ಬೆಣ್ಣೆತೊರಾ ಯೋಜನೆ ಆಧುನೀಕರಣಕ್ಕೆ ಸಜ್ಜು

 

485d4f19-acd9-40c4-a281-71e407629c5cಬೆಣ್ಣೆತೊರಾ ಯೋಜನೆಯ ಆಧುನೀಕರಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಹಾಗೂ ಕಾಮಗಾರಿ ಗುಣಮಟ್ಟ ಕಾಪಾಡಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಲಬುರಗಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ನೀರಾವರಿ ಯೋಜನೆಗಳ ವಲಯ ಕಚೇರಿಯಲ್ಲಿ ಬೆಣ್ಣೆತೊರಾ ಯೋಜನೆ ಅಡಿಯಲ್ಲಿ ಅನುಷ್ಠಾನದಲ್ಲಿರುವ ನೀರು ಬಳಕೆದಾರರ ಸಂಘದ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಈ ನೀರಾವರಿ ಯೋಜನೆಯ ಬಲದಂಡೆ/ಎಡದಂಡೆ ಕಾಲುವೆಗಳಲ್ಲಿ ಬರುವ ಹೊಲಗಾಲುವೆಗಳನ್ನು ಹಂತ ಹಂತವಾಗಿ ನಿರ್ಮಿಸಲು ನೀರಾವರಿ ಯೋಜನೆಗಳ ವಲಯ ಕಾಡಾ ಆಡಳಿತಾಧಿಕಾರಿಗೆ ಸೂಚಿಸಿದರು. ಮೊದಲನೇ ಹಂತವಾಗಿ 5000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆಗಳ ಪುನರ್ ನಿರ್ಮಾಣ ಹಾಗೂ ಭೂಮಿ ಸಮತಟ್ಟು ಕಾಮಗಾರಿಯ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸಲು ಸೂಚಿಸಿದರು. ಮತ್ತು ಎಲ್ಲಾ ನೀರು ಬಳಕೆದಾರರ ಸಂಘದ ಅಧ್ಯಕ್ಷರನ್ನು ಉದ್ದೇಶಿಸಿ ಆಧುನೀಕರಣ ಕಾಮಗಾರಿಯ ಬಗ್ಗೆ ಚರ್ಚಿಸಿದರು, ಎಲ್ಲಾ ಅಚ್ಚುಕಟ್ಟು ರೈತರಿಗೆ ನೀರನ್ನು ಉಪಯೋಗಿಸುವಂತೆ ಕೋರಿದರು.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಹೊಲಗಾಲುವೆಗಳ ಪುನರ್ ನಿಮಾಣ ಮಾಡಲು ಸಚಿವರಿಗೆ ಮನವಿ ಮಾಡಿದರು. ಮುಖ್ಯ ಇಂಜಿನಿಯರ್ ಜಗನ್ನಾಥ ಹಲಿಂಗೆ ಬೆಣ್ಣೆತೊರಾ ಯೋಜನೆ ಬಲದಂಡೆ ಹಾಗೂ ಎಡದಂಡೆ ಕಾಲುವೆ ಪ್ರಗತಿ ಬಗ್ಗೆ ವಿವರಿಸಿದರು.

2c60394c-88fc-4fed-a7e7-14ddc111d3c4ಬೆಣ್ಣೆತೊರಾ ನೀರಾವರಿ ಯೋಜನೆಯಿಂದ 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಬಲದಂಡೆ ಕಾಲುವೆಯಿಂದ 45 ಕಿ.ಮೀ. ವರೆಗೆ ಒಳಪಡುವ 9181.69 ಹೆಕ್ಟೇರ್ ಮತ್ತು ಎಡದಂಡೆ ಕಾಲುವೆಯಿಂದ 32 ಕಿ.ಮೀ.ವರೆಗೆ ಒಳಪಡುವ 2127 ಹೆಕ್ಟೇರ್ ನೀರಾವರಿ ಕ್ಷೇತ್ರಕ್ಕೆ ನೀರು ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಡಿ.ಪಿ.ಆರ್. ವರದಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬೆಳೆಯಬೇಕಾದ ಬೆಳೆಗಳ ವಿವರ ಇಂತಿದೆ. ತೊಗರಿ-2428 ಹೆಕ್ಟೇರ್, ದ್ವಿದಳ ಧಾನ್ಯ-6880 ಹೆಕ್ಟೇರ್, ಶೇಂಗಾ-1619 ಹೆಕ್ಟೇರ್, ಮೆಕ್ಕೆಜೋಳ-405 ಹೆಕ್ಟೇರ್ ಮತ್ತು ಜೋಳ-809 ಹೆಕ್ಟೇರ್.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s