ಯೋಗ ದಿನಾಚರಣೆ:ಏನು?ಏಕೆ?ಹೇಗೆ?ಎಲ್ಲಿ?

ಯೋಗ ದಿನಾಚರಣೆ:

2014ರ ಸಪ್ಟೆಂಬರ್ 27ರಂದು ವಿಶ್ವಸಂಸ್ಥೆ ವಿಶ್ವ ಯೋಗ ದಿನಾಚರಣೆಯನ್ನು ಘೋಷಿಸಿತು. ಭಾರತದ ಪ್ರಾಚೀನ ಕಲೆ ಯೋಗಕ್ಕೆ ಈ ಘೋಷಣೆಯ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಪೈಕಿ 177 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು.

bd6566fc-91a5-4252-9706-9eb6e1561a9a

ಯೋಗ ದಿನಾಚರಣೆ ಯಾವಾಗ?
ಸಂಯುಕ್ತ ರಾಷ್ಟ್ರ ಸಂಸ್ಥೆಯು ಜೂನ್ 21 ನ್ನು ವಿಶ್ಚಯೋಗ ದಿನ ಎಂದು ಘೋಷಣೆ ಮಾಡಿತು. 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ.

ಜೂನ್ 21 ರಂದು ಯೋಗ ದಿನಾಚರಣೆ ಏಕೆ?

ಜೂನ್ ತಿಂಗಳಲ್ಲಿ ಸೂರ್ಯನ ನಿಖರತೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಆದರೂ
ಈ ಜೂನ್ ನಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ.ಇದು ಇಷ್ಟೆ ಅಲ್ಲದೆ ಜೂನ್ 21 ಅತ್ಯಂತ ಧೀರ್ಘಕಾಲ ಹಗಲು ಹೊಂದಿರುವ ದಿನವಾದ್ದರಿಂದ ಈ ದಿನವನ್ನು ಆಯ್ಕೆ ಮಾಡಲಾಗಿದೆ.

5b79c8aa-2294-405e-9c8f-485f3ce6e3ca

ಜಗತ್ತಿನಾದ್ಯಂತ ಯೋಗ ಆಚರಣೆ ಹೇಗೆ?:

ಯೋಗ ಪ್ರದರ್ಶನಗಳನ್ನು, ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಲಂಡನ್ ಐಪಿಎಲ್ ಟವರ್ ಮುಂದೆ ಯೋಗ ಪ್ರದರ್ಶನ ನಡೆಸಲಾಗಿತ್ತು. ನವದೆಹಲಿಯ ರಾಜಪಥ್‌ ನಲ್ಲಿ 36 ಸಾವಿರ ಜನರ ಸಾಮೂಹಿಕ ಯೋಗ ಪ್ರದರ್ಶನವನ್ನು ನಡೆಸಿದರು.

ಗಿನ್ನೆಸ್ ದಾಖಲೆ ಅಂದ್ರೆ ಏನು?

ಗಿನ್ನೆಸ್ ದಾಖಲೆ ಎನ್ನವುದು ಜಗತ್ತಿನ ಎಲ್ಲಾ ಭಾಗಗಳಲ್ಲಿ ಇರುವ ವಿಶೇಷ ದಾಖಲೆಗಳನ್ನು ನಮೂದಿಸುತ್ತದೆ. ಇದು ಒಂದು ಪುಸ್ತಕ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, 1955 ರಲ್ಲಿ ಆರಂಭವಾದ ದಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ದಿನ ಯು.ಎಸ್ ಆವೃತ್ತಿಗಳಲ್ಲಿ ಉಲ್ಲೇಖಿಸಲಾಗುತ್ತದೆ. ಆವತ್ತಿನಿಂದ ಈವತ್ತಿನವರೆಗೆ ಇದು ದಾಖಲೆಗಳ ಕೈಪಿಡಿಯಾಗಿದೆ.

57c4307b-24c8-4791-919b-4376f22c4af3

ಯೋಗದಲ್ಲಿರುವ ಪ್ರಸ್ತುತ ಗಿನ್ನೆಸ್ ದಾಖಲೆಗಳು:

ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಗುಜರಾತ್’ನ ರಾಜ್’ಕೋಟ್’ನಲ್ಲಿ ಗರ್ಭಿಣಿಯರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಸರಿಸುಮಾರು 1,632 ಗರ್ಭಿಣಿ ಮಹಿಳೆಯರು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿ ಚೀನಾ ದೇಶದವರು ಹಿಂದೆ ನಿರ್ಮಿಸಿದ್ದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ನವದೆಹಲಿಯಲ್ಲಿರುವ ರಾಜಘಾಟ್‍ನಲ್ಲಿ 38ಸಾವಿರ ಮಂದಿ ಯೋಗ ಪ್ರದರ್ಶನ ನೀಡಿ ದಾಖಲೆಯನ್ನು ನಿರ್ಮಿಸಲಾಗಿತ್ತು.

703c2eec-1cfa-40ca-b9ba-f4ae0e3a4e43

ಈ ಬಾರಿ ಗಿನ್ನೆಸ್ ದಾಖಲೆ ಹೇಗೆ?

ಯೋಗ ದಿನಾಚರಣೆ ದಾಖಲೆಗೆ ಬೆಂಗಳೂರು ಮೈಸೂರು ಸಜ್ಜು-ಮೈಸೂರಿನಲ್ಲಿ 60 ಸಾವಿರ ಜನರಿಂದ ತಾಲೀಮು ಮತ್ತು ಬೆಂಗಳೂರಿನಲ್ಲಿ 3 ಸಾವಿರ ಮಂದಿಯಿಂದ ಶೀರ್ಷಾಸನ ಮಾಡಿ ನಿಲ್ಲುವ ಮೂಲಕ ದಾಖಲೆ.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s