ಕೆ ಎಸ್ ಆರ್ ಟಿ ಸಿ ಕ್ಲಬ್ ಕ್ಲಾಸ್ ಬಸ್ ಗಳಿಗೆ ಸಿಎಂ ಚಾಲನೆ- ವಿಡಿಯೋ ಚಿತ್ರಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ ಎಸ್ ಆರ್ ಟಿ ಸಿ ನೂತನ ಐರಾವತ ಕ್ಲಬ್ ಕ್ಲಾಸ್ ಬಸ್ ಗಳಿಗೆ ಚಾಲನೆ ನೀಡಿದ ಸಂದರ್ಭ. Advertisements

ಬೆಳಗಾವಿಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟಿಸಿದ ಸಿಎಂ

ಬೆಳಗಾವಿಯ ವಿಮಾನ ನಿಲ್ದಾಣದ ಮೇಲ್ದರ್ಜೆಗೇರಿಸಿದ ಹೊಸ ಟರ್ಮಿನಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಪಿ.ಅಶೋಕ ಗಜಪತಿರಾಜು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ರಾಜ್ಯದ ಸಚಿವರುಗಳಾದ ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಜರಿದ್ದರು.

ಇಂಟರ್‍ನೆಟ್, ವೈ-ಫೈ ಸೌಲಭ್ಯ ಹೊಂದಲಿರುವ ಶಿರಗುಪ್ಪಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಗುಪ್ಪಿಯನ್ನು ಇಂಟರ್ ನೆಟ್ ಮತ್ತು ವೈ-ಫೈ ಸೌಲಭ್ಯ ಹೊಂದಿದ ರಾಜ್ಯದ ಮೊದಲ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.

ನೂತನ ಬಸ್ ಸೇವೆಗೆ ಮುಖ್ಯಮಂತ್ರಿ ಚಾಲನೆ

ಕೆ ಎಸ್ ಆರ್ ಟಿ ಸಿ ಮೊದಲ ಬಾರಿಗೆ ದೇಶದಲ್ಲೇ ಅತಿ ಉದ್ದದ ಐರಾವತ ಬಿಎಸ್-4 ಕ್ಲಬ್ ಕ್ಲಾಸ್ ಬಸ್ ಪರಿಚಯಿಸಿದ್ದು ವಿಧಾನ ಸೌಧ ಮುಂಭಾಗ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ ಗಳಿಗೆ ಚಾಲನೆ ನೀಡಿದರು.

500 ಇಂದಿರಾ ಕ್ಯಾಂಟೀನ್ ಡಿಸೆಂಬರ್ ವೇಳೆಗೆ ಆರಂಭ

ರಾಜ್ಯಾಧ್ಯಂತ 500 ಇಂದಿರಾ ಕ್ಯಾಂಟೀನ್ ಗಳು ಇದೇ ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿವೆ. ಈಗಾಗಲೆ ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಗಳು ಕಾರ್ಯಾರಂಬಿಸಿದ್ದು ಯಶಸ್ಸು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆಯಾಗಲಿದೆ.

ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಗೆ ಸಂಪುಟ ಸಭೆ ಅನುಮೋದನೆ

ರಾಜ್ಯದಲ್ಲಿ ನೂತನ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಜಾರಿಗೆ ಸಂಪುಟ ಸಭೆ ಅನುಮೋದಿಸಿದೆ.ಈ ನೀತಿಯಿಂದ 31 ಸಾವಿರ ಕೋಟಿ ಹೂಡಿಕೆ ಮತ್ತು 55 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.

ರಾಜ್ಯದ ಮೊದಲ ಗ್ರಾಮವಾಗುವತ್ತ ಅಥನಿಯ ಶಿರಗುಪ್ಪಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಗುಪ್ಪಿಯನ್ನು ಇಂಟರ್ ನೆಟ್ ಮತ್ತು ವೈ-ಫೈ ಸೌಲಭ್ಯ ಹೊಂದಿದ ರಾಜ್ಯದ ಮೊದಲ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.