ನಿರ್ದೇಶಕರಿಂದ ಇಲಾಖೆಯ ಪ್ರಗತಿ ಪರಿಶೀಲನೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಡಾ. ಪಿ ಎಸ್ ಹರ್ಷ ಅವರು ಇಂದು ವಾರ್ತಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ನಿರ್ದೇಶಕರು ಸಭೆಯಲ್ಲಿ ಇಲಾಖೆಯ ಕಾರ್ಯ ಚಟುವಟಿಕೆಗಳ ವಿವರ ಪಡೆದು, ಪ್ರಗತಿ ಪರಿಶೀಲನೆ ನಡೆಸಿದರು. Advertisements

ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ

ಆಗಸ್ಟ್ 4 ರಿಂದ ಲಾಲ್‍ಬಾಗ್‍ನಲ್ಲಿ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಈ ಬಾರಿಯ ಫುಪುಷ್ಪ ಪ್ರದರ್ಶನ ಸಂಪೂರ್ಣವಾಗಿ ರಾಷ್ಟ್ರಕವಿ, ರಸಋಷಿ ಕುವೆಂಪು ಮಯವಾಗಲಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.  

ಚಲನಚಿತ್ರ ಅಕಾಡೆಮಿಯ ಸಿನಿ ಸಂಭ್ರಮ

ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಮೂರು ದಿನಗಳ `ಸಿನಿ ಸಂಭ್ರಮ’ ಚಲನಚಿತ್ರೋತ್ಸವ ಮತ್ತು ಸಂವಾದ ಕಾರ್ಯಕ್ರಮದ ಪತ್ರಿಕಾ ವರದಿ ಇಲ್ಲಿದೆ.

ನಿರ್ದೇಶಕರಿಗೆ ಅಭಿನಂದನೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ನಿರ್ದೇಶಕರಾದ ಡಾ ಪಿಎಸ್ ಹರ್ಷ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿಯಾಗಿ ನೂತನ ನಿರ್ದೇಶಕರಿಗೆ ಶುಭಾಷಯ ಕೋರಿದರು. ಜೊತೆಗೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದರು.

ಪಕ್ಷಿಧಾಮವಾಯಿತು ಪುಟ್ಟೇನಹಳ್ಳಿ ಕೆರೆ

ಬೆಂಗಳೂರು ನಗರದ ಪುಟ್ಟೇನಹಳ್ಳಿ ಕೆರೆ ಈಗ ಪಕ್ಷಿಧಾಮವಾಗಿ ರೂಪುಗೊಂಡಿದೆ. 125 ಬಗೆಯ ಪಕ್ಷಿಗಳು ಇಲ್ಲಿ ಕಾಣ ಸಿಗುತ್ತಿವೆ. ಪುಟ್ಟೇನಹಳ್ಳಿ ಕೆರೆಯನ್ನು ಸರ್ಕಾರ 12.56ಕೋಟಿ ರೂಪಾಯಿ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿದೆ.

ಕನ್ನಡ ಕಡ್ಡಾಯ

ಸಾರ್ವಜನಿಕ ವಲಯದ ಆಡಳಿತ ಮತ್ತು ವ್ಯವಹಾರದಲ್ಲಿ ಸಮರ್ಪಕವಾಗಿ ಕನ್ನಡ ಅನುಷ್ಠಾನಗೊಳಿಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ಮುಂದಾಗಿದೆ. ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯ ಕಲಿಕೆ ಕಡ್ಡಾಯಗೊಳಿಸುವ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.