ಸಿಎಂ ಮತ್ತು ಆರ್ಯನ್

ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ರಾಂತಿಗೆಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿರುವುದನ್ನು ತಿಳಿದುಕೊಂಡು ಅಲ್ಲಿಗೆ ಬಂದ ಬಾಲಕನ ಹೆಸರು ಆರ್ಯನ್ ಗಿರಿ.

ಈತ ಎಂ. ಆರ್ ಸಾಕರೆ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ. ಬೆಳ್ಳಿಗೆ ಸುಮಾರು 9 ಗಂಟೆಯ ಸಮಯದಲ್ಲಿ ಸರ್ಕ್ಯೂಟ್ ಹೌಸ್‍ಗೆ ಬಂದ ಬಾಲಕ ಆರ್ಯನ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನ್ನ ಊರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾನೆ. ಬಿಡುವಿಲ್ಲದ ಕಾರ್ಯಕ್ರಮಗಳಿಂದ ದಣಿದಿದ್ದ ಮುಖ್ಯಮಂತ್ರಿಗಳು ತಮಗೆ  ವಿಶ್ರಾಂತಿಯ ಅಗತ್ಯವಿರುವುದನ್ನು ಮರೆತು ಭೇಟಿಗಾಗಿ ಕಾಯುತ್ತಿದ್ದ ಬಾಲಕನಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವುದರ ಮೂಲಕ ಮಾನವೀಯತೆಯನ್ನ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಬಾಲಕ ಆರ್ಯನ್‍ನೊಂದಿಗೆ ತಮ್ಮ ವಿಶ್ರಾಂತಿ ಸಮಯದ ಸುಮಾರು 20 ನಿಮಿಷಗಳಷ್ಟು ಕಾಲ ಕಳೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಲಕನ ಮನವಿಯನ್ನು ಆಲಿಸಿ ಆತನ ಬಗೆಗೆ ವಿವರಗಳನ್ನು ಪಡೆದು ಕೊಂಡರು. ಬಾಲಕನ ಶಾಲೆ ವಿವರಗಳನ್ನು ಕೇಳಿ ತಿಳಿದ ಮುಖ್ಯಮಂತ್ರಿಗಳು ಆರ್ಯನ್ ಗಿರಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಬೇಕು ಮತ್ತು ಕನ್ನಡ ಓದಲು ಬರೆಯಲು ಅಭ್ಯಾಸಿಸಬೇಕು ಎಂದು ಹೇಳುವುದರ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಬಾಲಕನನ್ನು ಪ್ರೋತ್ಸಾಹಿಸುತ್ತಾ, ಕನ್ನಡ ಭಾಷಾ ಪ್ರೇಮವನ್ನ ಮುಖ್ಯಮಂತ್ರಿಗಳು ಮೆರೆಯುವುದರ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಬದ್ದ ಎಂಬ ಸಂದೇಶ ನೀಡಿದ್ದಾರೆ.

ಇದುವರೆಗೂ ಸರ್ಕಾರ ಜಾರಿ ಮಾಡಿರುವ ವಿವಿಧ ಭಾಗ್ಯಗಳ ಮಾಹಿತಿಯನ್ನ ಬಾಲಕನಿಗೆ ಮುಖ್ಯಮಂತ್ರಿಗಳು ಆರ್ಯನ್ ಗಿರಿಗೆ ತಿಳಿಸಿಕೊಟ್ಟರು.  ಬಾಲಕ ಆರ್ಯನ್ ಗಿರಿ ಉತ್ತರ ಕರ್ನಾಟಕದಲ್ಲಿಯೂ ಉತ್ತಮ ರಸ್ತೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಅವರು, ಬಾಲಕನಿಗೆ ಸರ್ಕಾರ ಹಂತಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.  ಮುಖ್ಯಮಂತ್ರಿಗಳ ಭರವಸೆಯ ನಂತರ  ಬಾಲಕ ಆರ್ಯನ್ ಗಿರಿ  ಸಕ್ರ್ಯೂಟ್ ಹೌಸ್‍ನಿಂದ ತೆರಳಿದ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s