ಬಾಳೆ ಬೆಳೆ ಇಳುವರಿಗೆ ಹೀಗೆ ಮಾಡಿ

ಬಾಳೆ ಗಿಡದ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಲು ಸೂಕ್ಷ್ಮ ಪೋಷಕಾಂಗಳ ಮಿಶ್ರಣವನ್ನು ಬಾಳೆ ಸ್ಪೆಷಲ್ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ.

ಬಾಳೆ ಸ್ಪೆಶಲ್ ಸಿಂಪಡಣೆ:

Banana_plan_web

125 ಗ್ರಾಂ ಬಾಳೆ ಸ್ಪೆಷಲ್ ಪೋಷಕಾಂಶದ ಮಿಶ್ರಣವನ್ನು 25 ಲೀಟರ್ ನೀರಿನಲ್ಲಿ ಕರಗಿಸಿ ಅದಕ್ಕೆ ಒಂದು ಲಿಂಬೆ ಹಣ್ಣಿನ ರಸ ಹಾಗೂ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಒಂದು ರೂಪಾಯಿ ಮೌಲ್ಯದ ಒಂದು ಶಾಂಪೂ ಸ್ಯಾಚೆಯ ಸಾಬೂನನ್ನು ನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುವುದು.

ಈ ರೀತಿ ತಯಾರಿಸಿದ ದ್ರಾವಣವನ್ನು ಬಾಳೆ ಸಸ್ಯದ ಎಲೆಗಳ ಮೇಲೆ ಒಟ್ಟು ಐದು ಹಂತಗಳಲ್ಲಿ ಸಿಂಪರಣೆ ಮಾಡಬೇಕಾಗುತ್ತದೆ. ಮೊದಲ ಸಿಂಪರಣೆಯನ್ನು ನಾಟಿ ಮಾಡಿದ 5 ತಿಂಗಳ ನಂತರ ಹಾಗೂ ಉಳಿದ ಸಿಂಪರಣೆಗಳನ್ನು ನಾಟಿ ಮಾಡಿದ 6,7 ಹಾಗೂ 8 ತಿಂಗಳ ನಂತರ ಗಿಡಗಳ ಎಲೆಗಳ ಮೇಲೆ ಸಿಂಪಡಿಸಬೇಕು. ನಂತರದ ಸಿಂಪರಣೆಯನ್ನು ಹೂವು ಹಾಗೂ ಗೊನೆಗಳ ಮೇಲೆ ಸಿಂಪಡಿಸುವುದು.

ತಂತ್ರಜ್ಞಾನ:

bananaplantationಉತ್ತಮ ಗುಣಮಟ್ಟದ ಆಕರ್ಷಕ ಹಾಗೂ ಬಾಳೆಯ ಹಣ್ಣಿನ ಗಾತ್ರವನ್ನು ಅಧಿಕಗೊಳಿಸಲು ಬಾಳೆಯ ಮಿಡಿಗಳು ಕಚ್ಚಿದ ನಂತರ ಹೂ ಮೊಗ್ಗನ್ನು ಕಡಿದು ಹಾಕುವುದು ಹಾಗೂ ಕಡಿದ ದೇಟಿನ ತುದಿಯಿಂದ ಪೋಷಕಾಂಶಗಳನ್ನು ಒದಗಿಸುವ ಸುಲಭವಾದ ತಂತ್ರಜ್ಞಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ರವರು ಅಭಿವೃದ್ಧಿಪಡಿಸಿದ್ದಾರೆ.

ಬಾಳೆ ಗೊನೆ ಬಿಟ್ಟನಂತರ ಎಲ್ಲಾ ಕಾಯಿಗಳು ಕಚ್ಚಿ, 8 ರಿಂದ 10 ಹೂ-ಪಕಳೆಗಳು ಉದುರಿದ ನಂತರ ಸುಮಾರು 6 ಇಂಚು ಉದ್ದದ ದಿಂಡನ್ನು ಹೂಮೊಗ್ಗಿನ ಮೇಲ್ಭಾಗದಲ್ಲಿ ಸೊಟ್ಟದಾಗಿ ಹರಿತವಾದ ಚಾಕುವಿನಿಂದ ಕತ್ತರಿಸಬೇಕು. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಹಸುವಿನ ಸಗಣಿಯಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಪೋಷಕಾಂಶಗಳನ್ನು ಕರಗಿಸಿ ದಿಂಡಿನ ತುದಿಯನ್ನು ಮುಳುಗಿಸಿ ಗಟ್ಟಿಯಾದ ದಾರದಿಂದ ಕಟ್ಟಬೇಕು.

Banana-Farming

ರೋಬಸ್ಟಾ ಜಾತಿಯ ಬಾಳೆಯಲ್ಲಿ ಅರ್ಧ ಕಿ.ಗ್ರಾಂ ತಾಜಾ ಹಸುವಿನ ಸಗಣಿಯನ್ನು 7.5 ಗ್ರಾಂ ಯೂರಿಯಾ ಹಾಗೂ 7.5 ಗ್ರಾಂ ಸಲ್ಫೇಟ್ ಆಫ್ ಪೊಟ್ಯಾಷ್‍ಗಳನ್ನು ಸುಮಾರು 100 ಮಿ.ಲೀ. ನೀರು ಸೇರಿಸಿ ಚೆನ್ನಾಗಿ ಕದಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಟ್ಟಬೇಕು.

ಏಲಕ್ಕಿ ಬಾಳೆಯಲ್ಲಿ ಮೇಲೆ ತಿಳಿಸಿದಂತೆ ಪ್ರತಿ ಗೊನೆಗೆ 2.5 ಗ್ರಾಂ ಯೂರಿಯಾ ಹಾಗೂ 2.5 ಗ್ರಾಂ ಸಲ್ಫೇಟ್ ಆಫ್ ಪೊಟ್ಯಾಷ್‍ಗಳನ್ನು ಉಪಯೋಗಿಸಬೇಕು. ಗ್ರಾಂಡ್ ನೈನ್ ತಳಿಯ ಬಾಳೆ ಗೊನೆಗೆ ತಲಾ 10 ಗ್ರಾಂ ಯೂರಿಯಾ ಹಾಗೂ 10 ಗ್ರಾಂ ಸಲ್ಫೇಟ್ ಆಫ್ ಪೊಟ್ಯಾಷ್‍ಗಳನ್ನು ಉಪಯೋಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸ ಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s