ಬೆಳೆದಿದೆ ನೋಡಾ ಬೆಂಗಳೂರು ನಗರ

ಲಾಲ್ ಬಾಗ್ ಅಂಗಳದಲ್ಲಿಗ ಫಲಪುಷ್ಪ ಸಂಭ್ರಮದ ಸೊಬಗು ಕಣ್ಮನ ಸೆಳೆಯಲು ಸಜ್ಜಾಗುತ್ತಿದೆ. ಆಗಸ್ಟ್ 4, 2017 ರಿಂದ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದು ಕೊಂಡಿರುವ ಫಲ ಪುಷ್ಪ ಪ್ರದರ್ಶನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಬೆಳೆದಿದೆ ನೋಡಾ ಬೆಂಗಳೂರು ನಗರ’ ಶೀರ್ಷಿಕೆಯಡಿ ಛಾಯಾಚಿತ್ರ ಪ್ರದರ್ಶನ ವ್ಯವಸ್ಥೆಗೊಳಿಸಿದೆ. ಬೆಂಗಳೂರು ನಗರ ಬೆಳೆದು ಬಂದ ಬಗೆ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ಸರ್ಕಾರದ ಜನಪರ ಜನಪ್ರಿಯ ಯೋಜನೆಗಳ ಕುರಿತು ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರಚಾರ ಮಾಡಲಾಗುತ್ತಿದೆ.   Advertisements

ಬರ, ತುರ್ತು ನೆರವಿಗೆ ಕೇಂದ್ರಕ್ಕೆ ಮನವಿ

ರಾಜ್ಯದಲ್ಲಿ ಭೀಕರ ಕ್ಷಾಮದ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ತುರ್ತು ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತ ಪತ್ರಿಕಾ ವರದಿ.

ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕ ತೆರವು

ಮೆಟ್ರೋ ನಿಲ್ಧಾಣಗಳಲ್ಲಿ ಹಿಂದಿ ನಾಲಫಲಕ ತೆರವಿಗೆ ಆಗ್ರಹಿಸಿ ನಡೆದಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮೆಟ್ರೋ ನಿಲ್ಧಾಣಗಳ ನಾಮಫಕಲಕಗಳಿಂದ ಹಿಂದಿ ಔಟ್ ಆಗಿದ್ದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ನಾಮಫಲಕಗಳು ಮಾತ್ರ ಇವೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೋ ನಿಲ್ಧಾಣಗಳಲ್ಲಿ ಹಿಂದಿ ಬಳಸಲಾಗದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು. ಈ ಕುರಿತ ಪತ್ರಿಕ ವರದಿ ಇಲ್ಲಿದೆ.

ದಸರಾ ಉತ್ಸವಕ್ಕೆ ಗೋಲ್ಡನ್ ಚಾರಿಯಟ್ ರೈಲು

ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಆಚರಣೆಗೆ ಮತ್ತೊಂದು ಮೆರುಗು ನೀಡಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ರಾಜಧಾನಿ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಗೋಲ್ಡನ್ ಚಾರಿಯಟ್ ರೈಲು ಸಂಚರಿಸಲಿದೆ. ಈ ಕುರಿತ ಪತ್ರಿಕಾ ವರದಿ.