ಕೃಷ್ಣಾ ನದಿಗೆ ಸಿಎಂ ಬಾಗಿನ ಅರ್ಪಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಜಲಸಂಪನ್ಮೂಲ ಸಚಿವರಾದ ಎಂ ಬಿ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು Advertisements

ಬರಮುಕ್ತ ಭಾರತ ಸಮಾವೇಶದಲ್ಲಿ ಸಿಎಂ

ಬರಮುಕ್ತ ಭಾರತಕ್ಕಾಗಿ ವಿಜಯಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಲ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡಿದರು. ವಿಜಯಪುರದಲ್ಲಿ ಬರ ಮುಕ್ತಕ್ಕಾಗಿ ಭಾರತ ಕುರಿತು ರಾಷ್ಟ್ರೀಯ ಜಲ ಸಮಾವೇಶ ಸಮಾರೋಪ ಸಮಾರಂಭ ನಡೆಯುತ್ತಿದೆ. ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲತಜ್ಞ ಡಾ. ರಾಜೇಂದ್ರಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ಹಜ್ ಯಾತ್ರಾರ್ಥಿಗಳಿಗೆ ಶುಭ ಕೋರಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಜ್ ಯಾತ್ರಾರ್ಥಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಆಟೋ ರಿಕ್ಷಾಗಳನ್ನು ವಿತರಿಸಿದರು.