ಮುನಿಯಮ್ಮನೆಂದರೆ…….

ಮುನಿಯಮ್ಮ ಪರ್ಯಾಯ ಸರ್ಕಾರಿ ಭೂಮಿಯನ್ನು ದಕ್ಕಿಸಿಕೊಳ್ಳಲು ಪಡಿಪಾಟಲು ಪಟ್ಟು ಅಂತಿಮವಾಗಿ ದೂರದ ದೆಹಲಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಹವಾಲು ಹೇಳಿಕೊಂಡಿದ್ದು ದೇಶದ ಗಮನ ಸೆಳೆದಿದೆ.

20 Gudibande Hill Fort

ಯಾರೀಕೆ ಮುನಿಯಮ್ಮ?, ದೂರದ ದೆಹಲಿಯವರೆಗೆ ಯಾತ್ರೆ ಬೆಳೆಸಿದ್ದೇಕೆ? ಎಂಬ ಸಹಜ ಕುತೂಹಲದಿಂದ ವಿಷಯಗಳನ್ನು ಕೆದಕಿದಾಗ ತಿಳಿದಿದು ಬಂದಿದ್ದಿಷ್ಟು.

ಮುನಿಯಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಬೆಟ್ಟದ ಕೆಳಗಿನ ಪೇಟೆಯ ವಾಸಿ.

ಮುನಿಯಮ್ಮ ಅವರ ಪತಿ ಮುನಿಯಪ್ಪ ಕೂಲಿ ಕಾರ್ಮಿಕ ಕುಟುಂಬ, ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು. ಮೂವರದ್ದು ಮದುವೆಯಾಗಿದೆ. ತೆಲುಗು ಕುಟುಂಬಗಳೇ ತುಂಬಿರುವ ಕೆಳಗಿನ ಪೇಟೆಯಲ್ಲಿ ಮುನಿಯಮ್ಮ ಅಚ್ಚುಕಟ್ಟಾದ ಕನ್ನಡ ಮಾತನಾಡುತ್ತಾರೆ ಮತ್ತು ಹೆಚ್ಚಾಗಿ ಕನ್ನಡ ಭಾಷೆಯನ್ನು ಬಳಸುತ್ತಾರೆ. ಹಾಗಾಗಿ ಅವರಿಗೆ “ಕನ್ನಡದ ಮುನಿಯಮ್ಮ” ಎಂಬ ಹೆಸರೂ ಇದೆ.

a7368f1d-36be-48b7-bfba-be291527f495

7-8ವರ್ಷಗಳ ಹಿಂದೆ ವಡ್ಡರ ನಾರಾಣಪ್ಪ ಎಂಬುವವರಿಂದ ಮುನಿಯಮ್ಮ ದಂಪತಿಗಳು ರೂ.70ಸಾವಿರ ನೀಡಿ ಜಮೀನು ಖರೀದಿಸಿದ್ದಾರೆ. ಆದರೆ ಅದು ಪಟ್ಟಣ ಪಂಚಾಯ್ತಿಗೆ ಸೇರಿದ ಜಮೀನು, ಆ ಜಮೀನಿಗೆ ಪರ್ಯಾಯವಾಗಿ  ಬೇರೆ ಜಮೀನನ್ನು ಕೊಡುವಂತೆ ಮುನಿಯಮ್ಮ ಅವರು ಕಳೆದ 7-8ವರ್ಷಗಳಿಂದ ಸರ್ಕಾರಿ ಕಚೇರಿಗಳನ್ನು ಎಡತಾಕಿದ್ದಾರೆ. ಮುನಿಯಮ್ಮ ಅವರ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯೂ ಆಗಿದೆ, ಅದರ ಕಾಗದ ಪತ್ರಗಳು ಇನ್ನೂ ಪರಿಷ್ಕರಣೆಯ ಹಂತದಲ್ಲಿವೆ ಎನ್ನುತ್ತಾರೆ ಕಂದಾಯ ಅಧಿಕಾರಿಗಳು.

ಹಿಡಿದ ಹಠ ಸಾಧಿಸುವ ಛಲದ ಮುನಿಯಮ್ಮ ಹಕ್ಕಿನ ಭೂಮಿಗಾಗಿ ಜಿಲ್ಲೆಗೆ ಬರುವ  ಅಧಿಕಾರಿಗಳು, ರಾಜಕಾರಣಿಗಳನ್ನು ಭೇಟಿಯಾಗುವುದರಿಂದ ಎಲ್ಲರಿಗೂ ಚಿರಪರಿಚಿತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರ ಬಳಿ ತಮ್ಮ ಅಹವಾಲು ಹೇಳಿಕೊಳ್ಳಲು ಪ್ರಯತ್ನಿಸಿದ್ದರಾದರೂ  ಮುಖ್ಯಮಂತ್ರಿಗಳ ಒತ್ತಡದ ಕಾರ್ಯಕ್ರಮಗಳ ನಡುವೆ ಈಕೆಗೆ ಅವರ ಭೇಟಿ ಸಾಧ್ಯವಾಗಿಲ್ಲ ಎನಿಸುತ್ತದೆ.

ಮುಖ್ಯಮಂತ್ರಿಗಳನ್ನೇ ಖುದ್ದಾಗಿ ಭೇಟಿಯಾಗಿ ಅವರ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಬೇಕೆಂದು ನಿರ್ಧರಿಸಿದ ಮುನಿಯಮ್ಮ, ಮುಖ್ಯಮಂತ್ರಿಗಳು ಹೊರಟಿದ್ದನ್ನು ಅದು ಹೇಗೋ ತಿಳಿದುಕೊಂಡು ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಅಲ್ಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತನ್ನ ಅಹವಾಲು ಹೇಳಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನಿಯಮ್ಮನ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಾಯ ಅಧಿಕಾರಿಗಳು  ದೆಹಲಿಯಿಂದ ಮುನಿಯಮ್ಮನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಮುನಿಯಮ್ಮನ ಛಲ ಬಿಡದ ಪ್ರಯತ್ನಕ್ಕೆ ಪರಿಹಾರ ಸಿಕ್ಕಂತಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s