ಸೆ21 ರಿಂದ 30 ರವರೆಗೆ ಸಾಂಪ್ರದಾಯಿಕ ಮೈಸೂರು ದಸರಾ ಆಚರಣೆ

ಮೈಸೂರು ದಸರಾ ಮಹೋತ್ಸವ 2017ರ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾದ ಗಜಪಯಣ ಆಗಸ್ಟ್ 14 ರಂದು ಆರಂಭವಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಹೇಳಿದರು. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಗಸ್ಟ್ 17 ರಂದು ಮೈಸೂರು ನಗರದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುವುದು. ಗಜಪಯಣ ಕಾರ್ಯಕ್ರಮವನ್ನು ಈ ವರ್ಷ ಜನಾಕರ್ಷಕವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು. … More ಸೆ21 ರಿಂದ 30 ರವರೆಗೆ ಸಾಂಪ್ರದಾಯಿಕ ಮೈಸೂರು ದಸರಾ ಆಚರಣೆ

ಮೈಸೂರು ದಸರ ಹಬ್ಬಕ್ಕೆ ಶಾಶ್ವತ ಲಾಂಛನ- ಪತ್ರಿಕಾ ವರದಿ

ಮೈಸೂರು ದಸರ ಹಬ್ಬದ ಸಿದ್ದತೆ , ಪ್ರಚಾರ ಹಾಗೂ ಕಾರ್ಯಕ್ರಮಗಳ ಆಯೋಜನೆಗಾಗಿ ರಾಜ್ಯ ಸರ್ಕಾರ ಶಾಶ್ವತ ಲಾಂಛನವನ್ನು ಬಿಡುಗಡೆಗೊಳಿಸಿದೆ. ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಲಾಂಛನವನ್ನು ಅನಾವರಣಗೊಳಿಸಿದರು. ಈ ಕುರಿತ ವರದಿ ಕನ್ನಡ ಪತ್ರಿಕೆಗಳಲ್ಲಿ.

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ 5 ಕೋಟಿ ರೂ. ವಿಶೇಷ ಅನುದಾನ- ಕೆ.ಜೆ ಜಾರ್ಜ್

ಬಿಬಿಎಂಪಿ ವ್ಯಾಪ್ತಿಯ ಕೈಗಾರಿಕಾ ವಲಯಗಳಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ 5 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.

ವಾರ್ತಾ ಇಲಾಖೆಯ ನೂತನ ನಿರ್ದೇಶಕರಾಗಿ ಡಾ ಪಿ ಎಸ್ ಹರ್ಷ ಅಧಿಕಾರ ಸ್ವೀಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ನಿರ್ದೇಶಕರಾಗಿ ಇಂದು ಐ.ಪಿ.ಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ ಅವರು ಅಧಿಕಾರ ವಹಿಸಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ಎನ್.ಆರ್.ವಿಶುಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.   ಈ ಸಂದರ್ಭದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳಾದ ಎಂ. ರವಿಕುಮಾರ್, ಪಿ.ಎನ್. ಗುರುಮೂರ್ತಿ, ಹೆಚ್.ಬಿ. ದಿನೇಶ್, ಎ.ಆರ್. ಪ್ರಕಾಶ್, ಬಸವರಾಜ ಕಂಬಿ, ದೇವರಾಜಯ್ಯ ಸೇರಿದಂತೆ ಅನೇಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಡಾ.ಪಿ.ಎಸ್. ಹರ್ಷ ಅವರು ಇಲಾಖೆ … More ವಾರ್ತಾ ಇಲಾಖೆಯ ನೂತನ ನಿರ್ದೇಶಕರಾಗಿ ಡಾ ಪಿ ಎಸ್ ಹರ್ಷ ಅಧಿಕಾರ ಸ್ವೀಕಾರ

ಹಿಂದಿ ಇಲ್ಲದ ಹೊಸ ಬೋರ್ಡ್ ಹಾಕುವಂತೆ ಸಿಎಂ ಸೂಚನೆ

ಮೆಟ್ರೋ ನಿಲ್ಧಾಣಗಳಲ್ಲಿ ಹಿಂದಿ ಇಲ್ಲದ ಹೊಸ ನಾಮಫಲಕಗಳನ್ನು ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಎಮ್ಆರ್ ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಪತ್ರಿಕಾ ವರದಿ ಹೀಗಿದೆ.