ಮುಖ್ಯಮಂತ್ರಿಗಳಿಂದ ರಂಜಾನ್ ಸಂದೇಶ

Ramdan

ಈದ್ ಉಲ್ ಫಿತರ್ ಎಂದೇ ಕರೆಯಲಾಗುವ ರಂಜಾನ್ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ, ವಿಶೇಷವಾಗಿ ಮುಸಲ್ಮಾನ ಬಾಂಧವರಿಗೆ, ಶುಭ ಹಾರೈಸಿದ್ದಾರೆ.

Siddaramaiah1

ಒಂದು ತಿಂಗಳ ಉಪವಾಸ ವ್ರತದ ಮೂಲಕ ಮನಃಶುದ್ಧಿ ಹಾಗೂ ದೇಹ ಶುದ್ಧಿಗೆ ಪೂರಕವಾಗುವ ರಂಜಾನ್‍ನ ಆಚರಣೆಗಳು ವಿಶಿಷ್ಠ ಮತ್ತು ವಿಭಿನ್ನ. ಉಪವಾಸ ವ್ರತದ ಅಂತ್ಯದಲ್ಲಿ ಆಚರಿಸುವ ರಂಜಾನ್ ಹಬ್ಬದಲ್ಲಿ ಉಳ್ಳವರು ಇಲ್ಲದವರಿಗೆ ಆಹಾರ-ವಸ್ತ್ರ ಕೊಡುಗೆಗಳನ್ನು ಕೊಟ್ಟು ಸಂಭ್ರಮಿಸುವುದು ಹಬ್ಬದ ವಿಶೇಷತೆಗಳಲ್ಲಿ ವಿಶೇಷತೆ.

ದಾನದ ಈ ಸಂಪ್ರದಾಯವು ತಾನೂ ಬದುಕುವುದರ ಜೊತೆಗೆ ಮತ್ತೊಬ್ಬರನ್ನೂ ಬದುಕಲು ಬಿಡಬೇಕು ಎಂಬುದನ್ನು ಅಭಿವ್ಯಕ್ತಿಸುವ ಶ್ರೇಷ್ಠ ಸಂದೇಶವನ್ನು ಸಾರುತ್ತದೆ.

ಒಂದೆಡೆ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತಿ ಕಂದರ ಸೃಷ್ಠಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲಿದೆ.

ಇಂತಹ ಸಂದರ್ಭದಲ್ಲಿ, ರಂಜಾನ್ ಹಬ್ಬವು ಎಲ್ಲೆಡೆ ಎಲ್ಲರಲ್ಲೂ ಸೋದರತೆ ಮತ್ತು ಸೌಹಾರ್ಧತೆ ಮೂಡಿಸಲು ಪ್ರೇರಣೆ ಹಾಗೂ ಸ್ಪೂರ್ತಿಯನ್ನೀಯಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s