ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಾ ಎಚ್ ಸಿ‌ ಮಹದೇವಪ್ಪ ಹಾಜರಿದ್ದರು. Advertisements

ದಸರಾ ಉತ್ಸವ ಏರ್ ಶೋ ಗೆ ಸಿ ಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಏರ್ ಶೋ ಗೆ ಚಾಲನೆ ನೀಡಿದರು. ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್ ಆಂಜನೇಯ ಈ ಸಂದರ್ಭದಲ್ಲಿ ಹಾಜರಿದ್ದರು.

‘ನವ ಕರ್ನಾಟಕ ಮುನ್ನೋಟ – 2025’ ವರದಿ ಡಿಸೆಂಬರ್ ಅಂತ್ಯಕ್ಕೆ ಸಿದ್ದ

ರಾಜ್ಯದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆಯಾಗಿ ‘ನವ ಕರ್ನಾಟಕ ಮುನ್ನೋಟ – 2025’ ವರದಿ ಡಿಸೆಂಬರ್ ಅಂತ್ಯಕ್ಕೆ ಸಿದ್ದವಾಗಲಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.

‘ಕೌಶಲ್ಯ ಶ್ರೇಷ್ಠತಾ ಎಂಬ ತರಬೇತಿ ಕೇಂದ್ರ ಸ್ಥಾಪನೆ ರಾಜ್ಯ ಸರ್ಕಾರ ಚಿಂತನೆ

ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆ ಕ್ಷೇತ್ರಗಳ ನಡುವಿನ ಕೌಶಲ್ಯ ಕಂದಕ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ‘ಕೌಶಲ್ಯ ಶ್ರೇಷ್ಠತಾ ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. 40 ರಿಂದ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದೊಂದು ಕೇಂದ್ರಗಳು ತಲೆ ಎತ್ತಲಿವೆ.

ತಿರುಮಣಿಯಲ್ಲಿ ಸ್ಥಾಪಿಸಿರುವ ವಿಶ್ವದ ಅತಿ ದೊಡ್ಡ ಸೌರಶಕ್ತಿ ಘಟಕಕ್ಕೆ ಸಿಎಂ ಭೇಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಜಿಲ್ಲೆಯ ತಿರುಮಣಿಯಲ್ಲಿ ಸ್ಥಾಪಿಸಿರುವ ವಿಶ್ವದ ಅತಿ ದೊಡ್ಡ, ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಚಿವರಾದ ಡಿ‌ ಕೆ ಶಿವಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ವಧರ್ಮೀಯರ ಪುನೀತ ಯಾತ್ರೆಗೆ ಸಿಎಂ ಚಾಲನೆ

ಅಗ್ಗದ ದರದಲ್ಲಿ ಸರ್ವಧರ್ಮೀಯರ ಧಾರ್ಮಿಕ, ಪಾರಂಪರಿಕ, ತಿಹಾಸಿಕ ಸ್ಥಳಗಳ ದರ್ಶನ ಮಾಡಿಸುವ ಪ್ರವಾಸೋಧ್ಯಮ ಇಲಾಖೆಯ ವಿನೂತನ ಯೋಜನೆ ‘ಪುನೀತ ಯಾತ್ರೆಗೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದ್ದಾರೆ.

ರಾಜ್ಯದ ಸಣ್ಣ ರೈತರಿಗೆ ‘ಕಿಟ್ ಭಾಗ್ಯ’ ಹೊಸ ಕಾರ್ಯಕ್ರಮ ಜಾರಿ

ಕೃಷಿ ಭಾಗ್ಯ ಯೋಜನೆಯಡಿ ರಾಜ್ಯದ ಎರಡು ಸಾವಿರ ಸಣ್ಣ ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆ ಮಾಡುವ ಹೊಸ ಕಾರ್ಯಕ್ರಮ ಜಾರಿಗೊಳಿಸುವ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.