‘ಟ್ರಿಣ್ ಟ್ರಿಣ್’ .. ಏನಿದು?

IMG_2943ಸಾಕ್ಷಿ ಸಜೀಪ

ಚಿತ್ರಗಳು– ವೆಂಕಟ್ ರೆಡ್ಡಿ

ಸುಂದರವಾದ ನಗರ, ಸಾಂಸ್ಕೃತಿಕ ನಗರ ಎಂದೇ ಕರೆಯಲ್ಪಡುವ ಮೈಸೂರು ನಗರದಲ್ಲಿ  ನಗರದಲ್ಲಿ 12 ಲಕ್ಷ ಜನಸಂಖ್ಯೆಯಿದ್ದು, ಆರೂವರೆ ಲಕ್ಷ ವಾಹನಗಳಿವೆ.

ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ, ಮತ್ತು ನಾನಾ ಕಡೆಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ‘ಟ್ರಿಣ್ ಟ್ರಿಣ್’ ಹೆಸರಿನಲ್ಲಿ ಸಾರ್ವಜನಿಕ ಸೈಕಲ್ ವ್ಯವಸ್ಥೆ ಯೋಜನೆಯನ್ನು ಜಾರಿಗೆ ತಂದಿದೆ.

ಅರೆ! ಏನಿದು ಈ ‘ಟ್ರಿಣ್ ಟ್ರಿಣ್’ ಸೈಕಲ್ ಯೋಜನೆ ಎಂದು ಅನಿಸಿರಬಹುದು..

ಹೌದು ಸಾವಿರಾರು ಜನ ಬಂದು ಹೋಗುವ ಮೈಸೂರಿನಲ್ಲಿ ಜನರಿಗೆ ಅನುಕೂಲವಾಗುವಂತೆ  ನೂರಾರು ಸೈಕಲ್‌ಗ‌ಳು ಸಾಂಸ್ಕ್ರತಿಕ ನಗರಿಯಲ್ಲಿ ಓಡಾಡಡಲು ಸಜ್ಜಾಗಿದೆ. ಏನಿದು ಯೋಜನೆ ಅಂತ ನೋಡೋಣ ಬನ್ನಿ.

ರಾಜ್ಯ ಸರ್ಕಾರವು ಗ್ಲೋಬಲ್‌ ಎನ್ವಿರಾನ್‌ಮೆಂಟ್‌ ಫೆಸಿಲಿಟಿ ಗ್ರ್ಯಾಂಟ್‌ ಹಾಗೂ ಮೈಸೂರು ನಗರಪಾಲಿಕೆ ಸಹಯೋಗದಲ್ಲಿ ‘ಟ್ರಿಣ್ ಟ್ರಿಣ್’ ಪಬ್ಲಿಕ್‌ ಬೈಸಿಕಲ್‌ ಶೇರಿಂಗ್‌ ಸಿಸ್ಟಂನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಒಟ್ಟು 450 ಸೈಕಲ್ ಗಳು ರಸ್ತೆಗಿಳಿಯಲಿದ್ದು. ಸದ್ಯಕ್ಕೆ ಮೊದಲ ಹಂತದಲ್ಲಿ 200 ಸೈಕಲ್ ಗಳನ್ನು ಬಿಡುಗಡೆ ಮಾಡಲಾಗಿದೆ.

ನಗರಪಾಲಿಕೆಯ ಬಹು ನಿರೀಕ್ಷಿತ ‘ಟ್ರಿಣ್ ಟ್ರಿಣ್’ ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಂ ಯೋಜನೆಯನ್ನು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ದೇಶದಲ್ಲಿಯೇ ಮೊಟ್ಟ ಮೊದಲ ಸಾರ್ವಜನಿಕ ಸೈಕಲ್ ಬಳಕೆ ಯೋಜನೆ ಇದಾಗಿದ್ದು. ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಸೈಕಲ್‌ಸ್ಟ್ಯಾಂಡ್‌ ನಿರ್ಮಾಣ, ನಿಲ್ದಾಣಕ್ಕೆ ಅಗತ್ಯವಿರುವ ವಿದ್ಯುತ್‌ ಸಂಪರ್ಕ, ಸ್ಮಾರ್ಟ್‌ಕಾರ್ಡ್‌ ಸ್ವೆ„ಪ್‌ ಮಾಡುವ ಯಂತ್ರಗಳ ಅಳವಡಿಕೆ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಕೂಡ ಸರ್ಕಾರ ಮಾಡಿದೆ.

ನೀವು ಪಡೆಯಬೇಕಾದರೆ?

