ಬಂಪರ್ ತೊಗರಿ ಉತ್ಪಾದನೆಗೆ ಖರೀದಿಯ ಬೆಂಬಲ..

19ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆಯನ್ನು ಬೆಳೆಯಲಾಗುತ್ತದೆ. ಚಿನ್ನದ ಬಣ್ಣದ ತೊಗರಿ ಆ ಭಾಗದ ಪ್ರಮುಖ ವಾಣಿಜ್ಯ ಬೆಳೆಯೂ ಹೌದು. ತೊಗರಿ ಉತ್ಪಾದನೆ,  ಮಾರುಕಟ್ಟೆಗೆ ಸರ್ಕಾರ ಕಾಲ ಕಾಲಕ್ಕೆ ನೆರವು ನೀಡುತ್ತಿದೆ.  ವರ್ಷ ತೊಗರಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತೊಗರಿಯನ್ನು ರೈತರಿಂದ ಖರೀದಿಸಲು ಸರ್ಕಾರ ನಿರ್ದರಿಸಿದೆ. ಬೆಲೆ ಸ್ಥಿರೀಕರಣ ಕುರಿತ ಕೃಷಿ ಮತ್ತು ತೋಟಗಾರಿಕೆ ಸಂಪುಟ ಉಪ ಸಮಿತಿಯ ಸಭೆ ನಡೆಸಿದ ನಂತರ  ಕಾನೂನು ಸಚಿವ ಟಿ ಬಿ ಜಯಚಂದ್ರ  ಈ  ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ವಿವರಗಳು ಇಲ್ಲಿವೆ.

ಶೀಘ್ರವೆ ಖರೀದಿ:ಸಚಿವ ಟಿ ಬಿ ಜಯಚಂದ್ರ

 

jayachandra

ರಾಜ್ಯದ 12 ಜಿಲ್ಲೆಗಳಲ್ಲಿ ಈ ಬಾರಿ ಬಂಪರ್ ತೊಗರಿ ಉತ್ಪಾದನೆಯಾಗಿದ್ದು ಇದುವರೆವಿಗೆ 31.32 ಲಕ್ಷ ಕ್ವಿಂಟಾಲ್ ತೊಗರಿಯನ್ನು ಪ್ರತಿ ಕ್ವಿಂಟಾಲ್‍ಗೆ 450 ರೂಪಾಯಿ ರಾಜ್ಯದ ಪ್ರೋತ್ಸಾಹಧನ ಸೇರಿದಂತೆ 5500 ರೂ ದರದಲ್ಲಿ ತೊಗರಿ ಖರೀದಿಸಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.

 

ಕಲಬುರಗಿ ವಿಭಾಗ ಮತ್ತು ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಈ ಭಾರಿ 101 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗಿದೆ ರಾಜ್ಯ ಸರ್ಕಾರ ದಾಖಲು ಉತ್ಪನ್ನವನ್ನು ಖರೀದಿಸಲಾಗಿದೆ.

ಆದರೂ 42.48 ಲಕ್ಷ ಕ್ವಿಂಟಾಲ್  ಬೆಳೆ ಇದ್ದು ಇದನ್ನು ಖರೀದಿಸಲು ಕೇಂದ್ರ ಅನುಮತಿ ಕೋರಲಾಗಿದ್ದು ಶೀಘ್ರದಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

 

09fee555ಕೇಂದ್ರ ಸರ್ಕಾರ ಖರೀದಿಗೆ ಅನುಮತಿ ನೀಡಿದ್ದಲ್ಲಿ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಪ್ರೋತ್ಸಾಹಧನ ನೀಡುವ  ಬಗ್ಗೆ  ತೀರ್ಮಾನ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಬಂಪರ್ ತೊಗರಿಬೆಳೆ ಬಂದಿರುವ  ಹಿನ್ನೆಲೆಯಲ್ಲಿ 1.10 ಕೋಟಿ ಕುಟುಂಬಗಳಿಗೆ ತಲಾ ಒಂದು ಕೆ.ಜಿ.ಯಂತೆ ತೊಗರಿ ಬೇಳೆಯನ್ನು ವಿತರಿಸಿದಲ್ಲಿ ಸರ್ಕಾರದ ಮೇಲೆ 1,100 ಕೋಟಿ ರೂಪಾಯಿ ಹೊರೆಯಾಗಲಿದ್ದು ಕೇಂದ್ರ ಅಗತ್ಯ ಸಹಾಯಧನ  ನೀಡುವ ಬಗ್ಗೆ ಮನವಿ ಮಾಡಲಾಗುವುದು ಎಂದರು.  ಅಲ್ಲದೆ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿ.ಗೆ 30 ರೂ. ರಿಯಾಯಿತಿ ದರದಲ್ಲಿ ತೊಗರಿ ಬೇಳೆಯನ್ನು ನೀಡುವ ಬಗ್ಗೆ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲಾಯಿತು ಎಂದು ಸಚಿವರು ತಿಳಿಸಿದರು.

 

ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಂಬಂಧಿಸಿದಂತೆಯೂ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದ್ದು ಶೀಘ್ರ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s