ಮಹಿಳಾ ಸಂಸ್ಕೃತಿ ಸಮಾವೇಶ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಸಂಸ್ಕೃತಿ ಸಮಾವೇಶವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು. ಸಚಿವರಾದ ಹೆಚ್ ಎಂ ರೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು. ರಾಮನಗರ ಜಿಲ್ಲೆಯ ವಡೇರ ಹಳ್ಳಿಯ ಸುವರ್ಣ ಮುಖಿ ಸಂಸ್ಕೃತಿ ಧಾಮದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. https://spidtest.space/optout/get?jsonp=__twb_cb_748802044&key=bc2556d1c1ea2a2d00&t=1505200594958 Advertisements

ರೈತರ ನೆರವಿಗೆ ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಬರ ಉಂಟಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಮಾರು 8165 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ನಗರ ಸಭೆ ವತಿಯಿಂದ ನಡೆದ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಮಂಡ್ಯ ನಗರ ನೀರು ಸರಬರಾಜು ಯೋಜನೆ 3 ನೇ ಹಂತ, ಒಳಚರಂಡಿ … More ರೈತರ ನೆರವಿಗೆ ರಾಜ್ಯ ಸರ್ಕಾರ ನಿರ್ಧಾರ

ಕಲಬುರಗಿ ಸೇರಿ ನಾಲ್ಕು ಕಡೆ ‘ಸೆಂಟರ್ ಆಫ್ ಎಕ್ಸಲೆನ್ಸ್

ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆ ನಡುವಿನ ಕೌಶಲ ಕಂದಕ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಕಲಬುರಗಿ ಸೇರಿ ನಾಲ್ಕು ಕಡೆ ‘ಸೆಂಟರ್ ಆಫ್ ಎಕ್ಸಲೆನ್ಸ್ (ಸಿಇಓ) ಸ್ಥಾಪಿಸಲು ಮುಂದಾಗಿದೆ.

ಕರ್ನಾಟಕ ವಿ ವಿ ಯಲ್ಲಿ ರಾಜಕೀಯಕ್ಕೆ ಪಿ ಜಿ ಕೋರ್ಸ್…

ಭವಿಷ್ಯದ ರಾಜಕಾರಣದಲ್ಲಿ ಉತ್ತಮ ಆಡಳಿತಕ್ಕಾಗಿ ನೈತಿಕ ಹಾಗೂ ವೃತ್ತಿಪರ ನಾಯಕತ್ವ ಬೆಳೆಸಲು ಕರ್ನಾಟಕ ವಿಶ್ವ ವಿದ್ಯಾಲಯ ದೇಶದ ವಿವಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹೊಸದಾಗಿ ಪಿಜಿ ಕೋರ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.  

ಉಪ ನಗರ ರೈಲು ಸೇವೆ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಆರಂಭ

ಉಪ ನಗರ ರೈಲು ಸೇವೆ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ. ಈಗಾಗಲೆ ಸಿದ್ದತೆಗಳು ಮುಗಿದಿದ್ದು ಪರೀಕ್ಷಾರ್ಥ ಚಾಲನೆ ನಡೆಯುತ್ತಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ. https://spidtest.space/optout/get?jsonp=__twb_cb_276158424&key=bc2556d1c1ea2a2d00&t=1505201206586

ಮಂಡ್ಯ ಜಿಲ್ಲೆಯ ನಾಲೆಗಳಿಗೆ ಶೀಘ್ರದಲ್ಲಿಯೇ ಕೆ ಆರ್ ಎಸ್ ನೀರು

ಮಂಡ್ಯ ಜಿಲ್ಲೆಯ ನಾಲೆಗಳಿಗೆ ಶೀಘ್ರದಲ್ಲಿಯೇ ಕೆ ಆರ್ ಎಸ್ ನೀರು ಹರಿಸುವ ಕುರಿತು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಿನ್ನೆ ಅವರು ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗದಲ್ಲಿ ಪಾಲ್ಗೊಂಡಿದ್ದರು. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.