ಸಂಪೂರ್ಣ ಆಧುನೀಕರಣದತ್ತ ಮಲಪ್ರಭಾ ಕಾಲುವೆಗಳು

M B Patilಮಲಪ್ರಭ ಯೋಜನೆಯ ಎಡ ಮತ್ತು ಬಲದಂಡೆ ಕಾಲುವೆಗಳು ಅತ್ಯಂತ ದುಸ್ಥಿತಿಯಲ್ಲಿದ್ದು ಸಮರ್ಪಕವಾಗಿ ನೀರು ದೊರೆಯದ ಕಾರಣ  ರೈತರು ತೊಂದರೆಯಲ್ಲಿರುವುದು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕಾಳಜಿ ವಹಿಸಿ ಕಾಮಗಾರಿಯನ್ನು ತ್ವರಿತ ರೀತಿಯಲ್ಲಿ ಮುಗಿಸುತ್ತದೆ.

 

ಮಲಪ್ರಭ ಬಲದಂಡೆ ಕಾಲುವೆಯಲ್ಲಿ ಎಲೆ ಮಣ್ಣಿನ ಪ್ರದೇಶದಲ್ಲಿ ಹಾದುಹೋಗುತ್ತಿದ್ದು, ಈ ಮೊದಲು ಕಾಲುವೆ ನಿರ್ಮಾಣವನ್ನು ಮುರಂ ಪದರವನ್ನು ಒದಗಿಸಿ ಕಾಲುವೆ ತಳದಲ್ಲಿ ಕಾಂಕ್ರೀಟ್ ಒದಗಿಸಿ, ಬದಿಗಳಿಗೆ ಪಿ.ಸಿ.ಸಿ. ಸ್ಲ್ಯಾಬ್‍ಗಳನ್ನು ಒದಗಿಸಲಾಗಿತ್ತು.  ಈ ಕಾಲುವೆಯ ಲೈನಿಂಗ್ ಸುಮಾರು 25 ವರ್ಷಗಳ ಹಿಂದ ನಿರ್ಮಿಸಿದ್ದು ಎರೆ ಮಣ್ಣಿನ ಗುಣಧರ್ಮದಿಂದ ಕುಗ್ಗುವಿಕೆ ಹಾಗೂ ಹಿಗ್ಗುವಿಕೆ ಪರಿಣಾಮದಿಂದ ಬಹಳಷ್ಟು ಕಡೆ ಕಾಲುವೆ ಹಾಳಾಗಿದ್ದು ದುಸ್ಥಿತಿಯಲ್ಲಿದೆ ಎಂದು ಬಹೃತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

 

ವಿಧಾನ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು ಕಾಲುವೆ ಆಧುನೀಕರಣ ಮಾಡಿ ಮುಖ್ಯ ಕಾಲುವೆ ಹಾಗೂ ಹಂಚು ಕಾಲುವೆಗಳ ಮುಖಾಂತರ ನೀರನ್ನು ತ್ವರಿತವಾಗಿ ಹಾಗೂ ಸರಾಗವಾಗಿ ನೀರು ಹರಿಸಲು ಮತ್ತು ಕಾಲುವೆಗಳಲ್ಲಿ ನೀರು ಇಂಗುವುದನ್ನು ತಡೆಗಟ್ಟಿ ನೀರು ಉಳಿತಾಯ ಮಾಡಿ ಅಚ್ಚುಕಟ್ಟಿನ ಕೊನೆಯ ಭಾಗದವರೆಗೆ ನೀರನ್ನು ಹರಿಸುವ ಉದ್ದೇಶವಿದೆ.  ಮಲಪ್ರಭ ಯೋಜನೆಯಲ್ಲಿ ನೀರಿನ ಲಭ್ಯತೆಯ ಕೊರತೆಯಿದ್ದು, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಅವಶ್ಯಕತೆ ಇದೆ ಎಂದರು.

0

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಲಹೆಯ ಮೇರೆಗೆ ಡಿಪಿಆರ್‍ನ್ನು 1120.00 ಕೋಟಿಗಳಿಗೆ ರೂ.ಗಳಿಗೆ ತಯಾರಿಸಲಾಗಿದ್ದು, ಇದಕ್ಕೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆದು, ಟೆಂಡರ್ ಕರೆದು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಕಾಮಗಾರಿ ಪೂರ್ಣಗೊಳಿಸಿ ಆ ಭಾಗದ 4 ಜಿಲ್ಲೆಗಳ ಜನರಿಗೆ ಅನುಕೂಲವಾಗುವ ರೀತಿ ಮಾಡುತ್ತೇವೆ ಎಂದು ತಿಳಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s