ಸೂಕ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವ ಸಾರ್ವಜನಿಕರು ನಗರದ ವಿವಿಧ ಕಡೆಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳ ಬಹುದಾಗಿದೆ. ಇದಕ್ಕಾಗಿ 450 ‘ಟ್ರಿಣ್ ಟ್ರಿಣ್’ ಸೈಕಲ್‌ಗ‌ಳು ಸಾರ್ವಜನಿಕರು ಹಾಗೂ ಪ್ರವಾಸಿಗರ ಬಳಕೆಗೆ ಲಭ್ಯವಿದ್ದು, ಸೈಕಲ್‌ನಲ್ಲಿ ಓಡಾಡ ಬಯಸುವವರು ನಗರದಲ್ಲಿರುವ ಯಾವುದಾದರೊಂದು ನೋಂದಣಿ ಕೇಂದ್ರದಲ್ಲಿ ತಮ್ಮ ಗುರುತಿನ ಚೀಟಿ, ವಿಳಾಸದ ಚೀಟಿಯನ್ನು ಪ್ರದರ್ಶಿಸಿದರೆ ಅವರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಈ ಸ್ಮಾರ್ಟ್‌ ಕಾರ್ಡ್‌ನ್ನು ಸ್ವೆ„ಪಿಂಗ್‌ ಮಿಷನ್‌ನಲ್ಲಿ ಸ್ವೆ„ಪ್‌ ಮಾಡಿದರೆ ಒಂದು ಸೈಕಲ್‌ ಪಡೆಯಬಹುದು. ಸಾರ್ವಜನಿಕರು ಸೈಕಲ್‌ ಪಡೆಯಲು ಮೊದಲ ಒಂದು ಗಂಟೆಗೆ 15 ರೂ., ನಂತರದ ಪ್ರತಿ ಅರ್ಧ ಗಂಟೆಗೆ 10 ರೂ. ನಂತೆ ಹಣ ಪಾವತಿಸಬೇಕಾಗಿದೆ.

ನೋಂದಣಿ ಕೇಂದ್ರಗಳು?

ಸರ್ಕಾರ ಹಾಗೂ ಪಾಲಿಕೆಯ ‘ಟ್ರಿಣ್ ಟ್ರಿಣ್’ ಪಬ್ಲಿಕ್‌ ಬೈಸಿಕಲ್‌  ಶೇರಿಂಗ್‌ ಸಿಸ್ಟಂಗಾಗಿ ನಗರದ ಪ್ರಮುಖ ಕಡೆಗಳಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅದರಂತೆ ಅರಮನೆ, ರೈಲ್ವೇ ನಿಲ್ದಾಣ, ಕೇಂದ್ರ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನಗರ ಪಾಲಿಕೆ ಕಚೇರಿ, ಜಯನಗರದ ಪಾಲಿಕೆ ವಲಯ ಕಚೇರಿ ಹಾಗೂ ಮೃಗಾಲಯದ ಸಮೀಪ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಹೀಗಾಗಿ ಸೈಕಲ್‌ ಪಡೆಯುವವರು ಈ ಯಾವುದಾದರೂ ಒಂದು ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಸೈಕಲ್‌ ಪಡೆಯಬಹುದಾಗಿದೆ. ಈ ಎಲ್ಲಾ ಕೇಂದ್ರಗಳಿಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸೈಕಲ್ ನಿಲ್ದಾಣಗಳು:

ಸಾರ್ವಜನಿಕರ ಅನುಕೂಲಕ್ಕಾಗಿ ನಗರದ 22 ಸ್ಥಳಗಳಲ್ಲಿ ಸೈಕಲ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಅದರಂತೆ ಅರಮನೆ, ಸಂತ ಫಿಲೋಮಿನಾ ಚರ್ಚ್‌, ಮೃಗಾಲಯ, ಮಾಲ್‌ ಆಫ್ ಮೈಸೂರು, ರೈಲ್ವೆ ನಿಲ್ದಾಣ, ಕಾರಂಜಿಕೆರೆ, ದೇವರಾಜ ಅರಸು ರಸ್ತೆ, ಕಲಾಮಂದಿರ, ನ್ಯಾಯಾಲಯದ ಸಮೀಪ, ಕುಕ್ಕರಹಳ್ಳಿ ಕೆರೆ, ಜಗನ್ಮೋಹನ ಅರಮನೆ, ನಗರ ಬಸ್‌ನಿಲ್ದಾಣ, ಒಂಟಿಕೊಪ್ಪಲ್‌, ಆಕಾಶವಾಣಿ, ಸಂತ ಜೋಸೆಫ್ ಶಾಲೆ, ಚಾಮುಂಡಿ ಬೆಟ್ಟದ ತಪ್ಪಲು, ಚಾಮುಂಡಿ ಬೆಟ್ಟ, ಜಯನಗರ, ಹಾರ್ಡಿಂಜ್‌ ವೃತ್ತ, ಸರ್ಕಾರಿ ಆಯುರ್ವೇದ ವೃತ್ತ, ಖಾಸಗಿ ಬಸ್‌ ನಿಲ್ದಾಣ, ಮಿನಿ ವಿಧಾನಸೌಧ, ರಾಮಸ್ವಾಮಿ ವೃತ್ತ, ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ನೋಂದಣಿ ಕೇಂದ್ರಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಪಡೆದವರು ಈ ಯಾವುದೇ ನಿಲ್ದಾಣದಲ್ಲಾದರೂ ಸೈಕಲ್‌ ಪಡೆಯಬಹುದು.

ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ಪರಿಸರ ಸ್ನೇಹಿ ವಾಹನಗಳನ್ನು ಸಂಚಾರಕ್ಕೆ ಬಳಸುವುದು ಸೂಕ್ತವಾಗಿರುವುದರಿಂದದ  ಸಾರ್ವಜನಿಕ ಸೈಕಲ್ ಬಳಕೆಯನ್ನು ಸರ್ಕಾರ ಜಾರಿಗೆ ತಂದಿದ್ದು ಇನ್ನು ಮುಂದೆ ಬೆಂಗಳೂರು ನಗರದಲ್ಲೂ ಈ ವ್ಯವಸ್ಥೆ ಜಾರಿಗೆ ತರುವ ಸೂಚನೆಗಳಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s