“ಕೊಟ್ಟ ಮಾತು ದಿಟ್ಟ ಸಾಧನೆ” ಸಮಾವೇಶಕ್ಕೆ ಸಜ್ಜು

4‘ಕೊಟ್ಟ ಮಾತು ದಿಟ್ಟ ಸಾಧನೆ’ ಮೈಸೂರು ವಿಭಾಗದ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗುತ್ತಿದೆ.

ರಾಜ್ಯ ಸರ್ಕಾರ ಜನ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದೆ.

ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ನೀಡಿದ ಭರವಸೆಗಳ ಈಡೇರಿಕೆಗೆ ಕೈಗೊಂಡ ಕ್ರಮಗಳು, ಯೋಜನೆಗಳು, ಅಭಿವೃದ್ದಿ ಮಾಹಿತಿಗಳನ್ನು ಸಾರ್ವಜನಿಕ ಅವಗಾಹನೆಗೆ ತರುವ ಸದುದ್ದೇಶದಿಂದ ಕಾರ್ಯಕ್ರಮ ಜರುಗುತ್ತಿದೆ.

ಚಾಲನೆ:

m.cಮಾಹಿತಿ ಉತ್ಸವಕ್ಕೆ ಲೋಕೋಪಯೋಗಿ ಸಚಿವರಾದ ಡಾ ಎಚ್ ಸಿ ಮಹಾದೇವಪ್ಪ ಅವರು ಜೂನ್ 2ರಂದು ಸಂಜೆ 5ಗಂಟೆಗೆ ಚಾಲನೆ ನೀಡಲಿದ್ದಾರೆ.

ಜೂನ್ 3, 2017ರ ಶನಿವಾರ ಬೆಳಿಗ್ಗೆ 11.00ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕೊಟ್ಟ ಮಾತು ದಿಟ್ಟ ಸಾಧನೆ” ಮೈಸೂರು ವಿಭಾಗದ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಸಿದ್ದತೆ:
2

ಮೈಸೂರು ನಗರದ ಮಹಾರಾಜ ಮೈದಾನದಲ್ಲಿ ಕಾರ್ಯಕ್ರಮಕ್ಕಾಗಿ ಸುಸಜ್ಜಿತವಾದ ಬೃಹತ್ ವೇದಿಕೆ ಸಿದ್ದವಾಗುತ್ತಿದೆ.

ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನಕ್ಕಾಗಿ ಮಳಿಗೆಗಳನ್ನು ಸಿದ್ದಪಡಿಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಲಕ್ಷಾಂತರ ಮಂದಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸುವ ವ್ಯವಸ್ಥೆಯೂ ಆಗುತ್ತಿದೆ.

ಪ್ರಚಾರದ ದೃಷ್ಟಿಯಿಂದ ಮೈಸೂರು ನಗರ ಹಾಗೂ ಜಿಲ್ಲೆಯಾಧ್ಯಂತ ಬ್ಯಾನರ್ ಫಲಕಗಳನ್ನು ಹಾಕಲಾಗುತ್ತಿದೆ.

1

ಮೈಸೂರು ಜಿಲ್ಲಾಧಿಕಾರಿ ರಣ್ ದೀಪ್ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡುವ ಜೊತೆಗೆ ಸಂವಹನಕ್ಕಾಗಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

ಮಾಹಿತಿ ಉತ್ಸವ

ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆಗಳು,ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ಸಾಲ ಸೌಲಭ್ಯಗಳು ಹೀಗೆ ಅನೇಕ ಮಾಹಿತಿಗಳನ್ನು ಜನರ ಅವಗಾಹನೆಗೆ ತರುವ ಸಲುವಾಗಿ ವಿವಿಧ ಇಲಾಖೆಗಳ ಮಾಹಿತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಮಾಹಿತಿ ಉತ್ಸವವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಏರ್ಪಡಿಸಿದೆ.

ಶಾಲಾ ವಿದ್ಯಾರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ, ವಿದ್ಯಾಭ್ಯಾಸ ಮುಗಿಸಿದ ನಂತರ ಇಲಾಖೆಗಳ ಮೂಲಕ ಪಡೆಯಬಹುದಾದ ಕೌಶಲ್ಯಾಭಿವೃದ್ಧಿ ತರಬೇತಿಗಳು, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಹೀಗೆ ಹಲವು ಮಾಹಿತಿಗಳನ್ನು ಪಡೆಯ ಬಹುದಾಗಿದೆ.

ಸಾಧನೆ:
m

ಸರ್ಕಾರದ ಸಾಧನೆಗಳನ್ನು ಸಾರಿ ಹೇಳುವ ಇಲಾಖೆಗಳ ಮಳಿಗೆಗಳು ಸಹ ಇವೆ.ಅಲ್ಲಿ ಮಾಹಿತಿಗಳ ಮನವರಿಕೆ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

ಮಾಹಿತಿ ಉತ್ಸವದಲ್ಲಿ ಮಾಹಿತಿ ಮಾತ್ರವಲ್ಲದೆ ಸಂಜೆ ಮನಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜೂನ್ 3,2017 ರಂದು ಸಂಜೆ 6 ಗಂಟೆಯಿಂದ 7ಗಂಟೆಯ ವರೆಗೆ ಸುನಿತಾ ಚಂದ್ರಕುಮಾರ್, ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ಗಂಟೆಯಿಂದ 9.30ರ ವರೆಗೆ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ರಸ ಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.7

ಜೂನ್ 4, 2017ರಂದು ಭಾನುವಾರ ಸಂಜೆ 6ಗಂಟೆಯಿಂದ 7ಗಂಟೆಯ ವರೆಗೆ ಸ್ವಾಹ ತಂಡದವರಿಂದ ವರ್ಲ್ಡ್ ಪರ್ಕ್ಯೂಷನ್ ಬ್ಯಾಂಡ್ ವಾದನ. ರಾತ್ರಿ 7ಗಂಟೆಯಿಂದ 9ಗಂಟೆಯ ವರೆಗೆ ಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರಿಂದ ಮನರಂಜನಾ ಕಾರ್ಯಕ್ರಮ ಆಯೋಜನೆಯಾಗಿದೆ.
ಇದೇ ಮಾಹಿತಿ ಉತ್ಸವದಲ್ಲಿ ಆಹಾರ ಮೇಳವೂ ಸಹಾ ಆಯೋಜನೆಯಾಗಿದೆ. 3ದಿನಗಳ ಸಮಾವೇಶಕ್ಕೆ ಸಕಲ ರೀತಿಯಲ್ಲೂ ಮೈಸೂರು ನಗರ ಸಜ್ಜಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s