ಮಾವು ಬೆಳೆಗೆ ಅನುಸರಿಸ ಬೇಕಾದ ಕ್ರಮಗಳೇನು?

Mango_tree_in_flower_Aಮಾವು ಬೆಳೆಗೆ ಇದು ಸಕಾಲ,  ಅವಧಿಯಲ್ಲಿ ಮಾವು ಬೆಳೆಯ ಪಾಲನೆ ಮತ್ತು ಪೋಷಣೆಯನ್ನು ಆದ್ಯತೆಯ ಮೇಲೆ ಮಾಡ ಬೇಕಾಗುತ್ತದೆ. ತಜ್ಞರ ಸಲಹೆ, ಮಾವು ಬೇಸಾಯದಲ್ಲಿ ಪರಿಣಿತಿ ಹೊಂದಿದ ರೈತರ ಮಾರ್ಗದರ್ಶನ ಮಾವು ಉತ್ಪಾದನೆಯನ್ನು ಹೆಚ್ಚಿಸ ಬಹುದು. ಗುಣಮಟ್ಟದ ಇಳುವರಿ ಹಾಗೂ ಪಾಲನೆ ಪೋಷಣೆ ಕುರಿತು  ಕೋಲಾರ ಜಿಲ್ಲೆಯ ತೋಟಗಾರಿಕೆ ಇಲಾಖೆ ಮಾವು ಬೆಳೆ ಬೇಸಾಯದಲ್ಲಿ ಅನುಸರಿಸ ಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ವಿವರಗಳು ಇಲ್ಲಿವೆ.

ಮಾವು ಬೆಳೆ ರಕ್ಷಣೆಗೆ ಕ್ರಮಗಳು

mango

ಕಾಲಕ್ಕೆ ತಕ್ಕಂತೆ ಸರಿಯಾದ ರೀತಿಯಲ್ಲಿ ಮಾವು ಬೆಳೆಯನ್ನು ನಿರ್ವಹಣೆ ಮಾಡದೇ ಹೋದಲ್ಲಿ ರೋಗ ಮತ್ತು ಕೀಟಗಳ ಬಾಧೆ ಹಾಗೂ ಇಳುವರಿಯಲ್ಲಿ ಕುಂಠಿತವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಫಲಾನುಭವಿಗಳು ಈ ಕೆಳಗೆ ಸೂಚಿಸಿರುವಂತೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

 

ಬೇಸಿಗೆಯಲ್ಲಿ ಎರಡು ಬಾರಿ  ದೊಡ್ಡ ಅಗೆತ ನೇಗಿಲಿನಿಂದ ಉಳುಮೆ ಮಾಡುವುದು ಮತ್ತು ಭೂಮಿಯನ್ನು ಸಮತಟ್ಟು ಮಾಡುವುದು.   ಹೆಚ್ಚಿನ ಸಾಂಧ್ರತೆಯುಳ್ಳ ನೆಡುತೋಪುಗಳಿಗಾಗಿ ಸಾಲುಗಳು ಮತ್ತು ಸಸ್ಯಗಳನ್ನು 5 ಮೀ. ಅಂತರದಲ್ಲಿ ನೆಡಲು ಅಗೆಯುವ ಗುಂಡಿಗಳ ಹೊಂದಾಣಿಕೆ ಮಾಡುವುದು ಮತ್ತು ಗೂಟದಿಂದ ಗುರುತು ಮಾಡುವುದು ಹಾಗೂ ಸಾಮಾನ್ಯ ನೆಡುತೋಪುಗಳಿಗೆ 9 ಮೀ. ಅಂತರ ನೀಡಬೇಕು. ಗುಂಡಿಯ ಗಾತ್ರ/ಅಳತೆ 90*90*90 ಸೆಂ.ಮೀ.ಇರಬೇಕು.  ಗುಂಡಿ ಅಗೆಯುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು – ಅಗೆದ (1 ಅಡಿ) ಮೇಲ್ಭಾಗದ ಮೇಲ್ಪದರದ ಮಣ್ಣನ್ನು ಎಡಭಾಗದಲ್ಲಿ ಇರಿಸುವುದು. ಅಗೆದ ಗುಂಡಿಯನ್ನು ತುಂಬುವ ಮೊದಲು ಮಣ್ಣಿನಿಂದ ಬರುವ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸೂಯನ ಕಿರಣಗಳಿಗೆ ಗುಂಡಿಗಳನ್ನು 2 ವಾರಗಳವರೆಗೆ ತೆರೆದಿಡಬೇಕು.

