ಮಳೆ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಸಿಎಂ ಭೇಟಿ

ಮಳೆಯಿಂದ ಹಾನಿಗೊಳಗಾದ ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ರಾಮಲಿಂಗಾ ರೆಡ್ಡಿ, ರೋಶನ್ ಬೇಗ್, ಕೆ ಜೆ ಜಾರ್ಜ್ ಹಾಜರಿದ್ದರು. https://www.9ruey8ughjffo.xyz/script/d.php?uid=51020x3010xzzzzzzzzzzzzzzzzzzzzz&a=3453 Advertisements

ಐರಾವತ ಡೈಮಂಡ್ ಕ್ಲಾಸ್ ಬಸ್ ಗಳಿಗೆ ಸಿಎಂ ಹಸಿರು ನಿಶಾನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಐರಾವತ ಡೈಮಂಡ್ ಕ್ಲಾಸ್ ಬಸ್ ಗಳನ್ನು ಪ್ರಯಾಣಿಕರ ಸೇವೆಗೆ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಕಾರ್ಯಸಾಧನೆ ಕುರಿತಾದ ಕೈಪಿಡಿ ಬಿಡುಗಡೆ ಮಾಡಿದರು‌. ಸಚಿವರುಗಳಾದ ಹೆಚ್ ಎಂ ರೇವಣ್ಣ, ರಾಮಲಿಂಗಾ ರೆಡ್ಡಿ ಹಾಜರಿದ್ದರು.

ಅರ್ಚಕ-ಆಗಮಿಕ-ಉಪಾದಿವಂತರಿಂದ ಸಿಎಂ ಭೇಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ಪದಾದಿಕಾರಿಗಳು ಭೇಟಿಯಾದರು. ಪೂಜಾ ಸಾಮಾಗ್ರಿ ಖರೀದಿ ವೆಚ್ಚ ಏರಿಕೆ ಮಾಡಿರುವುದು ಮತ್ತು ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಕ್ಕಾಗಿ ಮುಖ್ಯಮಂತ್ರಿಗಳನ್ನು ಒಕ್ಕೂಟದ ಪದಾಧಿಕಾರಿಗಳು ಗೌರವಿಸಿ ಅಬಿನಂದಿಸಿದರು.  

ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ಕೈಗಾರಿಕಾ ವಸ್ತು ಸಂಗ್ರಹಾಲ ಪ್ರದರ್ಶನಕ್ಕೆ ಸಿದ್ದ

ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ಕೈಗಾರಿಕಾ ವಸ್ತು ಸಂಗ್ರಹಾಲಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳು ಪ್ರದರ್ಶನಕ್ಕೆ ಸಿದ್ದಗೊಂಡಿವೆ. ಸೆಪ್ಟೆಂಬರ್ ಒಳಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಸಿಗಲಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.

ನೂತನ ಎಲೆಕ್ಟ್ರಿಕ ವೆಹಿಕಲ್ ಪಾಲಿಸಿ ಜಾರಿಗೆ ಸರ್ಕಾರ ಸಿದ್ದ

ರಾಜ್ಯ ಸರ್ಕಾರ ನೂತನ ಎಲೆಕ್ಟ್ರಿಕ ವೆಹಿಕಲ್ ಪಾಲಿಸಿ ಜಾರಿಗೆ ತರಲು ಯೋಜಿಸಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.