ರೈತರಿಗೆ ವರದಾನ ಫಸಲ್ ಭೀಮಾ ಯೋಜನೆ

DSC6459-small-1140x500ರೈತರ ನೆರವಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಬೆಳೆ ಬಾರದೇ ನಷ್ಟ ಹೊಂದುವ, ಬರ ದಿಂದ ಬೆಳೆ ನಷ್ಟ ಅನುಭವಿಸುವ ರೈತರ ನೆರವಿಗೆ ಕರ್ನಾಟಕ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಬೆಳೆ ನಷ್ಟ ಅನುಭವಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಮದ್ಯವರ್ತಿಗಳ ಕಾಟದಿಂದ ಮುಕ್ತವಾಗಿ ತ್ವರಿತವಾಗಿ ರೈತರು ನೆರವು ಪಡೆಯಲು ಅವಕಾಶವನ್ನು ಸರ್ಕಾರ ಮಾಡಿದೆ. ಈ ಕುರಿತು ನಡೆದ ಕಾರ್ಯಾಗಾರದ ಮಾಹಿತಿ ಇಲ್ಲಿದೆ.

ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವರದಾನವಾಗಿದೆ ಎಂದು ಕೃಷಿ ಇಲಾಖೆ ಆಯುಕ್ತರಾದ ಸತೀಶ್ ಜಿ. ಅವರು ತಿಳಿಸಿದರು.

DSC6459-small-1140x500

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ಸಂಸ್ಥೆಯ ಹೆಚ್.ಆರ್. ಅರಿಕೇರಿ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆ ವಿಮೆ- ಸಮಸ್ಯೆ ಮತ್ತು ಪರಿಹಾರಗಳು ಕುರಿತ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.

ರೈತರು ಬೆಳೆಯನ್ನು ಕೇವಲ ವಿಮೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯಬಾರದು.  ಇಲಾಖೆಯು ಬೆಳೆ ಕಟಾವು, ಸಂರಕ್ಷಣೆಗೆ ವೆಬ್‍ಪೋರ್ಟ್‍ನ್ನು ಸ್ಥಾಪಿಸಿದೆ.  2016 ರಲ್ಲಿ ಪ್ರಾರಂಭವಾದ ಪಿಎಂಎಫ್‍ಬಿವೈ ಯೋಜನೆಯ ರೈತರಿಗೆ ಸಾಕಷ್ಟು ನೆರವು ನೀಡಿದೆ.  ದೇಶದ ಆರ್ಥಿಕ ವ್ಯವಸ್ಥೆ ಕೃಷಿಯನ್ನು ಅವಲಂಭಿತವಾಗಿದ್ದು, ಕೃಷಿ ಬೆಳೆಗಳು ವಿಫಲವಾದರೆ ಆರ್ಥಿಕ ಸಂಕಷ್ಠ ಎದುರಾಗುತ್ತದೆ.  ಸಾಕಷ್ಟು ರೈತರು ಬೆಳೆ ವಿಮೆ ಪಡೆಯುತ್ತಿದ್ದು, ಈ ಯೋಜನೆ ಶೇ 100 ರಷ್ಟು ಪ್ರಗತಿ ಸಾಧಿಸಿಲ್ಲ.  ರೈತರು ಹವಾಮಾನಕ್ಕನುಗುಣವಾಗಿ ಬೆಳೆಗಳನ್ನು ಬೆಳೆದರೆ ಒಳಿತು ಎಂದವರು ತಿಳಿಸಿದರು.

PMFY

ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಮಲ್ಲಪ್ಪ ಮಾತನಾಡಿ ಸಮಗ್ರ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ 1985 ರಲ್ಲಿ ಆರಂಭಿಸಿತು.  ಈ ಯೋಜನೆಯಡಿ ಕೃಷಿ ಸಾಲ ಪಡೆದವರನ್ನು ಮಾತ್ರ ಸೇರಿಸಲಾಗಿತ್ತು.  1999-2000 ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಮೆ ಯೋಜನೆ ಜಾರಿಗೆ ತಂದಿತ್ತು.  2016 ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿತು.  ಆದರೂ ಈ ಯೋಜನೆಯ ಪಾಲ್ಗೊಳ್ಳ್ಳುವಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ.  ರೈತರು ಬೆಳೆ ವಿಮೆ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

1pmfyಕಾರ್ಯಕ್ರಮದಲ್ಲಿ ಅಪರ   ಕೃಷಿ ನಿರ್ದೇಶಕರಾದ ಶಿವರಾಜ್ ಮಾತನಾಡಿ 2016 ರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ರಾಜ್ಯದ ಎಲ್ಲಾ ಗ್ರಾಮ, ತಾಲ್ಲೂಕು ಪಂಚಾಯಿತಿಗಳು ಬರುತ್ತದೆ.  ಈ ಯೋಜನೆಗೆ 9 ಲಕ್ಷ ರೈತರು ಮುಂಗಾರು ಹಾಗೂ 12 ಲಕ್ಷ ರೈತರು ಹಿಂಗಾರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ.  ಕಬ್ಬು, ತಂಬಾಕು ಹೊರತುಪಡಿಸಿ 40 ಬೆಳೆಗಳು ವಿಮೆ ಸೇರಿದ್ದು, ಇವುಗಳಲ್ಲಿ  ತೋಟಗಾರಿಕೆ ಬೆಳೆಗಳು ಸೇರಿವೆ.  ಕಳೆದ ವರ್ಷ ಸರ್ಕಾರವು ಬಜೆಟ್‍ನಲ್ಲಿ ಈ ಯೋಜನೆಗೆ 845 ಕೋಟಿ ರೂ. ಮೀಸಲಿಟ್ಟಿದ್ದು,  881 ಕೋಟಿ ರೂ ಖರ್ಚಾಗಿದೆ.  (ಅನುದಾನಕ್ಕಿಂತ ಹೆಚ್ಚು ಖರ್ಚು), 2017 ರಲ್ಲಿ ಸರ್ಕಾರ  845 ಕೋಟಿಯನ್ನು ಈ ಯೋಜನೆಗೆ ಸರ್ಕಾರ ಮೀಸಲಿಟ್ಟಿದೆ.  ಬೆಳೆ ಕಟಾವಿಗೆ ಸಹ ತಂತ್ರಾಂಶ ಅಳವಡಿಸಲಾಗಿದ್ದು ಇದಕ್ಕಾಗಿಯೇ 13,800 ಸ್ಪಾರ್ಟ್ ಫೋನ್‍ಗಳನ್ನು ಬಳಸಲಾಗುತ್ತಿದೆ.  ಭೂಮಿ ತಂತ್ರಾಂಶದಿಂದ ರೈತರ ಹೆಸರು, ವಿವರಗಳನ್ನು ಅವಲಂಭಿಸಿ ವಿಮೆ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ.  ರೈತರ ವಿಮೆ ಪರಿಹಾರ ಮೊತ್ತ್ತ 128 ಕೋಟಿ ರೂ. ಇತ್ಯರ್ಥವಾಗಿದ್ದು,  ಇನ್ನೂ 516 ಕೋಟಿ ರೂ. ಪರಿಹಾರಗೊಳ್ಳದೇ ಬಾಕಿ ಉಳಿದಿವೆ.  ಕೇಂದ್ರ ಸರ್ಕಾರ 17 ವಿಮಾ ಕಂಪನಿಗಳನ್ನು ಗುರುತಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ಸೂಚಿಸಿದೆ ಎಂದರು.

ಕಾರ್ಯಾಗಾರದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ನಾಗರಾಜ್, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ ಹಾಗೂ ಇತರ ಪದಾಧಿಕಾರಿಗಳು, ವಿಮೆ, ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s