ಮಾಹಿತಿಯ ಅರಿವಿಗೊಂದು ಬೀದಿ ನಾಟಕ

9ee87669-126b-45e5-beb4-2cb50c9c3428ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ  ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಪ್ರಕಟಣೆ, ಹೊತ್ತಿಗೆ, ಮಾಹಿತಿ ಉತ್ಸವ, ಧ್ವನಿ ಬೆಳಕು ಕಾರ್ಯಕ್ರಮ ಹೀಗೆ ಹತ್ತು ಹಲವು ಮಾರ್ಗಗಳಲ್ಲಿ ಕಾರ್ಯ ಚಟುವಟಿಕೆಯನ್ನು ನಡೆಸುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮದಲ್ಲಿ ಬೀದಿ ನಾಟಕಗಳಿಗೆ ಆದ್ಯತೆ ನೀಡಿದೆ.

ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಮನವರಿಕೆ ಮಾಡ ಬಹುದು. ಸಮಾಜದ ಒಳಗಿನ ಪಾತ್ರಗಳೇ ಬೀದಿ ನಾಟಕದ ಪಾತ್ರದಾರಿಗಳಾಗಿ ಮಾಹಿತಿಯನ್ನು ಎಳೆ ಎಳೆಯಾಗಿ ಬಿಡಿಸಿಡುವ ಕೆಲಸ ಮಾಡುತ್ತವೆ. ಇದು ಗ್ರಾಮೀಣ ಪರಿಸರದ ಜನ ತಮ್ಮ ನಡುವಿನ ಪಾತ್ರಗಳ ಮೂಲಕ ಗಂಭೀರ, ತಮಾಷೆ ಸನ್ನಿವೇಶಗಳ ಮೂಲಕ ಅರಿವಿಗೆ ತಂದು ಕೊಳ್ಳುತ್ತಾರೆ.

 

4b0634ca-2d9a-4abb-877c-a45e9f280cd4ಈ ಕಾರ್ಯಕ್ರಮಕ್ಕಾಗಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ, ಸೂಕ್ತ ತರಬೇತಿ ನೀಡಿ ನಿಗದಿತ ಕಾಲಮಿತಿ ನೀಡಿ ಸಂಚಾರಿ ಬೀದಿ ನಾಟಕ ಪ್ರದರ್ಶಿಸಲು ಕಳುಹಿಸಲಾಗುತ್ತದೆ. ಸಂಕ್ಷಿಪ್ತವಾಗಿ ಮತ್ತು ನೇರವಾಗಿ ಯೋಜನೆಯ ಕುರಿತು ತಿಳುವಳಿಕೆ ನೀಡುವ ಕೆಲಸ ಬೀದಿ ನಾಟಕದ ಮೂಲಕ ಆಗುತ್ತದೆ. ದೃಶ್ಯ ಮತ್ತು ಶ್ರವಣ ಮಾಧ್ಯಮಗಳು ವೇಗವಾಗಿ ಸ್ಪಂದನೆಗೆ ಸಿಗುವುದರಿಂದ ಮತ್ತು ಸಮುದಾಯದೊಳಗಿನ ಪಾತ್ರಗಳೇ ಅಭಿನಯಿಸುವುದರಿಂದ ವೀಕ್ಷಕರನ್ನು ಅಲ್ಲಿ ತಮ್ಮನ್ನು ಗುರುತಿಸಿ ಕೊಳ್ಳುತ್ತಾರೆ. ಹೀಗಾಗಿ  ಇದೊಂದು ಯಶಸ್ವಿ ಗ್ರಾಮ ಸಂಪರ್ಕ ಕಾರ್ಯಕ್ರಮವಾಗಿದೆ.

ಆಯ್ಕೆ ನಿಯಮಗಳೇನು?

c314894e-a771-4322-87de-967f7e80a92cಪ್ರತಿಯೊಂದು ಬೀದಿ ನಾಟಕ ತಂಡದಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಕಲಾವಿದರು ಹಾಗೂ ಒಬ್ಬರು ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಒಟ್ಟು ಹತ್ತು (10) ಜನ ಕಲಾವಿದರು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸ್ಥಳೀಯ ಜಿಲ್ಲೆಯವರಾಗಿರಬೇಕು.  ಇದರಲ್ಲಿ 08 ಜನ ಕಲಾವಿದರು ತಂಡದಲ್ಲಿ ಕಡ್ಡಾಯವಾಗಿ ಇರಬೇಕು ಉಳಿದ ಇಬ್ಬರು ಬದಲಿ ಕಲಾವಿದರಾಗಿ ಇರಬೇಕು.

ಬೀದಿನಾಟಕ ಕಲಾ ತಂಡಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತು ಪಾನ್‍ಕಾರ್ಡ್ ಹಾಗೂ ಎಂಟು ಜನ ಕಲಾವಿದರ ಬ್ಯಾಂಕ್ ಖಾತೆ ಮತ್ತು ಪಾನ್‍ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.  ತಂಡವು ನೊಂದಾಯಿಸಿದ ನೋಂದಣಿ ಪ್ರತಿ ಮತ್ತು ಕಳೆದ ಮೂರು ವರ್ಷದ ಆಡಿಟ್ ಪ್ರತಿ ಹಾಗೂ 10 ಜನ ಸದಸ್ಯರನ್ನೊಳಗೊಂಡ 4*6 ಅಳತೆಯ 2 ಭಾವಚಿತ್ರ ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯ.

ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಹಾಗು ಕಾರ್ಯಕ್ರಮಗಳನ್ನು  ಬೀದಿನಾಟಕ ಕಲಾ ತಂಡಗಳು ತಮ್ಮ ಕಲೆಯ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಅರಿವು ಮುಟ್ಟಿಸಬೇಕಾಗುತ್ತದೆ.  ತಂಡಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ತಂಡಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಸರಿಯಾದ ದಾಖಲೆಗಳನ್ನು ನೀಡಿದ ತಂಡಗಳಿಗೆ ಮಾತ್ರ ಸಂದರ್ಶನ ಪತ್ರ ಕಳುಹಿಸಲಾಗುತ್ತದೆ ಹಾಗೂ ಆ ತಂಡಗಳು ಸಮಿತಿಯ ಮುಂದೆ ಹಾಜರಾಗಿ ಕಾರ್ಯಕ್ರಮ ನೀಡಬೇಕಾಗುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s