ಹಾಸನ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ, ಬರಸ್ಥಿತಿ ನಿರ್ವಹಣೆ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ ಹಾಗೂ ಸಾರ್ವಜನಿಕ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ಕಳೆದ ಶನಿವಾರ ಮೈಸೂರು ನಗರದಲ್ಲಿ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿಗಳು ವಿಭಾಗೀಯ ಮಟ್ಟದ ಅದಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದರು.

ಭಾನುವಾರ ಹಾಸನ ಜಿಲ್ಲೆಯ ಪ್ರವಾಸ ಕೈಗೊಂಡ ಮುಖ್ಯಮಂತ್ರಿಗಳು ಕುಡಿಯುವ ನೀರಿನ ಮಹತ್ವದ ಯೋಜನೆ, ಉದ್ಯಾನವನಗಳ ನಿರ್ಮಾಣ ಸೇರಿದಂತೆ ಜನಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಹಾಸನ ಜಿಲ್ಲಾ ಪ್ರವಾಸದ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ‌ಕಳೆದ‌ ಎರಡು ವರ್ಷಗಳಿಂದ ಬೀಕರ ಬರ ಇದೆ‌ ಆದರೆ ರಾಜ್ಯ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದೆ .ಕುಡಿಯುವ ನೀರು ಮೇವು‌ ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಕೆರೆಗಳಿಗೆ‌ ನೀರು‌ ತುಂಬಿಸುವ ಯೋಜನೆಗಳಿಗೆ 5000 ಕೋಟಿ ರೂಪಾಯಿ ಗಳನ್ನು ಒದಗಿಸಲಾಗಿದೆ.ಇದರಿಂದ‌ ಅಂತರ್ಜಲ ವೃದ್ಧಿ ಯಾಗಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಹಾಸನ ನಗರಕ್ಕೆ ನೀರು ಪೂರೈಸುವ ಅಮೃತ ಯೋಜನೆ 12 ಕೋಟಿ ರೂ.ಹಾಸನ ನಗರದಲ್ಲಿ ಉದ್ಯಾನಗಳ ಅಭಿವೃದ್ಧಿ ೨ಕೋಟಿ ರೂ ಇವುಗಳ ಶಂಕುಸ್ಥಾಪನೆ, ೧ಕೋಟಿ ರೂಪಾಯಿ ವೆಚ್ಚದಲ್ಲಿ  ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಹಾಗೂ 38 ಲಕ್ಷ ರೂಪಾಯಿ ವೆಚ್ಚದಲ್ಲಿ‌‌ ನಿರ್ಮಾಣ ಗೊಂಡಿರುವ ವಿಜಯನಗರ ಬಡಾವಣೆ ಉದ್ಯಾನ ವನವನನ್ನು ಮುಖ್ಯಮಂತ್ರಿ ಯವರು  ಈ ಸಂಧರ್ಭ ಉದ್ಘಾಟಿಸಿದರು.

ಅಂತರ್ಜಲ ವೃದ್ಧಿ:      

ನಂತರ ಮಾತನಾಡಿದ  ಮುಖ್ಯಮಂತ್ರಿಯವರು ರಾಜ್ಯದಲ್ಲಿ ‌ಕಳೆದ‌ ಎರಡು ವರ್ಷಗಳಿಂದ ಭೀಕರರ ಬರ ಇದೆ‌ ಆದರೆ ರಾಜ್ಯ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದೆ .ಕುಡಿಯುವ ನೀರು ಮೇವು‌ ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಕೆರೆಗಳಿಗೆ‌ ನೀರು‌ ತುಂಬಿಸುವ ಯೋಜನೆಗಳಿಗೆ5000ಕೋಟಿ ರೂಪಾಯಿ ಗಳನ್ನು ಒದಗಿಸಲಾಗಿದೆ.ಇದರಿಂದ‌ ಅಂತರ್ಜಲ ವೃದ್ಧಿ ಯಾಗಲಿದೆ ಎಂದು ಮುಖ್ಯ ಮಂತ್ರಿ ಯವರು ಹೇಳಿದರು.

ನೀರಾವರಿಗೆ ಆದ್ಯತೆ:      

ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮಗುರಿ‌ ಅದರ ‌ಸಾಧನೆಗೆ‌ ಪ್ರಾಮಾಣಿಕವಾಗಿ‌ ಶ್ರಮಿಸಿದ್ದೇವೆ ನೀರಾವರಿಯ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ ಜೊತೆಗೆ  ದೀನ ದಲಿತರ ಶ್ರೇಯೋಭಿವೃದ್ದಿಗೆ ಹತ್ತಾರು ಯೋಜನೆ ಗಳನ್ನು‌ಜಾರಿಗೆ ತಂದಿದ್ದೇವೆ ಎಂದು‌ ಮುಖ್ಯಮಂತ್ರಿಯವರು ಹೇಳಿದರು

2ಕೋಟಿ ಅನುದಾನ: 

ನಂತರ  ಕುರುಹಿನ ಶೆಟ್ಟಿ ಸಮುದಾಯದವರು‌ ನಡೆಸುವ ಶೈಕ್ಷಣಿಕ ಉದ್ದೇಶದ ಯೋಜನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಕೋಟಿ ರೂಪಾಯ ಅನುದಾನ ಘೋಷಣೆಯನ್ನು  ಈ ಸಂದರ್ಭ ಮಾಡಿದರು.

ಹಿಂದುಳಿದ‌ ಎಲ್ಲಾ ವರ್ಗಗಳು ಸಂಘಟಿತರಾಗಬೇಕು,ಉತ್ತಮ ಶಿಕ್ಷಣ ಪಡೆಯಬೇಕು ಆಮೂಲಕ‌ ತಮ್ಮ ಸಾಮಾಜಿಕ ಆರ್ಥಿಕ ಪ್ರಗತಿಯನ್ನು ಸಾಧಿಸಬೇಕು ಎಂದು ಸನ್ಮಾನ್ಯ ಮುಖ್ಯ ಮಂತ್ರಿ ಯವರು ತಿಳಿಸಿದರು.

ಹಿಂದುಳಿದ ವರ್ಗಗಗಳ ಅಭಿವೃದ್ಧಿ:     

ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗಾಗಿ ತಕ್ಕ ಯೋಜನೆಗಳನ್ನು ರೂಪಿಸಲು ಹಿಂದುಳಿದ ವರ್ಗಗಳ ಸಾಮಾಜಿಕ ‌ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ .ನಮ್ಮ ಸರ್ಕಾರ ತಳ‌ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಗೆ ಅನೇಕ ಯೋಜನೆಗಳನ್ನು ‌ಅನುಷ್ಟಾನಗೊಳಿಸಿದೆ ಎಂದು ಮುಖ್ಯಮಂತ್ರಿ ಯವರು ಹೇಳಿದರು.

 

ಹಾಸನ ಜಿಲ್ಲೆಯ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಗೌರವ ರಕ್ಷೆ ನೀಡಲಾಯಿತು.

ಹಾಸನ ನಗರದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಸನ ಜಿಲ್ಲಾಡಳಿತದಿಂದ ಗೌರವ ಸಮರ್ಪಿಸಲಾಯಿತು.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ನಗರದಲ್ಲಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿದರು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s