ಮುನಿಯಮ್ಮನ ಕಥೆಗೆ ಮುಖ್ಯಮಂತ್ರಿಗಳ ಕಣ್ಣು ತೇವ

ಆ ವೃದ್ದ ಮಹಿಳೆ ವ್ಯಾಜ್ಯದಲ್ಲಿ ಸಿಲುಕಿದ ಭೂಮಿಗೆ ಪರ್ಯಾಯವಾಗಿ ಭೂಮಿ ಪಡೆಯಲು ಸತತ ಪ್ರಯತ್ನ ನಡೆಸಿ ವಿಫಲರಾಗಿದ್ದರು, ಮುಖ್ಯಮಂತ್ರಿಗಳ ಬಳಿ ಖಂಡಿತ ಪರಿಹಾರ ಸಿಗುವುದೆಂದು ಮನಗಂಡ ಆಕೆ  ಕಡೆಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡ ಅಪರೂಪದ ಘಟನೆಗೆ ಸೋಮವಾರ ನವದೆಹಲಿಯ ಕರ್ನಾಟಕ ಭವನ ಸಾಕ್ಷಿಯಾಯಿತು.

cm-mui

ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡಿ ತಾಲೂಕಿನ ವೃದ್ದೆ ಮುನಿಯಮ್ಮಳ ಎಂಬ ಶಬರಿಯ ಕಣ್ಣೀರ ಕಥೆ. ವ್ಯಾಜ್ಯಕ್ಕೆ ಸಿಲುಕಿದ ತನ್ನ ಭೂಮಿಗೆ ಪರ್ಯಾಯವಾಗಿ ಭೂಮಿ ಪಡೆಯಲು ಅಧಿಕಾರಿಗಳ ಮನೆಗೆ ಎಡತಾಕಿದ ಮುನಿಯಮ್ಮ ಅವರಿಗೆ ನ್ಯಾಯ ಸಿಗಲಿಲ್ಲ. ಆದರೆ ಇದರಿಂದ ವಿಚಲಿತರಾಗದ ಅವರು ಮುಖ್ಯಮಂತ್ರಿಗಳನ್ನೆ ಭೇಟಿಯಾಗಿ ತನ್ನ ಸಮಸ್ಯೆಯನ್ನು ಹೇಳಿ ಕೊಳ್ಳಲು ನಿರ್ದರಿಸಿದರು.

ಮುಖ್ಯಮಂತ್ರಿಗಳು ಒತ್ತಡದ ಕಾರ್ಯಕ್ರಮಗಳಲ್ಲಿ ಇರುವುದರಿಂದ ಸಮಸ್ಯೆಯನ್ನು ವಿಶದವಾಗಿ ಹೇಳಿಕೊಳ್ಳಲು ನಿರ್ಧರಿಸಿದ ಮುನಿಯಮ್ಮ, ಅದು ಹೇಗೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳುವ ವಿಷಯವನ್ನು ತಿಳಿದುಕೊಂಡರು. ಮತ್ತು ನವದೆಹಲಿಯಲ್ಲಿ ಬಿಡುವಾಗಿ ಅವರನ್ನು ಭೇಟಿಯಾಗಲು ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದರು. ಸರಿಯಾದ ಸಮಯಕ್ಕೆ ಕರ್ನಾಟಕ ಭವನದ ಮುಂದೆ ಹಾಜರಾದ ಮುನಿಯಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬರುವಿಕೆಗಾಗಿ ಕಾಯ್ದರು.

ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಮುನಿಯಮ್ಮ ಮನವಿ ಪತ್ರದೊಂದಿಗೆ ತನ್ನ ಅಹವಾಲು ಹೇಳಿಕೊಳ್ಳಲು ಮುಂದಾದರು. ಈ ಘಟನೆಯಿಂದ ಚಕಿತರಾದ ಮುಖ್ಯಮಂತ್ರಿಗಳು ನಿಂತು ಮುನಿಯಮ್ಮ ಅವರ ಅಹವಾಲಿಗೆ ಕಿವಿಯಾದರು. ಆಕೆಯ ಭೂ ವ್ಯಾಜ್ಯ ಹೋರಾಟದ ದುಖ:ದ ಕಥೆಯನ್ನು ಕೇಳಿ ಕಣ್ಣೀರಾದ ಮುಖ್ಯಮಂತ್ರಿಗಳು ಗದ್ಗದಿತರಾದರು. ತಕ್ಷಣವೇ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿ ದೀಪ್ತಿ ಕಾನಡೆ ಅವರಿಗೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಆದ್ಯತೆಯ ಮೇಲೆ ಮುನಿಯಮ್ಮ ಅವರ ಸಮಸ್ಯೆ ಬಗೆಹರಿಸಲು ತಿಳಿಸಿದರು.cm and muniyemma

ಇದೇ ಸಂದರ್ಭದಲ್ಲಿ ಆಕೆ ಊರಿಗೆ ಹಿಂತಿರುಗಲು ತಮ್ಮ ಪರ್ಸಿನಿಂದ ಹಣ ನೀಡಿದ ಮುಖ್ಯಮಂತ್ರಿಗಳು, ಮುನಿಯಮ್ಮ ಅವರಿಗೆ ಊಟ-ಉಪಹಾರ ವ್ಯವಸ್ಥೆಗೊಳಿಸಿ ಕರ್ನಾಟಕ ಭವನದಲ್ಲಿ ತಂಗಲು ಅವಕಾಶ ಕಲ್ಪಿಸುವಂತೆ ಅದಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳ ಸ್ಪಂದನೆಯಿಂದ ಮೂಕವಿಸ್ಮಿತರಾದ ಮುನಿಯಮ್ಮ ಕಣ್ಣೀರಾದರು ಹಾಗೂ ತೃಪ್ತಿಯ ನಿಟ್ಟುಸಿರು ಬಿಟ್ಟರು. ಎರಡು ಕೈ ಜೋಡಿಸಿ ಮುಖ್ಯಮಂತ್ರಿಗಳಿಗೆ ನಮಿಸಿದರು ಮತ್ತು ದೊಡ್ಡ ಧ್ವನಿಯಲ್ಲಿ ಸಿದ್ದರಾಮಯ್ಯ ದೀರ್ಘ ಕಾಲ ಉಳಿಯಲಿ ಎಂದು ಹಾರೈಸಿದರು. ಈ ಸನ್ನಿವೇಶ ಅಲ್ಲಿ ನೆರೆದವರ ಕಣ್ಣಾಲಿಯನ್ನು ತೇವಗೊಳಿಸಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s