mango cropಸರ್ಕಾರದ ವಿಶ್ವಾಸಾರ್ಹ ನರ್ಸರಿಗಳಿಂದ ಮತ್ತು ತೋಟಗಾರಿಕೆ ಇಲಾಖೆ ಶಿಫಾರಸ್ಸು ಮಾಡಿದ ನರ್ಸರಿಗಳಿಂದ ಸಸಿಗಳನ್ನು ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು.  ಹಣ್ಣು ಬಿಡುವ ಮರಗಳಿಂದ ಮಾವಿನ ಹಣ್ಣುಗಳನ್ನು ಸರಿಯಾಗಿ ಪಕ್ವವಾದ ನಂತರ ಸುಧಾರಿತ ಕ್ರಮಗಳನ್ನು ಅನುಸರಿಸುವುದರೊಂದಿಗೆ ಕಟಾವು ಮಾಡಬೇಕು.   ಹಳೆಯ ತೋಟಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಇದ್ದಲ್ಲಿ, ಹೀಲರ್ ಕಮ್ ಸೀಲರ್ ಚಿಕಿತ್ಸೆಯನ್ನು ನೀಡಬೇಕು.   ಪ್ಯಾಕ್‍ಹೌಸ್ ಹೊಂದಿರುವ ರೈತರು ಕೊಯ್ಲು ಮುಂಚಿನ ಹಾಗೂ ಕೊಯ್ಲೋತ್ತರ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು.

 

mango (1)ಹಣ್ಣುಗಳನ್ನು ಮಾಗಿಸಲು ಐಐಹೆಚ್‍ಆರ್, ಬೆಂಗಳೂರು ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಮಾವು ಮಾಗಿಸುವ ಘಟಕಗಳನ್ನು ಉಪಯೋಗಿಸಿಕೊಳ್ಳುವುದು.  ಹಣ್ಣು ನೊಣ ಮತ್ತು ಚಿಬ್ಬು ರೋಗದ ಹಾನಿಯನ್ನು ತಡೆಗಟ್ಟುವ ಸಲುವಾಗಿ ಐಐಹೆಚ್‍ಆರ್, ಬೆಂಗಳೂರು ವತಿಯಿಂದ ಶಿಫಾರಸ್ಸು ಮಾಡಿದಂತೆ ಕೊಯ್ಲು ಮಾಡಲಾದ ಹಣ್ಣುಗಳನ್ನು ಬಿಸಿ ನೀರಿನಲ್ಲಿ ಉಪಚರಿಸಬೇಕು.  ಕೊಯ್ಲು ಮಾಡಲಾದ ಹಣ್ಣುಗಳನ್ನು ವಿಂಗಡಣೆ ಮತ್ತು ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವುದು.

 

ದೂರದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಪ್ಯಾಕಿಂಗ್ ಸಾಮಗ್ರಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಪ್ಯಾಕಿಂಗ್‍ಗಳಲ್ಲಿ ಕಳುಹಿಸಿಕೊಡುವುದು.  ಮಾವಿನ ಹಣ್ಣಿನ ಹಣ್ಣು ನೊಣದ ಮೋಹಕ ಬಲೆಯಲ್ಲಿ ಮೋಹಕ ಧಾತುವನ್ನು ಬದಲಿಸುವುದು.  ಬಿದ್ದ ಹಣ್ಣುಗಳನ್ನು ಸಂಗ್ರಹಿಸುವುದು ಹಾಗೂ ನಾಶಪಡಿಸುವುದು.  ಮಾವಿನ ಹಣ್ಣಿನ ಹಣ್ಣು ನೊಣದ ಆಕರ್ಷಣೆಗೆ ಬೇಟ್ ಪದಾರ್ಥವನ್ನು ಸಿಂಪಡಿಸುವುದು.

 

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ರವರನ್ನು ದೂ:7829512236 ಸಂಪರ್ಕಿಸಬಹುದು.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s