ಹೊಸ ಮಾದರಿಯ ಡಿಜಿಟಲ್ ಫಲಕ – ಏನಿದು?

ಸಾಕ್ಷಿ ಸಜೀಪ

ಚಿತ್ರಗಳು- ವೆಂಕಟ್ ರೆಡ್ಡಿ

ಸಮಾಜ ಮತ್ತು ಸರ್ಕಾರದ ನಡುವಣ ಮುಖ್ಯ ಸೇತುವೆ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.   ಇದುವರೆಗು ಇದ್ದ ಮಾಧ್ಯಮಗಳ ಮೂಲಕ ಇಲಾಖೆ ಯಶಸ್ವಿಯಾಗಿ  ಈ ಕಾರ್ಯವನ್ನು ನಿರ್ವಹಿಸಿದೆ. ಆಧುನಿಕ ತಂತ್ರಜ್ಞಾನ ಕಾಲದಲ್ಲಿ  ನವ ಮಾಧ್ಯಮಗಳು ಕುಡಿಯೊಡೆಯುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ   ಇಲಾಖೆಯು ಅತ್ಯಂತ ವೇಗವಾಗಿ ಈ ಮಾಧ್ಯಮಗಳಿಗು ಸಜ್ಜಾಗಿದೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಡಿಜಿಟಲ್ ಫಲಕ ತಂತ್ರಜ್ಞಾನ. ಕ್ಲೌಡ್ ತಂತ್ರಜ್ಞಾನವನ್ನು ಬಳಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಡಿಜಿಟಲ್ ಫಲಕಗಳ ಮೇಲೆ ಮಾಹಿತಿಯನ್ನು ಬಿತ್ತರಿಸುವುದು ಈ ತಂತ್ರಜ್ಞಾನದ ಯೋಜನೆ.

 

ಇಂತಹ ಮಹತ್ವದ ಯೋಜನೆಯ ಮೊದಲ ಫಲಕವನ್ನು ಪ್ರಾಯೋಗಿಕವಾಗಿ ಮೈಸೂರಿನಲ್ಲಿ ಅಳವಡಿಸಲಾಗಿದೆ. ಇದನ್ನು ಇತ್ತೀಚೆಗೆ ಸಿ. ಎಂ ಅವರು ಚಾಲನೆ ನೀಡಿದ್ದಾರೆ. ಹಾಗಾದರೆ ಏನಿದು ಈ ತಂತ್ರಜ್ಞಾನ  ಇದರ ಮಾಹಿತಿ ಹೆಜ್ಜೆ ಹಾಕೋಣ ಬನ್ನಿ.

ಏನಿದು ಡಿಜಿಟಲ್ ಫಲಕ?

ತಂತ್ರಜ್ಞಾನದೊಂದಿಗೆ – ಅಭಿವೃದ್ದಿಯೆಡೆಗೆ ಶೀರ್ಷಿಕೆಯಡಿ ಡಿಜಿಟಲ್ ಫಲಕ ಅಳವಡಿಕೆ ಜಾರಿಗೆ ಬರುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ / ಪಬ್ಲಿಕ್ ಪ್ರೈವೇಟ್ ಪಾಟ್ನರ್ ಶಿಪ್) ಇಲಾಖೆಯು ರಾಜ್ಯದ 10 ಕಡೆಗಳಲ್ಲಿ ಮೊದಲ ಹಂತದಲ್ಲಿ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುತ್ತಿದೆ. 10 x 16 ಅಡಿ ವಿಸ್ತೀರ್ಣದ ಡಿಸ್‍ಪ್ಲೇ ಬೋರ್ಡ್‍ಗಳನ್ನು ಅಳವಡಿಸಲಾಗಿದೆ.  ಈಗಾಗಲೇ ವಾರ್ತಾ ಇಲಾಖೆಯು ತನ್ನ ಒಡೆತನದಲ್ಲಿರುವ 2500ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿ ಫ್ಲೆಕ್ಸ್ ಅನ್ನು ಅಳವಡಿಸಿ ರಾಜ್ಯ ವಿವಿಧ ಯೋಜನೆಗಳಿಗೆ ಪ್ರಚಾರ ನೀಡುತ್ತಿದೆ. ಆದರೆ  ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು  ಇದಕ್ಕೆ ಪರ್ಯಾಯವಾಗಿ  ಹೊಸ ಮಾದರಿಯಲ್ಲಿ ಮೊದಲ ಹೆಜ್ಜೆಯಾಗಿ ಇಲಾಖೆಯು ಡಿಜಿಟಲ್ ಫಲಕಗಳ ಮೂಲಕ ಪ್ರಚಾರ ನೀಡಲು ಮುಂದಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ:

