ದಾಖಲೆಗಾಗಿ ಯೋಗ

ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಜೂನ್ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತವು ಸೇರಿದಂತೆ ಒಟ್ಟು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವ ಸಿದ್ದತೆಯಾಗಿ ಮೈಸೂರು ಜಿಲ್ಲಾಡಳಿತವು ಸುಮಾರು 60 ಸಾವಿರ ಜನರನ್ನು ಸೇರಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಸಜ್ಜಾಗಿದೆ. ಈ ಮೂಲಕ ಗಿನ್ನೀಸ್ ದಾಖಲೆಯನ್ನು ಬರೆಯಲು ಮೈಸೂರು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಈವರೆಗೆ ದೆಹಲಿಯ ರಾಜ ಪಥದಲ್ಲಿ 38500 ಜನ ಸೇರಿ ಯೋಗ ದಿನಾಚರಣೆ ಮಾಡಿರುವುದು ದಾಖಲೆಯಾಗಿದೆ.

ಇದರ ಪೂರ್ವಭಾವಿ ಸಿದ್ದತೆಯಾಗಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಯೋಗ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಯೋಗ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಾಂಘೈನಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ, ವಿಯೆಟ್ನಾಂನಲ್ಲಿ ನಡೆದ ಏಷ್ಯನ್‌ ಯೋಗ ಚಾಂಪಿಯನ್‌ಷಿಪ್‌ನ ಆರ್ಟಿಸ್ಟಿಕ್‌ ವಿಭಾಗದಲ್ಲಿ ಚಿನ್ನದ ಪದಕ, ರಿದಮಿಕ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಯೋಗಪಟು ಖುಷಿ ಅವರು ಯೋಗಾಸನ ಪ್ರದರ್ಶನದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

 

ನೋಟು ಮುದ್ರಣ ನಗರದ ಸಮುದಾಯ ಭವನದಲ್ಲಿ ಖುಷಿ ಅವರು ಪೂರ್ಣ ಚಕ್ರಾಸನ ಭಂಗಿ ಹೋಲುವ ಕಲಾತ್ಮಕ ಯೋಗ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ. ಒಂದು ನಿಮಿಷ ನಿಂತುಕೊಂಡೆ 15 ಬಾರಿ ಹಿಮ್ಮುಖವಾಗಿ ಭಾಗಿ ತಲೆ ಹಾಗೂ ಬೆನ್ನನ್ನು ನೆಲಕ್ಕೆ ಸ್ಪರ್ಶಿಸಿ ಕೇವಲ ಹಿಮ್ಮಡಿ ಬಲದಿಂದಲೇ ಮೇಲೇಲುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಇವರ ಸಾಧನೆಗಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರತಿನಿಧಿ ಸಂತೋಷ್ ಅಗರ್ವಾಲ್ ಖುಷಿ ಅವರ ಸಾಧನೆಗೆ ಪ್ರಶಸ್ತಿ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೇಂಟ್ ಜೋಸೆಫ್ ನ ಸೆಂಟ್ರಲ್ ಶಾಲೆಯಲ್ಲಿ ಒಂಭತ್ತನೆ ತರಗತಿ ಓದುತ್ತಿರುವ ಖುಷಿ ಈಗಾಗಲೇ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ರ್ಟೀಯ ಮಟ್ಟದಲ್ಲಿ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s