ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ:ಸಿಎಂ

ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರ ಅನುಕೂಲಕ್ಕಾಗಿ ಮೈಸೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಉದ್ಯೋಗ ಮೇಳದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ಭಾಗವಹಿಸಲಿದ್ದಾರೆ. ಮೇಳದಲ್ಲಿ ಯುವ ಸಮೂಹ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಿವೆ. ಅಲ್ಲಿ ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿಯವರು ಹೇಳಿದರು. … More ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ:ಸಿಎಂ

ಕಾವೇರಿ ಕಣಿವೆಯ ಕರೆ, ಕಟ್ಟೆಗಳಿಗೆ ನಾಳೆಯಿಂದಲೇ ನೀರು:ಸಿಎಂ

ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕಾವೇರಿ ಕಣಿವೆಯ ಕೆರೆ, ಕಟ್ಟೆಗಳನ್ನು ತುಂಬಿಸಲಾಗುವುದು. ಇದಕ್ಕಾಗಿ ನಾಲ್ಕು ಜಲಾಶಯಗಳಿಂದ ನಾಳೆಯಿಂದಲೇ (ಆಗಸ್ಟ್ 10) ನೀರು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕರೆದಿದ್ದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು ಈ ವಿಷಯ ತಿಳಿಸಿದರು. ಕುಡಿಯುವ ನೀರಿಗೆ ಮತ್ತು ಅಂತರ್ಜಲ ಮಟ್ಟ … More ಕಾವೇರಿ ಕಣಿವೆಯ ಕರೆ, ಕಟ್ಟೆಗಳಿಗೆ ನಾಳೆಯಿಂದಲೇ ನೀರು:ಸಿಎಂ

ಕೇರಳದಲ್ಲಿ ಕನ್ನಡ-ಬೆಂಗಳೂರಿನಲ್ಲಿ ಮಲಯಾಳಂ ಚಲನ ಚಿತ್ರೋತ್ಸವ

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಕೇರಳದ ತಿರುವನಂತಪುರಂನಲ್ಲಿ ಕನ್ನಡ ಮತ್ತು ಬೆಂಗಳೂರಿನಲ್ಲಿ ಮಲಯಾಳಂ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್ ಬಿ ದಿನೇಶ್ ಅವರು ತಿಳಿಸಿದ್ದಾರೆ.   ಮಲಯಾಳಂ ಚಿತ್ರೋತ್ಸವವನ್ನು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದ್ದು ಆಗಸ್ಟ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಒಟ್ಟು 8 ಮಲಯಾಳಂ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆಗಸ್ಟ್ … More ಕೇರಳದಲ್ಲಿ ಕನ್ನಡ-ಬೆಂಗಳೂರಿನಲ್ಲಿ ಮಲಯಾಳಂ ಚಲನ ಚಿತ್ರೋತ್ಸವ

ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ

ಡೆಂಗ್ಯೂ: ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ, ನನ್ನ ಈ ಸಣ್ಣ ಬರವಣಿಗೆ ಬಹುಶಃ ನಿಮಗೆ ದಾರಿದೀಪವಾಗಬಹುದು. ಒಮ್ಮೆ ಕಣ್ಣಾಡಿಸಿ ನನ್ನ ನಲ್ಮೆಯ ಸ್ನೇಹಿತರೆ…. ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ ಮತ್ತು ನಗರಾಡಳಿತ ಮತ್ತು ಆರೋಗ್ಯ ಇಲಾಖೆಯ ಸಮರೋಪಾದಿ ಜವಾಬ್ದಾರಿಯಿಂದ ಮಾತ್ರ ರೋಗ ತಡೆ ಸಾಧ್ಯ. ಆದುದರಿಂದ ನಾವೆಲ್ಲ ಒಟ್ಟಾಗಿ ಕೈ ಜೋಡಿಸಿ ಈ ಮಹಾಮಾರಿಯನ್ನ ತಡೆಯೋಣ ಬನ್ನಿ ಸ್ನೇಹಿತರೆ. ಡೆಂಗ್ಯೂ ಎಂದರೆ ಏನು? ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ … More ಡೆಂಗ್ಯೂ ಭಯ ಬೇಡ ಇರಲಿ ಎಚ್ಚರ

ಹಜ್ ಯಾತ್ರೆ ಸುಗಮಕ್ಕೆ ಕ್ರಮ:ಸಿಎಂ

ಹಜ್ ಯಾತ್ರೆ ವೇಳೆ ಕಸ್ಟಮ್ಸ್, ಇಮಿಗ್ರೇಷನ್ ವಿಷಯದಲ್ಲಿ ಆಗುತ್ತಿರುವ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು, ಈ ಸಂಬಂಧ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಕ್ಫ್ ಮಂಡಳಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದರು. ಸಚಿವ ರೋಷನ್ ಬೇಗ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಭೇಟಿಯಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ನಿಯೋಗಕ್ಕೆ ಭರವಸೆ ನೀಡಿದರು.  

ಕಾವೇರಿ ನೀರು ಬಿಡುಗಡೆ ಸಿಎಂ ಸಭೆ

ಕಾವೇರಿ ನದಿ ನೀರಿನ ವಿಷಯ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರ ಸಭೆ ನಡೆಯುತ್ತಿದೆ. ಸಚಿವರುಗಳಾದ ಎಂ ಬಿ ಪಾಟೀಲ್, ಕೃಷ್ಣಪ್ಪ, ಕೃಷ್ಣ ಬೈರೇಗೌಡ ಸಭೆಯಲ್ಲಿ ಉಪಸ್ಥಿತರಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯುತ್ತಿದೆ.