ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆಗಳ ನಿರ್ಮಾಣ:ಮುಖ್ಯಮಂತ್ರಿ ಘೋಷಣೆ

ರಾಜೇಂದ್ರ ನಗರದ ಕೊಳಗೇರಿ ನಿವಾಸಿಗಳಿಗೆ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಫಲಾನುಭವಿಗಳಿಗೆ ಸಬ್ಸಿಡಿಯಾಗಿ 4.50 ಲಕ್ಷ ರೂ. ನೀಡಲು ಮತ್ತು ಉಳಿದ 50 ಸಾವಿರ ರೂ.ಗಳನ್ನು ಅವರೇ ಭರಿಸಬೇಕು ಎಂಬ ತೀರ್ಮಾನವಾಗಿತ್ತು. ಆದರೆ ಈಗ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಿದೆ. ಫಲಾನುಭವಿಗಳ ಪಾಲಿನ ಹಣವನ್ನು ಎಸ್‍ಸಿಪಿ, ಟಿಎಸ್‍ಪಿ ಕಾಯಿದೆ ಅನುದಾನದಲ್ಲಿ ಭರಿಸಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಕೊಳೆಗೇರಿ ನಿವಾಸಿಗಳಿಗೆ ತಲಾ 10 ಸಾವಿರ ಲೀಟರ್ ಕುಡಿಯುವ ನೀರನ್ನು … More ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆಗಳ ನಿರ್ಮಾಣ:ಮುಖ್ಯಮಂತ್ರಿ ಘೋಷಣೆ

3 ತಿಂಗಳಲ್ಲಿ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳು ಪೂರ್ಣ:ಸಿಎಂ

ನಗರದಲ್ಲಿ ನಾವು 729 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇವೆ. ಎಂಟು ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮುಖ್ಯವಾಗಿ ಮೆಟ್ರೋ ರೈಲ್ವೆ ನಿಲ್ದಾಣ ಇರುವ ಕಡೆ ಪಾದಚಾರಿ ಮಾರ್ಗಗಳು ಸುರಕ್ಷಿತವಾಗಿ ಇರಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾಗಿರಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಮತ್ತಿತರ 8 ಕಡೆ ಬಿಬಿಎಂಪಿ ಮತ್ತು ಬಿಎಂಆರ್‍ಸಿಎಲ್ ಜಂಟಿ ಅನುದಾನದಲ್ಲಿ … More 3 ತಿಂಗಳಲ್ಲಿ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳು ಪೂರ್ಣ:ಸಿಎಂ

ವರ್ಷಾಂತ್ಯ ಅಭಿವೃದ್ದಿ ಕಾಮಗಾರಿಗಳು ಪೂರ್ಣ-ಸಿಎಂ

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರದಲ್ಲಿ 7300 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರ ಪ್ರದಕ್ಷಿಣೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಮಹಾನಗರಕ್ಕೆ ಹೊಸ ರೂಪ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೊಸ ಸ್ವರೂಪ: ಬಿಬಿಎಂಪಿ ಈ ಪ್ರಮಾಣದಲ್ಲಿ ಸರ್ಕಾರ ಅನುದಾನ ಒದಗಿಸಿದ ಉದಾಹರಣೆ … More ವರ್ಷಾಂತ್ಯ ಅಭಿವೃದ್ದಿ ಕಾಮಗಾರಿಗಳು ಪೂರ್ಣ-ಸಿಎಂ

ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್ ಆರಂಭ:ಸಿಎಂ ಘೋಷಣೆ

ಬೆಂಗಳೂರು ನಗರದ 125 ವಾರ್ಡ್ ಗಳಲ್ಲಿ ಆಗಸ್ಟ್ 16 ರಂದು ಇಂದಿರಾ ಕ್ಯಾಂಟೀನ್ ಗಳಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯ 198ವಾರ್ಡುಗಳಲ್ಲಿ ಈ ವರ್ಷದ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಪ್ರತಿ ವಾರ್ಡಿಗೊಂದರಂತೆ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡುವಂತೆ ಘೋಷಣೆ ಮಾಡಲಾಗಿತ್ತು. ಈ ಪೈಕಿ 125 ಕ್ಯಾಂಟೀನ್ ಗಳು ಆ.16 ರಂದು ಉದ್ಘಾಟನೆಯಾಗಲಿವೆ, ಉಳಿದವುಗಳು ಅಕ್ಟೋಬರ್ 2 ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇಂದಿರಾ ಕ್ಯಾಂಟೀನ್ ಗಳಲ್ಲಿ ಪ್ರತಿದಿನ … More ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್ ಆರಂಭ:ಸಿಎಂ ಘೋಷಣೆ

ಸಿಎಂ ನಗರ ಪ್ರದಕ್ಷಿಣೆಯ ಆಲ್ಬಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ವಿವಿಧ ಕಾಮಗಾರಿಗಳನ್ನು ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ವೀಕ್ಷಿಸಿದರು. ಈ ಕುರಿತ ಆಲ್ಬಂ ಇಲ್ಲಿದೆ.  

ಸಿಎಂ ನಗರ ಪ್ರದಕ್ಷಿಣೆ

ನಗರ ಪ್ರದಕ್ಷಿಣೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ ಎಸ್ ಆರ್ ಬಡಾವಣೆಯ ಉದ್ಯಾನವನ ಕಾಮಗಾರಿಯನ್ನು ವೀಕ್ಷಿಸಿದರು. ಸಚಿವರಾದ ಕೆ ಜೆ ಜಾರ್ಜ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಕನಕ ಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪ್ರಗತಿಯನ್ನು ನಗರ ಪ್ರದಕ್ಷಿಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸಿದರು. ಸಚಿವರಾದ ರಾಮಲಿಂಗಾ ರೆಡ್ಡಿ, ಕೆ ಜೆ ಜಾರ್ಜ್ ಈ ಸಂದರ್ಭದಲ್ಲಿ ಹಾಜರಿದ್ದರು. ನಗರ ಪ್ರದಕ್ಷಿಣೆ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಕುಶಲ ಮಳಿಗೆಗೆ ಭೇಟಿ ನೀಡಿ ಕುತೂಹಲದಿಂದ … More ಸಿಎಂ ನಗರ ಪ್ರದಕ್ಷಿಣೆ

ಸಿಎಂ ನಗರ ಪ್ರದಕ್ಷಿಣೆ ಈ ಸಂದರ್ಭದ ವಿಡಿಯೊ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಈ ಸಂದರ್ಭದ ವಿಡಿಯೊ ಇಲ್ಲಿದೆ.