ಮುಂಗಾರಿನ ಮುನ್ನುಡಿಗೆ ಬೀಜ ಬಿತ್ತನೆ ಸಿದ್ಧತೆ

downloadರಾಜ್ಯದೆಲ್ಲೆಡೆ ಮುಂಗಾರು ಪ್ರಾರಂಭವಾಗಿದ್ದು. ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ರೈತರಲ್ಲಿ ಮುಂಗಾರು ಒಳ್ಳೆಯ ನಿರೀಕ್ಷೆಯನ್ನು ಮೂಡಿಸಿದೆ. ಮಳೆಯಿಲ್ಲದೆ ರೈತರೆಲ್ಲ ಕಂಗಾಲಾಗಿ ಕುಳಿತಿರುವ ಸಮಯದಲ್ಲಿ ಮುಂಗಾರು ಮಳೆ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ.. ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ರೈತರಿಗೆ ಕೃಷಿ ಸಲಕರಣೆ, ರಸಗೊಬ್ಬರ,ಬಿತ್ತನೆ ಬೀಜಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸಗೊಬ್ಬರ ಕೊರತೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮವನ್ನು ಕೂಡ ತೆಗೆದುಕೊಳ್ಳಲಾಗಿದೆ. ಈ ಕುರಿತು ಸಭೆಗಳನ್ನು ನಡೆಸುತ್ತಿದ್ದು ಚಿತ್ರದುರ್ಗದಲ್ಲಿ ನಡೆದ ಸಭೆಯ ವಿವರ ಇಲ್ಲಿದೆ.

ಜಿಲ್ಲೆಯಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿರುವುದರಿಂದ ರೈತರಿಗೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಎಲ್ಲ ರೀತಿಯ ಎಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿಗಳಾದ ಪಿ.ಎ.ಮೇಘಣ್ಣವರ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

FL28_SEED_1483437gಜಿಲ್ಲೆಯ ಎಲ್ಲ ಕೃಷಿ ಅಧಿಕಾರಿಗಳು ಬೀಜ ಹಾಗೂ ರಸಗೊಬ್ಬರಗಳನ್ನು ಸೂಕ್ತ ಸಮಯದಲ್ಲಿ ರೈತರಿಗೆ ಪೂರೈಸ ತಕ್ಕದ್ದು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಬೀಜ ಮಾರಾಟ ಪರವಾನಿಗೆ ಪಡೆದ ಕೃಷಿ ಪತ್ತಿನ ಸಂಘಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕೆಂದು ಮೇಘಣ್ಣವರ ತಿಳಿಸಿದರು.

ಶಿಸ್ತು ಕ್ರಮ:

ಇತ್ತೀಚೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆಯನ್ನು ಮೇ 19 ರಂದು ನಡೆಸಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವ್ಯವಸ್ಥಿತ ವಿತರಣೆ ನಡೆಯ ತಕ್ಕದ್ದು. ರಿಯಾಯಿತಿ ಸೇರಿದಂತೆ ದರಪಟ್ಟಿಯನ್ನು ಪ್ರದರ್ಶಿಸತಕ್ಕದ್ದೆಂದು ತಿಳಿಸಿದರು. ತಾವು ಇತ್ತೀಚೆಗೆ ಸಾವಳಗಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ದಿನೇ ದಿನದ ಮಾರಾಟವಾದ ಬಗ್ಗೆ ದಾಸ್ತಾನು ರಿಜಿಸ್ಟರ್, ಅಕೌಂಟ್ಸ್ರಿಜಿಸ್ಟರ್ ನಿರ್ವಹಣೆಯಾಗಿರಲಿಲ್ಲ. ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಜಿಲ್ಲೆಯ ಯಾವುದೇ ರೈತ ಸಂಪರ್ಕ ಕೇಂದ್ರಕ್ಕೆ ತಾವು ಅಥವಾ ಜಿಲ್ಲಾ ಪಂಚಾಯತ್ ಸಿಇಓ ಹಠಾತ್ ಭೇಟಿ ನೀಡಿದಲ್ಲಿ ಯಾವುದಾದರೂ ಲೋಪದೋಷಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

9844 ಕ್ವಿಂಟಲ್ ಬೀಜ:
dried-red-chilli-producer-indian-farmer2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬೇಡಿಕೆ ಕುರಿತು ಜಂಟಿ ಕೃಷಿ ನಿರ್ದೇಶಕ ರಮೇಶಕುಮಾರ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 2.75 ಲಕ್ಷ ಹೆಕ್ಟೆರ್ ಬಿತ್ತನೆ ಪ್ರದೇಶವಿದ್ದು, ಕಳೆದ ಮುಂಗಾರಿನಲ್ಲಿ 9844 ಕ್ವಿಂಟಲ್ ಬೀಜ ವಿತರಿಸಲಾಗಿತ್ತು. ಈಗಾಗಲೇ 2048 ಕ್ವಿಂಟಲ್ ದಾಸ್ತಾನು ಇದ್ದು 4112 ಕ್ವಿಂಟಲ್ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದೆಂದರು. ಒಟ್ಟು 1.29 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆಯಿದ್ದು ಈ ಪೈಕಿ ಈಗಾಗಲೇ 53 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದೆಯೆಂದು ಸಭೆಗೆ ತಿಳಿಸಲಾಯಿತು.

ಹೆಚ್ಚಿನ ಜಾಗೃತಿ:
ಜಿಲ್ಲೆಯಲ್ಲಿ ಒಟ್ಟು 75 ರಸಗೊಬ್ಬರಗಳ ಡೀಲರ್ಸ್‍ಗಳಿದ್ದು, 687 ವ್ಯಾಪಾರಿಗಳಿದ್ದಾರೆ. ಈ ಪೈಕಿ 465 ಖಾಸಗಿ ಹಾಗೂ 222 ಸಹಕಾರಿ ಸಂಘಗಳದ್ದಾಗಿವೆ. ರಸಗೊಬ್ಬರ ಕಂಪನಿಗಳು ನಿಗದಿತ ಸಮಯಕ್ಕೆ ಮುಂಚೆಯೆ ಎಲ್ಲ ದಾಸ್ತಾನು ಇಟ್ಟುಕೊಂಡಿರಬೇಕೆಂದರು. ಮಣ್ಣು ಆರೋಗ್ಯ ಕಾರ್ಡುಗಳು ವಿತರಣೆ ಪ್ರಗತಿಯಲ್ಲಿದ್ದು, ಈಗಾಗಲೇ 1.20 ಲಕ್ಷ ಕಾರ್ಡುಗಳನ್ನು ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಜೈವಿಕ ರಸಗೊಬ್ಬರಗಳ ಬಳಕೆಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಸಿಇಓ ವಿಕಾಸ ಸುರಳಕರ ತಿಳಿಸಿದರು.

 

ಕೃಷಿ ಅಧಿಕಾರಿಗಳು ಜೈವಿಕ ರಸಗೊಬ್ಬರಗಳ ಕ್ಲಿನಿಕ್ ಆರಂಭಿಸುವಂತೆ ತಿಳಿಸಿದರಲ್ಲದೇ ಸಾವಯುವ ಕೃಷಿಗೆ ಒತ್ತು ನೀಡುವಂತೆ ತಿಳಿಸಲಾಯಿತು. ಜೂನ್ 5 ರಿಂದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೃಷಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದೆಂದು ಚರ್ಚಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s