ಮೊದಲ ಹಂತದಲ್ಲಿ ಬೆಂಗಳೂರಿನ ಮೂರು ಕಡೆ ಸೇರಿದಂತೆ ಮೈಸೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮತ್ತು ಮಂಗಳೂರಿನ ಜಿಲ್ಲಾ ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದೆ. ಹಂತ ಹಂತವಾಗಿ ಇದನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದೆ. 2017-18ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು 175 ತಾಲ್ಲೂಕುಗಳಲ್ಲೂ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುವುದಾಗಿ ಘೋಷಿಸಿದ್ದಾರೆ.

ತಂತ್ರಜ್ಞಾನದ ಬಳಕೆ:

ತಂತ್ರಜ್ಞಾನದೊಂದಿಗೆ – ಅಭಿವೃದ್ದಿಯೆಡೆಗೆ ಉದ್ದೇಶವನ್ನು ಮುಂದಿಟ್ಟುಕೊಂಡು ವಾರ್ತಾ ಇಲಾಖೆಯು ಸದಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಈ ಮೊದಲು ಸರ್ಕಾರದ ಯೋಜನೆಗಳನ್ನು ಪ್ರಚಾರ ನೀಡುವ ಸಲುವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡುತ್ತಿದೆ. ಹೊಸ ಪಿಪಿಪಿ ಮಾದರಿಯಲ್ಲಿ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುವ ಮೂಲಕ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಹೊಸ ದಾರಿ ಹಿಡಿದಿದೆ. ರಾಜ್ಯದ ಯೋಜನೆಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ  ಡಿಜಿಟಲ್ ಫಲಕಗಳನ್ನು ಸ್ಥಳಿಯ ಜಿಲ್ಲಾಡಳಿತವು ಸಹ ಸಾರ್ವಜನಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಬಹುದಾಗಿದೆ.

ಕಾರ್ಯಕ್ರಮಗಳ ನೇರಪ್ರಸಾರ:

ಸಾರ್ವಜನಿಕವಾಗಿ ಅಳವಡಿಸಲಾಗಿರುವ ಹೊಸ ಡಿಜಿಟಲ್ ಫಲಕಗಳಲ್ಲಿ ರಾಜ್ಯದ ಯೋಜನೆಗಳ ಪ್ರಚಾರ ಮಾತ್ರವಲ್ಲದೆ ಜನರಿಗೆ ಮನೋರಂಜನೆಗಾಗಿ ರಾಜ್ಯದ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳು ನಾಡು-ನುಡಿಯ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳನ್ನು ತೋರಿಸಲಾಗುತ್ತದೆ. ಇದರಿಂದ ರಾಜ್ಯದ ಸಂಸ್ಜೃತಿಯ ಬಗ್ಗೆ ಎಲ್ಲಿದ್ದರು ಜನ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಸಾಮಾಜಿಕ ಸಂದೇಶ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಮಾಹಿತಿಯನ್ನು ತಲುಪಿಸಲಾಗುತ್ತದೆ. ಅಷ್ಟೆ ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸಾರ್ವಜನಿಕರಿಗೆ ನೋಡಲು ಡಿಜಿಟಲ್ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s