ಏನಿದು ಪಶುಭಾಗ್ಯ ಯೋಜನೆ?

animal2ಕರ್ನಾಟಕ ಸರ್ಕಾರ ರೈತಾಪಿ ಜನರ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿದೆ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

blogger.com_

ಗ್ರಾಮೀಣ ಪ್ರದೇಶಗಳಲ್ಲಿ ಪಶು ಸಂಗೋಪನೆ ರೈತರ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿದೆ.

 

 

ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ. 1.20 ಲಕ್ಷದವರೆಗೆ ಸಾಲ ಒದಗಿಸಿ ಹಸು, ಹಂದಿ, ಕೋಳಿ, ಆಡು, ಕುರಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ.

kashmirlife

ಈ ಯೋಜನೆಯಡಿ ಎರಡು ಹಸುಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ರೂ. 1.20 ಲಕ್ಷ ಘಟಕ ವೆಚ್ಚ ನಿಗದಿಯಾಗಿದೆ. 4 ಹಂದಿ ಸಾಕಣೆಗೆ ನೀಡಲಾಗುತ್ತಿದ್ದು, ರೂ. 94 ಸಾವಿರ ಘಟಕ ವೆಚ್ಚವಾಗಿದೆ. ಆಡು ಸಾಕಣೆಯಲ್ಲಿ 11 ಆಡುಗಳನ್ನು ನೀಡಲಾಗುತ್ತಿದ್ದು, ರೂ. 67,440 ಘಟಕ ವೆಚ್ಚ ಒದಗಿಸಲಾಗುತ್ತದೆ. ಹಾಗೆಯೇ 200 ಮಾಂಸದ ಕೋಳಿ ಸಾಕಣೆಗಾಗಿ ₹ 85 ಸಾವಿರ ಘಟಕ ವೆಚ್ಚವನ್ನು ಸರ್ಕಾರ ಭರಿಸುತ್ತದೆ.

item2

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಹಾಗೂ ಅಮೃತ್ ಯೋಜನೆಗಳು ಪಶುಭಾಗ್ಯ ಯೋಜನೆ ವ್ಯಾಪ್ತಿಗೆ ಒಳಪಡಲಿದೆ. ಅಮೃತ್ ಯೋಜನೆಯಡಿ ವಿಧವೆಯರಿಗೆ, ಅಂಗವಿಕಲ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ನಬಾರ್ಡ್ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕಾಬ್ಸೆಟ್ ನಿರ್ದೇಶಕರು, ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ಹತ್ತಿರದ ಪಶುಪಾಲನಾ ಇಲಾಖೆ ಕಚೇರಿಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ.

Screenshot008

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s