ಕೈಗಾರಿಕಾ ಸಾಲ ಯೋಜನೆಯ ಮಾಹಿತಿಗೆ ಇಲ್ಲಿಗೆ ಬನ್ನಿ

 

5892860f-7ba8-4d7b-8f5b-f3277e70c76fಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯದಲ್ಲಿನ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸು ನೆರವು ನೀಡುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಾಗಿದೆ. ರಾಜ್ಯದ ಸಣ್ಣ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆ, ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ಉದ್ದಿಮೆ ಸ್ಥಾಪಿಸಲು ಸಹಕಾರಿಯಾಗಿದೆ. ಅಷ್ಟೆ ಅಲ್ಲದೇ ಸೇವಾಕ್ಷೇತ್ರದ ಯೋಜನೆಗಳು ಮತ್ತು ಮೂಲಭೂತ ಸೌಲಭ್ಯ ಯೋಜನೆಗಳಿಗು ಕೂಡಾ ಹಣಕಾಸಿನ ನೆರವು ನೀಡುತ್ತಾ ಬಂದಿದೆ. ಇದಲ್ಲದೆ ರಾಜ್ಯ ಸರಕಾರದ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಶೇ.4 ರ ಬಡ್ಡಿ ದರದಲ್ಲಿ ಅವಧಿ ಸಾಲ ನೀಡುವ ಯೋಜನೆಯನ್ನು ಕೂಡಾ ಜಾರಿ ತಂದಿದೆ. 2013-14 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರಿಗು ಸಾಲಗಳನ್ನು ನೀಡುತ್ತಾ ಬಂದಿದೆ. ವಿವಿಧ ಯೋಜನೆಗಳ ಕುರಿತು ಮಾಹಿತಿ ಇಲ್ಲಿದೆ.
ರಾಜ್ಯ ಆರ್ಥಿಕ ಬೆಳವಣಿಗೆಗೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸೇವಾ ಕ್ಷೇತ್ರದ ವಲಯಗಳ ಘಟಕಗಳಿಗೆ ಹಣಕಾಸಿನ ನೆರವನ್ನು ನೀಡಿರುವುದರಲ್ಲಿ ಮೊದಲ ಹಣಕಾಸು ಸಂಸ್ಥೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಡಿ ಪಾಂಡುರಂಗ ಅವರು ತಿಳಿಸಿದ್ದಾರೆ.

ಪ್ರಥಮ ಹಾಗೂ ಏಕೈಕ ಸಂಸ್ಥೆ:

b0a8d882-c754-4ed1-9bf8-498f13d1a61fಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಮಹಿಳೆಯರಿ ಗಾಗಿಯೇ ವಿಶೇಷ ಮಹಿಳಾ ಉದ್ದಿಮೆದಾರರ ಯೋಜನೆ ಯೊಂದನ್ನು 2015ರ ಡಿಸೆಂಬರ್ ಮಾಹೆಯಿಂದಲೇ ಆರಂಭಿಸಿದೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರದ ನೆರವಿನೊಂದಿಗೆ ರಾಜ್ಯದ ಮಹಿಳಾ ಉದ್ದಿಮೆದಾರರಿಗೆ ಶೇ.4ರ ಬಡ್ಡಿದರದಲ್ಲಿ ಹಣಕಾಸಿನ ನೆರವು ನೀಡುತ್ತಿರುವ ಪ್ರಥಮ ಹಾಗೂ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ಕಾರದ ಸಹಯೋಗದೊಂದಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ನಿರಂತರವಾಗಿ ಉದ್ದಿಮೆದಾರರಿಗೆ ಆರ್ಥಿಕ ನೆರವನ್ನು ಒದಗಿಸುತ್ತಿದೆ.

ಹಣಕಾಸಿನ ನೆರವು:

ವಿಶೇಷವಾಗಿ ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಮೊದಲ ಪೀಳಿಗೆಯ ಉದ್ದಿಮೆದಾರರಿಗೆ ಹಲವು ರೀತಿಯ ಬಡ್ಡಿ ಸಹಾಯಧನದ ನೆರವು ನೀಡುವ ಮೂಲಕ ರಾಜ್ಯ ಸರ್ಕಾರವು ಸಂಸ್ಥೆಗೆ ಸಹಕಾರಿಯಾಗಿದೆ. ಮಾರ್ಚ್ 31 ರವರೆಗೆ ಸಂಚಿತ ಕಾರ್ಯಸಾಧನೆಗೆ 15276.05 ಕೋಟಿ.ರೂ.ಗಳಲ್ಲಿ ಮಂಜೂರಾತಿ ಆಗಿದೆ. 12001.86 ಕೋಟಿ ರೂ. ವಿತರಣೆ ಮಾಡಲಾಗಿದೆ. 15635.63 ಕೋಟಿ ರೂ.ಗಳನ್ನು ವಸೂಲಾತಿ ಮಾಡಲಾಗಿದೆ. ರೂ.733.42 ಕೋಟಿಗಳ ಒಟ್ಟಾರೆ ಮಂಜೂರಾತಿಯಲ್ಲಿ ತಯಾರಿಕಾ ವಲಯಕ್ಕೆ ರೂ.309.21 ಕೋಟಿ ಮೊತ್ತದ ಹಣಕಾಸಿನ ನೆರವನ್ನು ಸಂಸ್ಥೆಯಿಂದ ನೀಡಲಾಗಿದ್ದು, ಅದರಲ್ಲಿ ಒಟ್ಟಾರೆ ಶೇ 42. ರಷ್ಟು ಮಂಜೂರಾತಿಯನ್ನು ನೀಡಲಾಗಿದೆ.

ಶೇ.4ರ ಬಡ್ಡಿ:
58c5b6be-89e7-45b8-b13c-c3d59e004406ಪ್ರವಾಸೋದ್ಯಮ ವಲಯ ಹಾಗೂ ರಿಯಲ್ ಎಸ್ಟೇಟ್ ವಾಣಿಜ್ಯ ವಲಯಕ್ಕೆ ಅನುಕ್ರಮವಾಗಿ ರೂ.7730 ಕೋಟಿ ಹಾಗೂ 58.91 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡಲಾಗಿದ್ದು, ಒಟ್ಟು ಮಂಜೂರಾತಿಯಲ್ಲಿ ಪ್ರತೀ ವಲಯದಲ್ಲಿ ಶೇ 11 ಹಾಗೂ ಶೇ 8 ರಷ್ಟಿದೆ. ಇನ್ನುಳಿದ ಮೊತ್ತವಾದ ರೂ.37.39 ಕೋಟಿ ಮತ್ತು ರೂ.250.59 ಕೋಟಿ ಒಟ್ಟು ಮಂಜೂರಾತಿಯ ಶೇ 39 ರಷ್ಟಿದ್ದು ಅದು ಆರೋಗ್ಯ ಹಾಗೂ ಇತರೆ ವಲಯಗಳ ಪಾಲಿನದ್ದಾಗಿದೆ. ಸಂಸ್ಥೆಯ ಮಂಜೂರಾತಿಯಾದ ರೂ.73.42 ಕೋಟಿಗಳಿಲ್ಲಿ ಶೇ 51 ರಷ್ಟು ಅಂದರೆ ರೂ.375.94 ಕೋಟಿ ಮೊತ್ತವನ್ನು ಮೊತ್ತವನ್ನು ಮಹಿಳಾ ಉದ್ದಿಮೆದಾರರಿಗೆ, ಪರಿಶಿಷ್ಟ ಉದ್ದಿಮೆದಾರರಿಗೆ ಶೇ.4ರ ಬಡ್ಡಿದರದಲ್ಲಿ ಹಾಗೂ ಮೊದಲ ಪೀಳಿಗೆಯ ಉದ್ದಿಮೆದಾರರಿಗೆ ಶೇ.8ರ ಸಹಾಯಧನದ ವಿಶೇಷ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ. ಮಂಜೂರಾದ ಮೊತ್ತದ ಶೇ.49ರಷ್ಟು ಮೊತ್ತವನ್ನು ಸಾಮಾನ್ಯ ಯೋಜನೆ ಯಡಿಯಲ್ಲಿ ಮಂಜೂರು ಮಾಡಲಾಗಿದೆ.

ಕೈಗಾರಿಕಾ ಘಟಕ:

ಅಲ್ಪಸಂಖ್ಯಾತ ವರ್ಗಗಳ ಉದ್ದಿಮೆದಾರರಿಗೆ ಉತ್ತೇಜನ ನೀಡಲು ಸಂಸ್ಥೆಯವತಿಯಿಂದ ರೂ.1,182.94 ಕೋಟಿ ಮೊತ್ತದ ಹಣಕಾಸಿನ ನೆರವನ್ನು 19,052 ಉದ್ದಿಮೆದಾರರಿಗೆ ನೀಡಲಾಗಿದೆ. ಕೈಗಾರಿಕೀಕರಣವನ್ನು ಉತ್ತೇಜಿಸಲು 171414 ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳ ಸ್ಥಾಪನೆಗೆ 15276.05ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

*c826b6a8-5583-47f4-97fc-cabd8752ecc2ಉದ್ಯೋಗವಕಾಶ: *
ಸಂಸ್ಥೆಯು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರದ ವಲಯದಲ್ಲಿನ ಉದ್ದಿಮೆಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುವುದರ ಮೂಲಕ ಅವುಗಳಿಗೆ ಅತ್ಯಾಧುನಿಕ ವೇದಿಕೆಯನ್ನು ಸೃಷ್ಠಿಸಿ, ಉತ್ತೇಜನ ನೀಡುವ ದೂರದರ್ಶಿತ್ವವನ್ನು ಹೊಂದಿದೆ. ಈ ಬೆಳವಣಿಗೆಯು ಉದ್ಯಮ ಶೀಲತೆಗೆ ಉತ್ತೇಜನ, ಹೂಡಿಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ದಿಗೆ ಬೇಕಾದ ಉದ್ಯೋಗಾವಕಾಶ ಹಾಗೂ ರಾಜ್ಯದ ಬೆಳವಣಿಗೆಗೆ ಕಾರಣವಾಗಿದೆ. ಅಂತೆಯೇ ಉದ್ದಿಮೆದಾರರನ್ನು ಬೆಂಬಲಿಸಲು ಹಾಗೂ ಉದ್ದಿಮೆದಾರರ ಕನಸುಗಳನ್ನು ಸಾಕಾರಗೊಳಿಸಲು ಸದಾ ಉತ್ಸುಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s