ಡಾ ಬಿ ಆರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ – 2017 

ಜುಲೈ 21 ರಿಂದ 23ರವರೆಗೆ ಒಟ್ಟು 3 ದಿನಗಳ ಕಾಲ ನಗರದ ಜಿಕೆವಿಕೆ ಆವರಣದಲ್ಲಿ “ಸಾಮಾಜಿಕ ನ್ಯಾಯ ಮರುಸ್ಥಾಪನೆ ಹಾಗೂ ಅಂಬೇಡ್ಕರ್ ಪುನಾರಾವಲೋಕನ” ವಿಷಯ ಕುರಿತು ಡಾ ಬಿ ಆರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದರು.

ಇಂದು ಸಮ್ಮೇಳನದ ಪೂರ್ವಭಾವಿ ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಸಮ್ಮೇಳನದಲ್ಲಿ 83 ಅಂತರರಾಷ್ಟ್ರೀಯ , 149 ರಾಷ್ಟ್ರೀಯ ಹಾಗೂ 80 ರಾಜ್ಯ ಮಟ್ಟದ ವಿವಿಧ ರಂಗದ ವ್ಯಕ್ತಿಗಳು ಸ್ಪೀಕರ್‍ ಗಳಾಗಿ ಒಟ್ಟು 300 ಜನ ಭಾಗವಹಿಸಲಿದ್ದಾರೆ. 2000 ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ.

ಕಾರ್ಯಕ್ರಮಕ್ಕಾಗಿ ಆರು ಕಡೆ 12 ರೌಂಡ್ ಟೇಬಲ್‍ಗಳನ್ನು ನಿರ್ಮಿಸಲಾಗಿದ್ದು, ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಹಾಗೂ ಮುಖ್ಯವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಸಾರ್ವಜನಿಕರು ಕಾರ್ಯಕ್ರಮವನ್ನು ವೀಕ್ಷಿಸಲು ಅನುವಾಗುವಂತೆ ಹೊರಗಡೆ ಎಲ್‍ಇಡಿ ವ್ಯವಸ್ಥೆ ಮಾಡಲಾಗಿದ್ದು, ಭಾರತದ ಇತಿಹಾಸದಲ್ಲಿ ಮೈಲುಗಲ್ಲಾಗಿರುವ ಕಾರ್ಯಕ್ರಮವನ್ನಾಗಿ ಮಾಡುತ್ತೇವೆ ಎಂದು
ಸಚಿವರು ಹೇಳಿದರು. ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್‍ ಅವರ 126ನೇ ವರ್ಷಾಚರಣೆ ಪ್ರಯುಕ್ತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆಯಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s