ಸೋಶಿಯಲ್ ಮೀಡಿಯಾ ಹಬ್ ಗೆ ನೂತನ ನಿರ್ದೇಶಕರ ಭೇಟಿ

ವಾರ್ತಾ ಇಲಾಖೆಯ ನೂತನ ನಿರ್ಧೇಶಕರಾಗಿ ಅಧಿಕಾರ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಡಾ ಪಿ ಎಸ್ ಹರ್ಷ ಇಲಾಖೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಕೊಂಡರು.ನಿರ್ದೇಶಕ ಹರ್ಷ ಅವರೊಂದಿಗೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಹೆಚ್ ಬಿ ದಿನೇಶ್, ಪ್ರಕಾಶ್ ಹಾಜರಿದ್ದರು   Advertisements

ಎಲ್ ಇ ಡಿ ಯಲ್ಲಿ ಪ್ರಗತಿ ಮಾಹಿತಿ

  ರಾಜ್ಯ ಸರ್ಕಾರದ ಜನಪರ ಜನಪ್ರಿಯ ಯೋಜನೆಗಳ ಕುರಿತು ಜನ ಜಾಗೃತಿಗಾಗಿ ವಿಶೇಷ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಗದಗ ಜಿಲ್ಲೆಯ ಬಟ್ಟೂರ ಗ್ರಾಮದಲ್ಲಿ ನಡೆಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಎರಡನೇ ಹಂತದ ಪ್ರಗತಿ ಮಾಹಿತಿಯನ್ನು ಎಲ್ ಇ ಡಿ ವಾಹನದಲ್ಲಿ ಪ್ರದರ್ಶಿಸಿತು.  

ನ್ಯಾಯ ಬೆಲೆ ಅಂಗಡಿಗಳಲ್ಲಿ ಇ – ಗೌರ್ನೆನ್ಸ್

ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ರೇಷನ್ ಜೊತೆಗೆ ಮೊಬೈಲ್ ರೀಚಾರ್ಜ್, ಬಸ್, ವಿಮಾನ ಹಾಗೂ ರೈಲು ಟಿಕೆಟ್ ಬುಕ್ಕಿಂಗ್, ವಿದ್ಯುತ್ ಬಿಲ್‍ ಪಾವತಿ, ಝೆರಾಕ್ಸ್ ಸೌಲಭ್ಯಗಳು ಲಭ್ಯವಿರಲಿವೆ.

ರಾಷ್ಟ್ರ ಕವಿಗೆ ಫಲಪುಷ್ಪ ನಮನ

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷ ಸಂದಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವ ಸಲ್ಲಿಸಲು ತೋಟಗಾರಿಕಾ ಇಲಾಖೆ ಸಜ್ಜಾಗಿದೆ . ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‍ಬಾಗ್‍ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಸಂಪೂರ್ಣವಾಗಿ ರಾಷ್ಟ್ರಕವಿ ಕುವೆಂಪು ಮಯವಾಗಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ನಾಡ ಹಬ್ಬಕ್ಕೆ ಆಕಾಶ ಅಂಬಾರಿಯ ಮೆರಗು

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ `ಆಕಾಶ ಅಂಬಾರಿ’ಯ ಮೆರಗು ಸಿಗಲಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸಿಗರನ್ನು ಕರೆ ತರಲು ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ಧಾಣದಿಂದ ಆಕಾಶ ಅಂಬಾರಿ ಮೈಸೂರು ದಸರಾ ಉತ್ಸವಕ್ಕೆ ಸಾಗಲಿದೆ. ಸೆಪ್ಟೆಂಬರ್ ೨೧ರಿಂದ  ೩೦ರವರೆಗೆ  ನಾಡ ಹಬ್ಬ ದಸರಾದ ನಡೆಯಲಿದೆ.

ವಿಮಾನ ನಿಲ್ದಾಣಕ್ಕೆ ಉಪ ನಗರ ರೈಲು

  ಬೆಂಗಳೂರು ನಗರದಲ್ಲಿ ಉಪನಗರ ರೈಲು ಯೋಜನೆ ಜಾರಿಗೆ  ತರಲು ಸಿದ್ಧತೆ ನಡೆಸಲಾಗುತ್ತಿದೆ. ಯಶವಂತಪುರ ರೈಲು ನಿಲ್ಧಾಣದಿಂದ ಕೆಂಪೇಗೌಡ ವಿಮಾನ ನಿಲ್ಧಾಣವನ್ನು ಸಂಪರ್ಕಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ .