ಕಡಲ ನಗರಿಯಲ್ಲಿ ವಿಶ್ವ ಸರ್ಫಿಂಗ್ ಲೀಗ್ ಗೆ ಮುನ್ನುಡಿ

Surfing62ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಂಗಳೂರಿನಲ್ಲಿ ಇಂದು ಚಾಲನೆ ನೀಡಲಾಯಿತು.ನಗರದ ಹೊರವಲಯದ ಸಸಿಹಿತ್ಲು ಅರಬೀ ಸಮುದ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನಾ೯ಟಕದಲ್ಲಿ ಸರ್ಫಿಂಗ್  ಕ್ರೀಡೆ ಮೂಲಕ ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕ್ರೀಡಾಕ್ಷೇತ್ರಕ್ಕೆ ಮಹತ್ವದ ಮುನ್ನಡೆ ದೊರಕಿದೆ. ರಾಜ್ಯದ ಸಮುದ್ರ ತೀರಗಳನ್ನು ವಿದೇಶಗಳ ಮಾದರಿಯಲ್ಲಿ ಇನ್ನಷ್ಟು ಆಕರ್ಷಕವಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಕಾಯ೯ಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

Surfing2

2018ರಲ್ಲಿ ಮಂಗಳೂರಿನಲ್ಲಿ ವಿಶ್ವ ಸರ್ಫಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

 

ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. 2017-18ರ ರಾಜ್ಯ ಬಜೆಟ್ ನಲ್ಲಿ ಮಂಗಳೂರು ಸರ್ಫಿಂಗ್ ಕ್ರೀಡಾಕೂಟಕ್ಕೆ ಸುಮಾರು 60 ಲಕ್ಷ ರೂ. ನೀಡಿದೆ. ವಾತಾ೯ ಇಲಾಖೆಯು 1ಕೋಟಿ ರೂ. ವೆಚ್ಚದಲ್ಲಿ ಸರ್ಫಿಂಗ್ ಕ್ರೀಡಾಕೂಟಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡಿದೆ ಎಂದು ಅವರು ಹೇಳಿದರು.

Surfing5

ಶಾಸಕರಾದ  ಮೊಹಿದೀನ್ ಬಾವಾ, ಜೆ ಆರ್ ಲೋಬೋ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಡಾ ಜಗದೀಶ್, ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತಿತರರು ಇದ್ದರು. ದೇಶ ವಿದೇಶಗಳ ಸುಮಾರು 120ಕ್ಕೂ ಅಧಿಕ ಸರ್ಫಿಂಗ್ ಪಟುಗಳು ಭಾಗವಹಿಸಿದ್ದಾರೆ.


 

ಆಹಾರ ಉತ್ಸವ:

ಸರ್ಫಿಂಗ್ ಕ್ರೀಡಾಕೂಟದೊಂದಿಗೆ ಸಸಸಿಹಿತ್ಲು ಕಡಲಕಿನಾರೆಯಲ್ಲಿ ಅತ್ಯಾಕರ್ಷಕ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಆಯೋಜಿಸಲಾಗಿದೆ.

Surfing3

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಕ್ರೀಡಾ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಗರಿ ಮೂಡಿದೆ.   ಶಾಂಭವಿ ನದಿಯು ಕಡಲನ್ನು ಸೇರುವ ಸುಂದರವಾದ ಅಳಿವೆ ಪ್ರದೇಶದಲ್ಲಿ ಈ ಕ್ರೀಡಾಕೂಟದ ಮೂಲಕ ಈ ಬೀಚಿನ ನಿಸರ್ಗ ರಮಣೀಯ ಸೌಂದರ್ಯವು ಹೊರಜಗತ್ತಿಗೆ ಕಾಣುವಂತಾಗಿದೆ.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s