಣ ಬಹುದು. ಆಧುನಿಕ ಕಾಲದ ಚಿಕಿತ್ಸಾ ಪದ್ದತಿಗಳಿಗೂ ಮುನ್ನ ‘ಯೋಗ’ ಮೂಲಕ ಪರಿಹಾರವನ್ನು ಕಂಡು ಕೊಳ್ಳಲಾಗುತ್ತಿತ್ತು. ಇವತ್ತಿಗೂ ಸಹಾ ಸೂಕ್ತ ಆಹಾರ ಪದ್ದತಿ ಹಾಗೂ ಯೋಗ ಪದ್ದತಿಯ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳುವ ಪದ್ದತಿಯನ್ನು ಉತ್ತೇಜಿಸುವ ಆಯುಷ್ ಪದ್ದತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ರಾಜ್ಯದಲ್ಲಿ … More ಕರ್ನಾಟಕ ಮತ್ತು ಯೋಗ

ಯೋಗ ದಿನಾಚರಣೆ:ಏನು?ಏಕೆ?ಹೇಗೆ?ಎಲ್ಲಿ?

ಯೋಗ ದಿನಾಚರಣೆ: 2014ರ ಸಪ್ಟೆಂಬರ್ 27ರಂದು ವಿಶ್ವಸಂಸ್ಥೆ ವಿಶ್ವ ಯೋಗ ದಿನಾಚರಣೆಯನ್ನು ಘೋಷಿಸಿತು. ಭಾರತದ ಪ್ರಾಚೀನ ಕಲೆ ಯೋಗಕ್ಕೆ ಈ ಘೋಷಣೆಯ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಪೈಕಿ 177 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು. ಯೋಗ ದಿನಾಚರಣೆ ಯಾವಾಗ? ಸಂಯುಕ್ತ ರಾಷ್ಟ್ರ ಸಂಸ್ಥೆಯು ಜೂನ್ 21 ನ್ನು ವಿಶ್ಚಯೋಗ ದಿನ ಎಂದು ಘೋಷಣೆ ಮಾಡಿತು. 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಜೂನ್ 21 ರಂದು ಯೋಗ ದಿನಾಚರಣೆ … More ಯೋಗ ದಿನಾಚರಣೆ:ಏನು?ಏಕೆ?ಹೇಗೆ?ಎಲ್ಲಿ?