ಸಾಮಾಜಿಕ ಸಾಧನ ಸಮಾವೇಷ ಸಿಎಂ ಉದ್ಘಾಟನೆ

ಬಳ್ಳಾರಿಯಲ್ಲಿ ಆಯೋಜಿಸಿದ್ದ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ, ಸವಲತ್ತುಗಳ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ಸಂತೋಷ್ ಲಾಡ್, ಎಚ್ ಅಂಜನೇಯ, ಉಮಾಶ್ರೀ ಹಾಜರಿದ್ದರು.   Advertisements

ಅನುಭವ ಮಂಟಪ’ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಯೋಜನೆ ಸಿದ್ದ

ಬಸವ ಕಲ್ಯಾಣದ ತ್ರಿಪುರಾಂತಕ ಕೆರೆ ದಂಡೆಯಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ‘ಅನುಭವ ಮಂಟಪ’ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಯೋಜನೆ ಸಿದ್ದ ಪಡಿಸಿದೆ. 25 ಎಕರೆ ವಿಸ್ತಾರವಾದ ಜಾಗದಲ್ಲಿ 600 ಕೋಟಿ ರೂಪಾಯಿ ವೆಚ್ಚ ಮಾಡಿ ‘ಅನುಭವ ಮಂಟಪ’ ನಿರ್ಮಿಸುವ ಗುರಿ ಹೊಂದಲಾಗಿದೆ.

ಅಲೆದಾಟ ತಪ್ಪಿಸಲು “ಸ್ಪಂದನೆ” ತಂತ್ರಾಂಶ

ಫಲಾನುಭವಿಗಳು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಅಂಬೇಡ್ಕರ್ ಅಭಿವೃದ್ದಿ ನಿಗಮ ‘ಸ್ಪಂದನೆ’ ಎಂಬ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.  

ಅರಣ್ಯ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ

ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿಧನರಾದ ನೌಕರ ಸಿಬ್ಬಂದಿ ಗಳ ಮಕ್ಕಳಿಗೆ ಶಿಕ್ಷಣ ಒದಗಿಸಲು ನಿರ್ಧರಿಸಲಾಗಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ

ವಿಶ್ವದ ಹೈಟೆಕ್ ಸಿಟಿ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ

ಬೆಂಗಳೂರು ನಗರ ವಿಶ್ವದ 25 ಹೈಟೆಕ್ ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಸ್ಥಾನಗಳಿಸಿರುವ ಶೆನ್ ಜೆನ್, ಬರ್ಲಿನ್, ಹಾಂಕಾಂಗ್, ಕೊಪೆನ್ ಹೇಗನ್, ಬಾರ್ಸಿಲೋನ, ವಾಷಿಂಗ್ ಟನ್ ಡಿಸಿ ನಗರಗಳಿಗಿಂತ ಅಗ್ರ ಪಂಕ್ತಿಯಲ್ಲಿರುವುದು ಬೆಂಗಳೂರು ನಗರದ ಹೆಮ್ಮೆಯಾಗಿದೆ. ಹೈಟೆಕ್ ಸಿಟಿ ಪಟ್ಟಿಯ 19ನೇ ಸ್ಥಾನಗಳಿಸಿರುವ ಬೆಂಗಳೂರು ಈ ಮೊದಲಿನ ಸಮೀಕ್ಷೆಗಳಲ್ಲಿ 49 ನೇ ಸ್ಥಾನ ಪಡೆದಿತ್ತು. ಐಟಿ ತಂತ್ರಜ್ಞಾನದ ಕೇಂದ್ರವಾಗಿರುವ ಬೆಂಗಳೂರು ಹೆಚ್ಚಿನ ಸಂಖ್ಯೆಯ ತಂತ್ರಜ್ಞರನ್ನು ಹೊಂದಿದೆ. ಸರ್ಕಾರದ ಐಟಿ ನೀತಿ, ಪ್ರೋತ್ಸಾಹದಾಯಕ ಯೋಜನೆಗಳು ಬೆಂಗಳೂರು … More ವಿಶ್ವದ ಹೈಟೆಕ್ ಸಿಟಿ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