ನಾಡಪ್ರಭು ಕೆಂಪೇಗೌಡ ಜಯಂತಿಯ ನೆನಪಿನಲ್ಲಿ…

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರದ ವತಿಯಿಂದ ಇದೇ ಜೂನ್ 27ರಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ.

c173138e-6926-427f-84a6-cd0635077b73ವಿಜಯನಗರ ಅರಸರ ಆಳ್ವಿಕೆ ಅವಧಿಯ ನಾಡಪ್ರಭುಗಳಲ್ಲಿ ಯಲಹಂಕ ನಾಡಪ್ರಭುಗಳದ್ದು ಗಮನಾರ್ಹ ಉಲ್ಲೇಖ. ಅವರು ವಿಜಯನಗರದ ಅರಸರಷ್ಟೇ ಪ್ರಸಿದ್ಧರಾಗಿದ್ದರು; ಜನಮಾನಸದಲ್ಲಿ ನೆಲೆಸಿದ್ದರು. ನಾಡಪ್ರಭುಗಳಾಗಿದ್ದರೂ ಸಾಮಂತರಾಗಿದ್ದರೂ ರಾಜರ ಸ್ಥಾನ ಮಾನ ಗಳಿಸಿದ್ದರು.

ಕರ್ನಾಟಕದ ಹಲವು ಸಾಮಂತರ ಮನೆತನಗಳಲ್ಲಿ ಯಲಹಂಕನಾಡು ನಾಡಪ್ರಭುಗಳ ಇತಿಹಾಸ ರೋಚಕವಾದದ್ದು. ಅವರು ಕೇವಲ ಅಧೀನ ಆಡಳಿತಗಾರರಲ್ಲ ನಾಡಪ್ರಭುಗಳು, ಸಾಮಂತರಾಜರು ಎಂದೇ ಖ್ಯಾತರಾಗಿದ್ದರು. ನಾಲ್ಕು ತಲೆಮಾರುಗಳವರೆಗೆ ಇವರು ಆಳ್ವಿಕೆ ನಡೆಸಿದರು. ಹಳೇ ಯಲಹಂಕದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಬಳಿಕ ಬೆಂಗಳೂರಿಗೆ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿದರು. ಬೆಂಗಳೂರಿನ ಕಾವಲಿಗೆ ನಾಲ್ಕು ಗೋಪುರಗಳನ್ನು ಕಟ್ಟಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.

ಕರ್ನಾಟಕ ಮೊದಲು ಗೌಡ ಪ್ರಭುಗಳ ನಾಡಾಗಿತ್ತು. ಗೌಡ ಪ್ರಭುಗಳು ಮೂಲತ: ಒಕ್ಕಲಿಗರು. ಅದು ವಾಸ್ತವ ಸತ್ಯವೂ ಹೌದು. ಈಗಿರುವ ಯಲಹಂಕವನ್ನು ಐನೂರು ವರ್ಷಗಳಿಗೂ ಮೀರಿ ಗೌಡ ದೊರೆಗಳು ಆಳ್ವಿಕೆ ನಡೆಸಿದರು ಎಂಬುದು ಈಗ ಇತಿಹಾಸ.ಅದೇ ಗೌಡ ದೊರೆಗಳ ಪೈಕಿ ಕೆಂಪೇಗೌಡ ಒಬ್ಬರು. ಕೆಂಪೇಗೌಡರ ಆಡಳಿತ ಹೆಚ್ಚು ಪ್ರಸಿದ್ಧಿ ಪಡೆದಿತ್ತು.ಬೆಂಗಳೂರು ಕೆಂಪೇಗೌಡನ ಊರು. ಬೆಂಗಳೂರೆಂದರೆ ಕೆಂಪೇಗೌಡ, ಕೆಂಪೇಗೌಡ ಎಂದರೆ ಬೆಂಗಳೂರು. ಹದಿನಾರನೇ ಶತಮಾನದಿಂದ ಕೆಂಪೇಗೌಡನ ಹೆಸರಿನೊಂದಿಗೆ ಬೆಂಗಳೂರು ಸೇರಿಕೊಂಡಿದೆ.

