ಕರ್ನಾಟಕ ಮತ್ತು ಯೋಗ

ALOC-yogashalapic5ಯೋಗ ಕುರಿತು ಅಷ್ಟೊಂದು ಅರಿವು ಇಲ್ಲದ ದಿನಗಳಲ್ಲಿ ಕರ್ನಾಟಕ ಯೋಗ ಪಸರಿಸುವಿಕೆಗೆ ತಳಹದಿಯನ್ನು ಹಾಕಿತು. ಪ್ರಾಚೀನ ಪರಂಪರೆಯಿರುವ ಯೋಗಾಸನ ಪದ್ದತಿಯನ್ನು ರೂಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದ ಗುರು ಪರಂಪರೆಯನ್ನು ಇತಿಹಾಸದಲ್ಲಿ ಕಾಣ ಬಹುದು. ಆಧುನಿಕ ಕಾಲದ ಚಿಕಿತ್ಸಾ ಪದ್ದತಿಗಳಿಗೂ ಮುನ್ನ ‘ಯೋಗ’ ಮೂಲಕ ಪರಿಹಾರವನ್ನು ಕಂಡು ಕೊಳ್ಳಲಾಗುತ್ತಿತ್ತು. ಇವತ್ತಿಗೂ ಸಹಾ ಸೂಕ್ತ ಆಹಾರ ಪದ್ದತಿ ಹಾಗೂ ಯೋಗ ಪದ್ದತಿಯ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳುವ ಪದ್ದತಿಯನ್ನು ಉತ್ತೇಜಿಸುವ ಆಯುಷ್ ಪದ್ದತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ.

ರಾಜ್ಯದಲ್ಲಿ ಯೋಗ ಪರಂಪರೆಗೆ ಮುನ್ನುಡಿ ಬರೆದು ಜಗತ್ತಿನಾಧ್ಯಂತ ವಿಸ್ತರಿಸಿದ ಕೀರ್ತಿ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ್ ಐಯ್ಯಂಗಾರ್ (ಬಿಕೆಎಸ್ ಐಯ್ಯಂಗಾರ್) ಅವರದ್ದು.  14ನೇ ವಯಸ್ಸಿಗೆ ಗುರುಗಳ ಸಲಹೆಯಂತೆ ಯೋಗ ಕಲಿತ ಬಿಕೆಎಸ್ ಐಯ್ಯಂಗಾರ್ ಮುಂದೆ ಅದನ್ನು ದೇಶದಾಧ್ಯಂತ ಜನಪ್ರಿಯಗೊಳಿಸಿದರು ಮತ್ತು ಜಗತ್ತಿನ ವಿವಿದೆಡೆಗೆ ಪಸರಿಸುವಂತೆ ಮಾಡಿದರು. ಯೋಗ ಮತ್ತು ಜೀವನ ಕುರಿತು ಅವರು ಬರೆದ ಪುಸ್ತಕ ಜಾಗತಿಕವಾಗಿ ಬೆಸ್ಟ್ ಸೆಲ್ಲರ್ ಎನಿಸಿದೆ. ಜಗತ್ತಿನ ಪ್ರಮುಖರು ಬಿಕೆಎಸ್ ಐಯ್ಯಂಗಾರ್ ಅವರ ಬಳಿ ಯೋಗ ಕಲಿತಿದ್ದಾರೆ. FB_IMG_1434864927155ಯೋಗ ಶಿಕ್ಷಣ ನೀಡಲು ಪತ್ನಿಯ ಹೆಸರಿನಲ್ಲಿ ಯೋಗ ಸಂಸ್ಥೆಯನ್ನು ಸಹಾ ಅವರು ಸ್ಥಾಪಿಸಿದ್ದರು. ಚೀನಾ ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿ ಇವರ ಶಿಷ್ಯರು ಇದ್ದಾರೆ, ಚೀನಾ ದೇಶ ಅಂಚೆ ಚೀಟಿಯಲ್ಲಿ ಬಿಕೆಎಸ್ ಐಯ್ಯಂಗಾರ್ ಅವರ ಚಿತ್ರವನ್ನು ಪ್ರಕಟಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಬಿಕೆಎಸ್ ಐಯ್ಯಂಗಾರ್ ಅವರ ಜನ್ಮ ದಿನವನ್ನು ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗೆ ಜಾಗತಿಕವಾಗಿ ಯೋಗವನ್ನು ಜನಪ್ರಿಯಗೊಳಿಸಿದ ಬಿಕೆಎಸ್ ಐಯ್ಯಂಗಾರ್ ಅವರನ್ನು ಆಧುನಿಕ ಯೋಗ ಪಿತಾಮಹ ಎಂದು ಕರೆಯಲಾಗುತ್ತದೆ.

 

ರಾಜ್ಯದ ಅನೇಕ ಕಡೆಗಳಲ್ಲಿ ಗುರುಕುಲ ಪದ್ದತಿಯಲ್ಲಿ ಯೋಗ ಶಿಕ್ಷಣವನ್ನು ನೀಡಲಾಗುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿಯೂ ಯೋಗ ಶಿಕ್ಷಣದ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡಲಾಗುತ್ತಿದೆ. ಕನ್ನಡದ ವರ ನಟ ಡಾ ರಾಜ್ ಕುಮಾರ್ ಅವರು ಯೋಗ ಪದ್ದತಿಯನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಶ್ರೇಷ್ಠ ದಾರ್ಶನಿಕರೆನಿಸಿದ ಜಿಡ್ಡು ಕೃಷ್ಣಮೂರ್ತಿಯವರು ಬಿಕೆಎಸ್ ಐಯ್ಯಂಗಾರ್ ಅವರ ಬಳಿ ಯೋಗ ಕಲಿತು ಅದನ್ನು ಜಗತ್ತಿನ ಪ್ರಮುಖ ವ್ಯಕ್ತಿಗಳಿಗೆ ಪರಿಚಯಿಸಲು ಕಾರಣರಾದರು. ಹೀಗೆ ಯೋಗ ಪಸರಿಸುವಿಕೆಗೆ ರಾಜ್ಯದ ಕೊಡುಗೆ ಮಹತ್ವದ್ದೆನಿಸಿದೆ.

5b79c8aa-2294-405e-9c8f-485f3ce6e3cabd6566fc-91a5-4252-9706-9eb6e1561a9a (1)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s