ಮಹಿಳಾ ಸಬಲೀಕರಣಕ್ಕೆ ಆರ್ಥಿಕ ಚಟುವಟಿಕೆಯೂ ರಹದಾರಿ

ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳೆಯರ ಅಭಿವೃದ್ಧಿಗೆ, ಮಹಿಳಾ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆ ಯೋಜನೆಯಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಈ ಮೂಲಕ ಸಮಾಜದ ಕಟ್ಟಕಡೆಯ ವರ್ಗದ ಮಹಿಳೆಯರಿಗೂ ತಲುಪುವಂತೆ ವಿಶೇಷ ಸೌಲಭ್ಯ ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಲು ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿದೆ.

G-Padmavathi-garu-Mayor-at-Bengaluru

ಮಹಿಳೆಯರು ಸಾಮಾಜಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಪ್ರದಾನ ಪಾತ್ರ ವಹಿಸುತ್ತಾರೆ ಅದೇ ರೀತಿ ಆರ್ಥಿಕ ಚಟುವಟಿಕೆಯಲ್ಲು ಅವರು ಮಂಚೂಣಿಯಲ್ಲಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳಾ ಉದ್ಯಮಿಗಳನ್ನು ಮತ್ತು ಉದ್ದಿಮೆಗಳನ್ನು ಪ್ರೋತ್ಸಾಹಿಸುತ್ತದೆ. ಸರ್ಕಾರದ ಈ ಕ್ರಮಗಳಿಗಾಗಿ ಜಾಗತಿಕ ಮಟ್ಟದಲ್ಲಿ ಮಹಿಳಾ ಸಬಲೀಕರಣ ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರಣಗಳಿಗಾಗಿ ಪುರಸ್ಕಾರ ನೀಡಿ ಗೌರವಿಸಿದೆ. ಇದು ಜಾಗತಿಕವಾಗಿ ರಾಜ್ಯ ಸರ್ಕಾರವೊಂದಕ್ಕೆ ಸಿಕ್ಕ ಮೊದಲ ಮನ್ನಣೆಯೂ ಆಗಿದೆ.

ಹೀಗೆ ಸರ್ಕಾರದಿಂದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಯಶಸ್ಸು ಕಂಡ ಮಹಿಳಾ ಉದ್ಯಮಿಗಳೊಂದಿಗೆ ಸಂವಾದ ನಡೆಸುವ ಹಾಗೂ ಮಹಿಳೆಯರ ಆರ್ಥಿಕ ಚಟುವಟಿಕೆಗೆ ದೊರೆಯುವ ಪ್ರಯೋಜನಗಳನ್ನು ಪ್ರಚುರ ಪಡಿಸಲು ಮಹಿಳಾ ಮತ್ತು ಮಕ್ಕಳ ಆರೋಗ್ಯ ಕಲ್ಯಾಣ ಇಲಾಖೆ ವಿಜಯ ನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂವಾದದ ವರದಿ ಇಲ್ಲಿದೆ.

ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ಸವಲತ್ತುಗಳು ಕೆಳವರ್ಗದ ಮಹಿಳೆಯರಿಗೆ ದೊರಕುವಂತಾಗಬೇಕೆಂದು ಮೇಯರ್ ಜಿ. ಪದ್ಮಾವತಿ ಅವರು ಅಭಿಪ್ರಾಯಪಟ್ಟರು.
f45ec6eb-7763-4ccf-beb7-0f9a70140c60

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಸಿಯಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಉದ್ಯಮಿಗಳೊಡನೆ ರಾಜ್ಯಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿನಾಯಿತಿ:
ಕೆಳವರ್ಗದ ಮಹಿಳೆಯರಿಗೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಯೇ ಇರುವುದಿಲ್ಲ. ಶ್ರೀಮಂತರು ಬಲಿಷ್ಠರೇ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಕೆಳವರ್ಗದ ಮಹಿಳೆಯರು ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಸಾಲ ಪಡೆಯಲು ಬಯಸುವ ಕೆಳವರ್ಗದ ಮಹಿಳೆಯರಿಗೆ ದಾಖಲೆಗಳನ್ನು ಒದಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಾಲ ನೀಡುವ ಸಂದರ್ಭದಲ್ಲಿ ನೀಡಬೇಕಾಗುವ ದಾಖಲೆಗಳಲ್ಲಿ ಅವರಿಗೆ ವಿನಾಯಿತಿಯನ್ನು ನೀಡಬೇಕು. ಆಗ ಮಾತ್ರ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಮೂಲಕ ಅವರು ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಬಹುದು ಎಂದರು.

ಬಡ್ಡಿ ಸಹಾಯಧನ:
1937a4b8-e1a8-4a62-82f2-47f68672150dಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭಾರತಿ ಶಂಕರ್ ಅವರು ಮಾತನಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಸಹಾಯಧನ ಯೋಜನೆಯನ್ನು ಕೆ.ಎಸ್.ಎಫ್.ಸಿ. ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿದೆ. ನಿಗಮದ ವತಿಯಿಂದ ಇದುವರೆವಿಗೆ 419 ಮಹಿಳಾ ಉದ್ದಿಮೆದಾರಿಗೆ ಸಹಾಯಧನ ಯೋಜನೆಯಡಿ ಬಡ್ಡಿ ಸಹಾಯಧನ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

 

2 ಕೋಟಿ ಹೆಚ್ಚಳ:
1da12844-ee4e-4c1e-a168-b89d5cb999e3ಪ್ರಸ್ತುತ ಕನಿಷ್ಠ 5 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳವರೆಗಿನ ಸಾಲದ ಮೊತ್ತಕ್ಕೆ ನಿಗಮದಿಂದ ಶೇ. 10 ಬಡ್ಡಿ ಸಹಾಯಧನವನ್ನು ನೀಡಲಾಗುತ್ತಿದೆ. 2017-18 ನೇ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸಾಲ ಮಿತಿಯನ್ನು 50 ಲಕ್ಷ ರೂ.ಗಳಿಂದ 2 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಇದರಿಂದ ಮಹಿಳೆಯನ್ನು ದೊಡ್ಡಮಟ್ಟದ ಉದ್ಯಮವನ್ನು ನಡೆಸಲು ನೆರವಾಗಲಿದೆ ಎಂದರು.

ಈಗಾಗಲೇ ಉದ್ಯಮವನ್ನು ನಡೆಸುತ್ತಿರುವ ಮತ್ತು ಉದ್ಯಮ ನಡೆಸಲು ಬಯಸುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s