ಕೆಂಪೇಗೌಡರು ಬೆಂಗಳೂರು ರಕ್ಷಣೆಗಾಗಿ ಪ್ರಧಾನ ಬೆಂಗಳೂರಿನ ನಾಲ್ಕು ಕಡೆ ಕಾವಲು ಸ್ಥಳಗಳಿಗಾಗಿ ಗುರುತು ಮಾಡಿಸಿದರು. ಅವು ಪೂರ್ವಕ್ಕೆ ಹಲಸೂರು ಕೆರೆ ಏರಿಯ ಮೇಲೆ, ಪಶ್ಚಿಮಕ್ಕೆ ಕೆಂಪಾಂಬುದಿ ಕೆರೆ ಏರಿಯ ಮೇಲೆ, ಉತ್ತರಕ್ಕೆ ಹೆಬ್ಬಾಳದ ರಸ್ತೆಯ ಕಡೆ, ದಕ್ಷಿಣಕ್ಕೆ ಲಾಲಬಾಗಿನ ತೋಟದ ಬಂಡೆಯ ಮೇಲೆ ಗುರುತಾದವು. ಮುಂದೆ ಮಾಗಡಿ ಕೆಂಪೇಗೌಡ ಇವುಗಳ ಸ್ಥಳದಲ್ಲಿ ಆಳೆತ್ತರದ ಆಕರ್ಷಕ ಗೋಪುರಗಳನ್ನು ನಿರ್ಮಿಸಿದ. ಇವು ರಾಯಗೋಪುರಗಳೆಂದು ಹೆಸರಾದವು.cover ಏಕೆಂದರೆ ಅವರು ಮಾಡಿದ ಸಮಾಜ ಸೇವೆ ಹಾಗೂ ಉದಾತ್ತ ವ್ಯಕ್ತಿತ್ವದಿಂದಾಗಿ ನಾಡಪ್ರಭು ಕೆಂಪೇಗೌಡ ಅವರ ಹೆಸರು ಇತಿಹಾಸದ ಪುಟದಲ್ಲಿ ಈಗಲು ಅಚ್ಚಳಿಯದೆ ಉಳಿದಿದೆ.

ಕೆಂಪೇಗೌಡರು ತಮ್ಮ ಆಡಳಿತ ಅವಧಿ 1537ರ ಸಂದರ್ಭದಲ್ಲಿ ನಗರದಲ್ಲಿ ಗೋಪುರ, ನೂರು ಕೆರೆ, ನಂದಿ ದೇವಸ್ಥಾನ ನಿರ್ಮಿಸಿದರು. ಲಕ್ಷ್ಮಮ್ಮ ಹೆಸರಿನಲ್ಲಿ ಕಟ್ಟಿಸಿರುವ ದೇವಸ್ಥಾನ ಈಗಿರುವ ಕೋರಮಂಗಲದ 6 ನೇ ಬ್ಲಾಕ್‍ನಲ್ಲಿದೆ. ಇವರ ಉದಾತ್ತ ಸೇವೆಯಿಂದಾಗಿ ಬೆಂಗಳೂರು ನಗರದ ಹಲವೆಡೆ ಕೆಂಪೇಗೌಡ ಹೆಸರಲ್ಲಿ ರಸ್ತೆ, ಬಸ್ ನಿಲ್ದಾಣ, ಏರ್ ಪೋರ್ಟ್ ಕೆಂಪೇಗೌಡ ಎಂದು ಹೆಸರಿಡಲಾಗಿದೆ.

ಉತ್ತಮ ಆಡಳಿತಗಾರನಾಗಿ, ಬೆಂಗಳೂರು ನಿರ್ಮಾತೃವಾಗಿ ನಾಡಪ್ರಭು ಕೆಂಪೇಗೌಡ ಎಂದೆಂದಿಗೂ ಅಮರರಾಗಿರುತ್ತಾರೆ.

ಆಧಾರ: ಡಾ ಡಿ ಲಿಂಗಯ್ಯ ಅವರ ಲೇಖನದಿಂದ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s