ಯುಪಿಎಸ್ ಸಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟ ಕನ್ನಡತಿ

n2ರಾಜ್ಯದ ಕನ್ನಡತಿಯೊಬ್ಬರು ಕೇಂದ್ರ ಲೋಕ ಸೇವಾ ಆಯೋಗದ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 16ವರ್ಷಗಳ ಹಿಂದೆ ವಿಜಯಲಕ್ಷ್ಮಿ ಬಿದರಿ ಮೊದಲ ಬಾರಿಗೆ ಪ್ರಥಮ ರ್ಯಾಂಕ್ ಪಡೆದಿದ್ದರು. ಈ ಸಲ 2016ನೇ ಸಾಲಿನ ಯುಪಿಎಸ್ ಸಿ ಪ್ರಥಮ ರ್ಯಾಂಕ್ ಪಡೆದ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಕೋಲಾರ ಜಿಲ್ಲೆಯ ಕೆ ಆರ್ ನಂದಿನಿ.

ಮೂಲತ: ಎಂಜಿನಿಯರಿಂಗ್ ಪದವಿಧರರಾದ ಅವರು ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಲಭ್ಯವಿರುವ ಮಾಹಿತಿಯನುಸಾರ 2015ನೇ ಸಾಲಿನಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಸ್ಪರ್ದಾತ್ಮಕ ಪರೀಕ್ಷೆ ಎದುರಿಸಿದ್ದ ಕೆ ಆರ್ ನಂದಿನಿ ಅವರು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿ ತರಬೇತಿಯಲ್ಲಿದ್ದರು. ಈ ಅವಧಿಯಲ್ಲಿ ಮತ್ತೊಮ್ಮೆ ಪರೀಕ್ಷೆ ಎದುರಿಸಿದ ಅವರು ಕಡೆಗೂ ಯುಪಿಎಸ್ ಸಿ ಸ್ಪರ್ದಾತ್ಮಕ ಪರೀಕ್ಷೆಗಳ ಅಗ್ರ ಪಂಕ್ತಿಯ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಅಭಿನಂದನೆ:

ಕೇಂದ್ರ ಲೋಕಸೇವಾ ಆಯೋಗದ 2016ನೇ ಸಾಲಿನ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕನ್ನಡತಿ ಕೆ ಆರ್ ನಂದಿನಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.

ಸುಮಾರು 17 ವರ್ಷಗಳ ನಂತರ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆಗಳಲ್ಲಿ ಕನ್ನಡತಿ ಪ್ರಥಮ ರ್ಯಾಂಕ್ ಗಳಿಸಿರುವುದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ.

ಇಂತಹ ಸಾಧನೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರೆ ಎಲ್ಲಾ ಯುವಕ ಯುವತಿಯರಿಗೂ ಪ್ರೇರಣೆ ಮತ್ತು ಸ್ಪೂರ್ತಿಯನ್ನು ನೀಡಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ:

,,ಕೆ ಆರ್ ನಂದಿನಿ ಅವರು ರಾಜ್ಯದ ಕೋಲಾರ ಜಿಲ್ಲೆಯ ಗ್ರಾಮೀಣ ಪರಿಸರದಿಂದ ಬಂದವರು. ತಂದೆ ರಮೇಶ್ ಸರ್ಕಾರಿ ಶಾಲೆಯ ಶಿಕ್ಷಕರು.

ನಂದಿನಿ ಅವರು ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿರುವ ನಂದಿನಿ, ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
ಇಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ನಂದಿನಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಸಾಧನೆಯ ಹೆಜ್ಜೆ:

Nಸದ್ಯಕ್ಕೀಗ ಭಾರತೀಯ ಕಂದಾಯ ಸೇವೆ (ಐಆರ್ ಎಸ್) ನಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿರುವ ಅವರು, ಐಎಎಸ್ ನಲ್ಲಿ ತಾವು ನಡೆಸಿದ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.

ಯಶಸ್ಸಿನ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಅವರು “ಕಠಿಣ ಪರಿಶ್ರಮದಿಂದಲೇ ಯಶಸ್ಸು ಸಿಕ್ಕಿದ್ದೆಂದು ಹೇಳಿದರು, 2014ರಲ್ಲಿ ಈ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣಳಾಗಿ ಐಆರ್ ಎಸ್ ಗೆ ಆಯ್ಕೆಯಾಗಿದ್ದೆ. ಆನಂತರ, 2015ರಲ್ಲಿ 2ನೇ ಬಾರಿಗೆ ಐಎಎಸ್ ಪರೀಕ್ಷೆ ತೆಗೆದುಕೊಂಡಿದ್ದೆ. ಆದರೆ, ಆಗ ನನ್ನಿಂದ ಟಾಪರ್ ಸಾಧನೆಯಾಗಲಿಲ್ಲ.ಆದರೆ, ಇದೀಗ ಮತ್ತೆ ಪರೀಕ್ಷೆ ಬರೆಯುವ ಮೂಲಕ ಐಎಎಸ್ ಟಾಪರ್ ಸಾಧನೆ ಮಾಡಿದ್ದೇನೆ ಎಂದು ತಿಳಿಸಿದರು.

”ಐಎಎಸ್ ನಲ್ಲಿ ಪ್ರಥಮ ಶ್ರೇಯಾಂಕ ಪಡೆಯಲೇಬೇಕೆಂದು ಶಕ್ತಿ ಮೀರಿ ಪ್ರಯತ್ನಿಸಿದ್ದಕ್ಕೆ ಇಂದು ಫಲ ಸಿಕ್ಕಿದೆ. ಮನಸ್ಸಿಗೆ ಖುಷಿಯಾಗಿದೆ. ದೊಡ್ಡ ಕನಸೊಂದನ್ನು ಸಾಧಿಸಿದ ಬಗ್ಗೆ ಹೆಮ್ಮೆಯಾಗುತ್ತಿದೆ”
”ನಾವು ನಮ್ಮ ಮೇಲಿನ ವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ” ಎಂದರಲ್ಲದೆ, ಸುತ್ತಲಿನ ಸಮಾಜವೂ ಐಎಎಸ್ ಅಭ್ಯರ್ಥಿಗಳಿಗೆ ಉತ್ತಮ ಸಹಕಾರ ನೀಡಿ ನೆರವಾಗಬೇಕು ಎಂದರು.

ಕೆ ಆರ್ ನಂದಿನಿ ಅವರ ಯಶಸ್ಸು ಇತರರಿಗೂ ಮಾದರಿಯಾಗಲಿ, ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಯುವಜನರು ಹೆಚ್ಚು ಹೆಚ್ಚು ಸಾಧನೆ ಮಾಡಲಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಬೆಳಗಿಸಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s