ಇಂದು ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಸಚಿವ ಹೆಚ್ ಕೆ ಪಾಟೀಲ್ ಮೋಡ ಬಿತ್ತನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಸಚಿವರಾದ ಕೃಷ್ಣ ಬೈರೇಗೌಡ , ಎಂ ಆರ್ ಸೀತಾರಾಮ್ , ಮೋಡ ಬಿತ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕರ್ನಾಟಕದಲ್ಲಿ ಮೋಡ ಬಿತ್ತನೆಗಾಗಲಿ ಮೋಡಬಿತ್ತನೆಗಾಗಿ ಯಾದಗಿರಿ ಜಿಲ್ಲೆ ಸುರಪೂರ, ಗದಗ ಹಾಗೂ ಬೆಂಗಳೂರಿನಲ್ಲಿ 3-ರೆಡಾರ್ಗಳನ್ನು ಸ್ಥಾಪಿಸಿ ಮೋಡ ಬಿತ್ತನೆ ಮಾಡಲಾಗುತಿದ್ದೆ .
ಮೋಡ ಬಿತ್ತನೆ ಎಂದರೇನು ?
“ಒಂದರಿಂದ ಹತ್ತು ಮೈಕ್ರಾನ್ ಗಾತ್ರದ ಮಳೆಹನಿಗಳನ್ನು ಕನಿಷ್ಠ 50 ಮೈಕ್ರಾನ್ ಗಾತ್ರಕ್ಕೆ ಹೆಚ್ಚಿಸುವ ಮೂಲಕ ಸಣ್ಣ-ಪುಟ್ಟ ಹನಿಗಳು ಗಾಳಿಯಿಂದ ಚಲಿಸಿ ಹೋಗದಂತೆ ತಡೆದು ಮಳೆಯ ಪ್ರಮಾಣವನ್ನು ಹೆಚ್ಚಿಸುವ ಮತ್ತು ಮೋಡಗಳಲ್ಲಿ ತೇವಾಂಶವಿದ್ದಾಗಲೂ ಮಳೆ ಬಾರದ ಸ್ಥಿತಿ ಉಂಟಾದಾಗ ತೇವಾಂಶವನ್ನು ಹನಿಯಾಗಿ ಪರಿವರ್ತನೆಗೊಳಿಸುವ ವೈಜ್ಞಾನಿಕವಾಗಿ ಪ್ರೇರೇಪಿಸುವ ತಂತ್ರಜ್ಞಾನವೇ ಮೋಡಬಿತ್ತನೆ.
ಆಧ್ಯತೆ ಮತ್ತು ಮುನ್ಸೂಚನೆ ಆಧರಿಸಿ ಸಂಭಾವಿತ ಮಳೆ ಸಂಭವಿಸುವ ಸಾಮಥ್ರ್ಯವಿರುವ ಮೋಡಗಳು ಲಭ್ಯವಿರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗುವುದು.