ಸಾಮಾಜಿಕ ನ್ಯಾಯಕ್ಕೆ ಅಂಬೇಡ್ಕರ್ ಮಾದರಿ

102ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತೀಯ ಸಾಮಾಜಿಕ , ರಾಜಕೀಯ, ಆರ್ಥಿಕ ಸುಧಾರಣೆಗಳಿಗೆ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅಂಬೇಡ್ಕರ್ ಅವರ ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದೆ. “ಸಾಮಾಜಿಕ ನ್ಯಾಯ ಮತ್ತು ಡಾ ಬಿ ಆರ್ ಅಂಬೇಡ್ಕರ್” ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ರಾಜ್ಯ ಸರ್ಕಾರ ಆಯೋಜಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಧರ್ಮ ಗುರು ದಲೈ ಲಾಮಾ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರುಗಳಾದ ಹೆಚ್ ಆಂಜನೇಯ ಮತ್ತು ಡಾ ಹೆಚ್ ಸಿ ಮಹದೇವಪ್ಪ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ವರದಿ ಇಲ್ಲಿದೆ.

 

‘ತಾರತಮ್ಯ’ ಸಾಮಾಜಿಕ ವ್ಯವಸ್ಥೆಯ ಕೊಡುಗೆ

02de3c07-0c05-4635-b1ee-99a9623df478

ಯಾವ ಧರ್ಮವೂ ಸಾಮಾಜಿಕ ತಾರತಮ್ಯವನ್ನು ಬೋಧಿಸುವುದಿಲ್ಲ; ಅದು ಸಾಮಾಜಿಕ ವ್ಯವಸ್ಥೆಯ ಕೊಡುಗೆ, ಊಳಿಗಮಾನ್ಯ ಪದ್ಧತಿಯ ಪರಿಣಾಮ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಷ್ಕೃತ ಧರ್ಮ ಗುರು ದಲೈ ಲಾಮಾ ಅವರು ಅಭಿಪ್ರಾಯಪಟ್ಟರು.

 

ಅವರು  ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮವರ್ಷಾಚರಣೆ ಮತ್ತು ಅಂತರರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ “ಸಾಮಾಜಿಕ ನ್ಯಾಯ ಮತ್ತು ಡಾ. ಬಿ.ಆರ್. ಅಂಬೇಡ್ಕರ್” ಎಂಬ ವಿಷಯದ ಕುರಿತ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಪ್ರಧಾನ ಭಾಷಣ ಮಾಡಿದರು.  ಜಾತಿ ವ್ಯವಸ್ಥೆಯು ಶೋಷಣೆಯ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಶೋಷಿತ ವರ್ಗದವರು ಆತ್ಮವಿಶ್ವಾಸ, ಪರಿಶ್ರಮ ಮತ್ತು ಶಿಕ್ಷಣದ ಮೂಲಕ ಸಮಾನತೆಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.

 

ಪ್ರಾಚೀನ ನಾಗರಿಕತೆಗಳಲ್ಲಿ ಸಿಂಧೂ ಕಣಿವೆ ನಾಗರಿಕತೆ ಅತ್ಯಂತ ಅಭಿವೃದ್ಧಿ ಹೊಂದಿದ ನಾಗರೀಕತೆಯಾಗಿತ್ತು. ವಿಶ್ವಕ್ಕೆ ಮಾದರಿಯಾಗಿತ್ತು. ಜ್ಞಾನ ಮತ್ತು ಅದರ ಬಳಕೆಗೆ ಭಾರತ ಹೆಸರುವಾಸಿಯಾಗಿದೆ ಎಂದ ಅವರು ಭಾರತವನ್ನು ಗುರು ಹಾಗೂ ಟಿಬೆಟ್‍ನ್ನು ಶಿಷ್ಯನಿಗೆ ಹೋಲಿಸಿದರು. ಟಿಬೆಟ್ ಭಾರತದ ವಿಧೇಯ ಶಿಷ್ಯ. ಸತತ ಅಧ್ಯಯನದಿಂದ ಭಾರತದ ಪ್ರಾಚೀನ ಪರಂಪರೆಯನ್ನು ಕಾಪಿಡುವ ಕೆಲಸ ಮಾಡಿದ್ದೇವೆ ಎಂದು ಬಣ್ಣಿಸಿದರು.

 

057aa77c-6e74-47af-a158-27c7635c6de2ಬುದ್ಧ ಧರ್ಮ ಭಾರತೀಯ ಧರ್ಮ. ಪ್ರಾಚೀನ ಭಾರತೀಯ ಜ್ಞಾನದ ಪುನರುತ್ಥಾನ ಇಂದಿನ ಅಗತ್ಯವಾಗಿದೆ. ಕರುಣೆ ಮತ್ತು ಅಹಿಂಸೆ ಎಲ್ಲ ಧರ್ಮಗಳ ಸಾರ. ಎಲ್ಲ ಧರ್ಮಗಳ ತಾತ್ವಿಕ ನೆಲೆಗಟ್ಟು ಬೇರೆಯಾದರೂ ಸೌಹಾರ್ದತೆ, ಶಾಂತಿಯೇ ಅವುಗಳ ತಿರುಳು ಎಂದು ಅವರು ವಿವರಿಸಿದರು.

 

ಆಧುನಿಕ ವಿಜ್ಞಾನ, ತಂತ್ರಜ್ಞಾನ, ಸೌಕರ್ಯಗಳು ಭೌತಿಕ ಸುಖ ನೀಡಿದರೆ, ಅದರೊಂದಿಗೆ ಪ್ರಾಚೀನ ಭಾರತದ ಜ್ಞಾನವು ಆಂತರಿಕ ಶಾಂತಿಯನ್ನು ಕಾಪಾಡುತ್ತದೆ. ಇವೆರಡೂ ಜೊತೆಯಾದಾಗ ಬದುಕು ಸುಂದರವಾಗಿರುತ್ತದೆ. ಇಂದು ಮನುಷ್ಯರೆಲ್ಲಾ ಒಂದೇ ಎಂಬ ಮನೋಭಾವದ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಅವರು ತಿಳಿಸಿದರು.ಭಾರತೀಯ ಸಂವಿಧಾನವನ್ನು ಅದ್ಭುತವೆಂದು ಬಣ್ಣಿಸಿದ ಅವರು ಅರಿವು ಮತ್ತು ಪರಂಪರೆ ಜೊತೆಯಾಗಿ ಬೆಳೆಯಬೇಕು ಎಂದು ಹಾರೈಸಿದರು.

 

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಅಂಬೇಡ್ಕರ್ ಸ್ಪೂರ್ತಿ:ಸಿಎಂ

8737c335-e985-4011-993f-ac1300d15611

 

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಮೀಸಲಾತಿಯ ವಿಷಯಗಳು ಜಾತಿ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ಮೇಲ್ವರ್ಗದವರು, ಶೋಷಿತರು ಒಟ್ಟಾಗಿ ಚಿಂತನೆ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಜೀವಂತವಾಗಿರುವ ವರೆಗೆ ಮೀಸಲಾತಿ ಇರಲೇ ಬೇಕು ಎಂದು ಪ್ರತಿಪಾದಿಸಿದ್ದರು. ಅಧಿಕಾರ ಶ್ರೀಮಂತರ ಕೈಯಲ್ಲೇ ಇರಬಾರದು, ಎಲ್ಲರಿಗೂ ಹಂಚಿಕೆಯಾಗಬೇಕು ಎಂದು ಅವರು ಹೇಳಿದ್ದರು. ಅಲ್ಲದೆ, ಸಂವಿಧಾನದಲ್ಲಿ ಎಲ್ಲರಿಗೂ ಅಧಿಕಾರ ನೀಡುವ ಅವಕಾಶ ಕಲ್ಪಿಸಿದರು. ಎಲ್ಲರೂ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೆ, ಅವಕಾಶ ವಂಚಿತರ ಪರವಾಗಿ ಕೆಲಸ ಮಾಡಬೇಕು. ಇದು ನಾವು ಅಂಬೇಡ್ಕರರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

1f7f514c-4cbd-4fae-ac50-4c7b4c907960

ಜಾತಿ ವ್ಯವಸ್ಥೆ ಹೋದರೆ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಮಾಜಿಕ ಸ್ವಾತಂತ್ರ್ಯವೂ ಬೇಕು. ಆಗ ಆರ್ಥಿಕ  ಸ್ವಾತಂತ್ರ್ಯವೂ ಬರುವುದು ಎಂದು ಅವರು ತಿಳಿಸಿದರು.

 

ಸಾಮಾಜಿಕ ಕಂದರ ಏರ್ಪಡಲು ಜಾತಿ ವ್ಯವಸ್ಥೆ ಕಾರಣ. ತಾರತಮ್ಯ, ದೌರ್ಜನ್ಯ ನಿವಾರಣೆ ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಆಚರಣೆ ಮಾಡುವವರೂ ಕೂಡ ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ನುಡಿದರು.

 

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವವರಿಗೆ ಸ್ಫೂರ್ತಿ ಅಂಬೇಡ್ಕರ್ ಅವರು. ಅವರಿಲ್ಲದೆ ಇದ್ದರೆ, ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವದ ತಳಹದಿಯಲ್ಲಿ ಸಂವಿಧಾನ ಜಾರಿಗೆ ಬರುತ್ತಿರಲಿಲ್ಲ. ಅಂಬೇಡ್ಕರರಿಗೆ ಅಂಬೇಡ್ಕರರೇ ಸಾಟಿ ಎಂದು ಬಣ್ಣಿಸಿದರು.

 

 

ರಾಜಕೀಯದಲ್ಲಿ ಸಕ್ರಿಯವಾದ ನುರಿತ ರಾಜಕೀಯ ತಜ್ಞ:

7ae6f31c-00b2-4d41-87da-cb3251b707b1

 

ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಜಕೀಯದಲ್ಲಿ ಸಕ್ರಿಯರಾಗಿದ್ದ ಏಕೈಕ ನುರಿತ ಆರ್ಥಿಕ ತಜ್ಞ ಅಂಬೇಡ್ಕರ್ ಅವರು, ಸಂವಿಧಾನದ ಪಿತಾಮಹ. ದಲಿತರ ವಿಮೋಚನೆಗಾಗಿ ಹೋರಾಡಿದವರು ಎಂದು ಅವರನ್ನು ಗುರುತಿಸಲಾಗುತ್ತದೆ. ಆದರೆ ಅದನ್ನೂ ಮೀರಿ ಅಭಿವೃದ್ಧಿಯ ವಿಚಾರಗಳಲ್ಲೂ, ವಿಶೇಷವಾಗಿ ನೀರಾವರಿಗೆ ಸಂಬಂಧಿಸಿದಂತೆ ಪರಿಣತಿ ಹೊಂದಿದ್ದರು. ದಾಮೋದರ ಕಣಿವೆ ಯೋಜನೆ ಹಾಗೂ ಹಿರಾಕುಡ್ ಅಣೆಕಟ್ಟು ಯೋಜನೆಗಳಿಗೆ ಅವರು ಆದ್ಯತೆ ನೀಡಿದ್ದು, ಇದಕ್ಕೆ ಸಾಕ್ಷಿ ಎಂದು ಅವರು ವಿವರಿಸಿದರು.

18581518_1586205228056828_9059262694343537032_n

ಸ್ವತಃ ಸಾಮಾಜಿಕ ತಾರತಮ್ಯಗಳಿಗೆ ಬಲಿಪಶುವಾಗಿದ್ದ ಅಂಬೇಡ್ಕರ್ ಅವರು ದಲಿತರ ವಿಮೋಚನೆಗಾಗಿ ಹೋರಾಡಿದರು, ಮಾತ್ರವಲ್ಲ. ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ದಲಿತರಿಗಾಗಿ ಮೇಲ್ಜಾತಿಯವರ ವಿರುದ್ಧ ಮಾತ್ರವಲ್ಲ, ಬ್ರಿಟಿಷರ ವಿರುದ್ಧವೂ ಹೋರಾಡಿದರು. ಇವರ ವಿಚಾರಗಳು, ಪ್ರತಿಪಾದನೆಗಳು ವಾಸ್ತವಾಂಶಗಳನ್ನು ಆಧರಿಸಿದ್ದವು. ಈ ಕಾರಣಕ್ಕಾಗಿಯೇ ಬ್ರಿಟಿಷರು ಇವರನ್ನು ದೇಶ ವಿಭಜನೆಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಣ್ಣಿಸಿದರು.

 

ಶೋಷಿತ ವರ್ಗದವರಿಗೆ ರಾಜಕೀಯ ಅಧಿಕಾರ ಒದಗಿಸಲು ಅಂಬೇಢ್ಕರರೇ ಮೂಲ ಕಾರಣ. ತಾರತಮ್ಯ ನಿವಾರಣೆಗೆ ಶಿಕ್ಷಣ ಅತ್ಯಂತ ಮಹತ್ವಪೂರ್ಣ ಎಂದು ಅವರು ಅರಿತಿದ್ದರು ಎಂದು ತಿಳಿಸಿದರು.

 

 

ಸಾಮಾಜಿಕ ನ್ಯಾಯಕ್ಕೆ ಬದ್ದ:

a78ba0aa-615d-457f-83e4-7c07ca82c9ea

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಮಾತನಾಡಿ, ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ದಿಸೆಯಲ್ಲಿ ಗುಡಿಸಲುಗಳಲ್ಲಿ ಈಗಲೂ ವಾಸಿಸುತ್ತಿರುವ ಎಲ್ಲ ಪರಿಶಿಷ್ಟ ಜಾತಿ/ಪಂಗಡದವರಿಗೆ ಮನೆ ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಸುಮಾರು 4 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಅಂತೆಯೇ ಸರ್ಕಾರವು ಶೋಷಿತ ವರ್ಗದವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು.

9c1c8161-c8dd-4ed3-85e7-f5697f3b8d37

ವಿಚಾರ ಸಂಕಿರಣದ ಅಂಗವಾಗಿ ಹೊರತಂದ ಹೊತ್ತಿಗೆಗಳನ್ನು ಗಣ್ಯರು ಬಿಡುಗಡೆ ಮಾಡಿದರು

ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಪಿ.  ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s