ಒಳನಾಡು ಮೀನುಗಾರಿಕೆಗೆ ಹೊಸ ಮತ್ಸ್ಯ ನೀತಿ

ಮೀನುಗಾರಿಕೆಗೆ ಹಾಗೂ ಮೀನುಗಾರರ ಕ್ಷೇಮಾಭಿವೃದ್ದಿಗೆ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಒಳನಾಡು ಮೀನುಗಾರರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಮತ್ಸ್ಯಾಭಿವೃದ್ದಿಗೆ ವಿಶೇಷ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕೆ ತರಲಾಗಿದೆ.ಈ ನಡುವೆ ಹೊಸ ಮೀನುಗಾರಿಕೆಗೆ ಮತ್ತು ಅವಲಂಬಿತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ಮತ್ಸ್ಯ ನೀತಿಯನ್ನು ಜಾರಿಗೆ ತರಲಾಗಿದೆ. ಈ ಕುರಿತು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾದ ಪ್ರಮೋದ್ ಮಧ್ವರಾಜ್ ಹಾವೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ವಿವರಗಳು ಇಲ್ಲಿವೆ.

Pramod Madwaraj

ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಹೊಸ  ಮತ್ಸ್ಯ ನೀತಿ ಜಾರಿಗೊಳಿಸಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಪ್ರಮೋದ ಮಧ್ವರಾಜ್ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು ರಾಜ್ಯದಲ್ಲಿ ಬರ ಇರುವುದರಿಂದ ಒಳನಾಡು ಮೀನುಗಾರರಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆಯನ್ನು ವಿಸ್ತರಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಹಣ ತುಂಬುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.ಮೀನುಗಾರರಿಗೆ ಐದು ವರ್ಷದವರೆಗೆ ಗುತ್ತಿಗೆ ನೀಡಲಾಗಿತ್ತು. ಬರದ ಕಾರಣ ಒಂದು ವರ್ಷ ಹೆಚ್ಚಿನ ಅವಧಿಗೆ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

maxresdefault (1)

ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಮೀನುಗಾರಿಕೆ ಮಾಡಲು ಹೆಚ್ಚಿನ ಅವಕಾಶವಿದೆ. ರೂ. 1 ಲಕ್ಷ ಬಂಡವಾಳ ಹೂಡಿದರೆ ರೂ.3 ಲಕ್ಷದವರೆಗೆ ಗಳಿಸಬಹುದು. ಮೂರು ತಿಂಗಳಲ್ಲಿ ಕನಿಷ್ಠ ರೂ.1.5 ಲಕ್ಷ ಆದಾಯ ಗಳಿಸಬಹುದು. ವಿಜಯಪುರ, ಬಾಗಲಕೋಟೆ ಸೇರಿದಂತೆ ನೀರಾವರಿ ಕ್ಷೇತ್ರವುಳ್ಳ ಉತ್ತರ ಕರ್ನಾಟಕದ ಸವಳು-ಜವಳು ಮಣ್ಣಿನಲ್ಲಿ ಕೃಷಿಗಿಂತ ಮೀನುಗಾರಿಕೆಗೆ ಹೆಚ್ಚಿನ ಅವಕಾಶಗಳಿವೆ. ಸರ್ಕಾರ ಸಹ ಸಾಕಷ್ಟು ಉತ್ತೇಜಕ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಕೇಂದ್ರಕ್ಕೆ ಮನವಿ:

hqdefaultಕರಾವಳಿ(ಸಮುದ್ರ) ಭಾಗದಲ್ಲಿ ಮೀನುಗಾರಿಕೆ ಕುಸಿಯುತ್ತಿದೆ. ಮತ್ಸ್ಯ ಬೆಳವಣಿಗೆಗೆ ಉತ್ತೇಜನ, ರಕ್ಷಣೆ ಕುರಿತಂತೆ ಸಮುದ್ರ ಮೀನುಗಾರಿಕೆಗೆ ಒಂದು ರಾಷ್ಟ್ರೀಯ ನೀತಿ ರಚಿಸಬೇಕಾಗಿದೆ. ಇಲ್ಲವಾದರೆ  ಮುಂದೊಂದು ದಿನ ಮೀನಿನ ಕ್ಷಾಮ ಎದುರಾಗುವ ಅಪಾಯವಿದೆ.  ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವರಾದ ರಾಧಾ ಮೋಹನ್ ಅವರನ್ನು ಭೇಟಿ ಮಾಡಿ ಕರಾವಳಿ(ಸಮುದ್ರ) ಮೀನುಗಾರಿಕೆಯ ಸಮಗ್ರ ನೀತಿಯನ್ನು ರೂಪಿಸಲು ದೇಶದ ಕರಾವಳಿ ಭಾಗದ ಎಲ್ಲ ಮೀನುಗಾರಿಕೆ ಇಲಾಖೆ ಮೀನುಗಾರಿಕೆ ಖಾತೆ ಸಚಿವರ ಸಭೆ ನಡೆಸಲು ಮನವಿ ಮಾಡಿಕೊಳ್ಳಲಾಗಿತ್ತು. ಈ ಸಭೆಯನ್ನು ಕೇಂದ್ರದ ಸಹಕಾರೊಂದಿಗೆ ರಾಜ್ಯ ಸರ್ಕಾರವೇ ಆಯೋಜಿಸಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ಕುರಿತಂತೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಹೇಳಿದರು.

 

ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಮತ್ಸ್ಯ ನೀತಿಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈ ಮಾದರಿಯಲ್ಲಿ ಭಾರತ ದೇಶದಲ್ಲಿ ರಾಷ್ಟ್ರೀಯ ಮತ್ಸ್ಯ ನೀತಿ ಜಾರಿಗೆ ತರಬೇಕು. ಕೇಂದ್ರ ಈ ಕುರಿತಂತೆ ಮುಂದಾಗಬೇಕಾಗಿದೆ ಎಂದು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s