ಸ್ವ ಉದ್ಯೋಗ ಬದುಕಿನ ದಾರಿಯಾಗಲಿ……

ವಿದ್ಯಾರ್ಥಿಗಳು ಕೇವಲ ನೌಕರಿ ಗೀಳಿಗೆ ಬೀಳದೆ ಸ್ವ ಉದ್ಯೋಗದ ಕಡೆಗೆ ಗಮನ ನೀಡಬೇಕು ಎಂದು ಗಣಿ ಮತ್ತು ಭೂಗರ್ಭ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿಯವರು ಹೇಳಿದರು.

ಜೆ.ಎಸ್.ಎಸ್ ಆವರಣದಲ್ಲಿ ಜರುಗಿದ ಸ್ಕಿಲ್ ಎಕ್ಸಪೋ 2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಾತ್ಮಕ ಶಿಕ್ಷಣ:
ಯುವಶಕ್ತಿ ಈ ದೇಶದ ಬೆನ್ನೆಲುಬು ಅವರಿಗೆ ತಾಂತ್ರಿಕ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಿದಲ್ಲಿ ಈ ದೇಶದ ಚಿತ್ರಣ ಬದಲಾಗುವದರಲ್ಲಿ ಸಂದೇಹವಿಲ್ಲ ಕಲಿತವರಿಗೆಲ್ಲ ಉದ್ಯೋಗ ದೊರೆಯುವ ಕಾಲ ಈಗಿಲ್ಲ ಈಗ ಏನಿದ್ದರೂ ಗುಣಮಟ್ಟವನ್ನು ಕೈಗಾರಿಕೆಗಳು ಅಪೇಕ್ಷಿಸುತ್ತವೆ ಯಾವ ಕಾಳೇಜು ಗುಣಮಟ್ಟದ ಶಿಕ್ಷಣ ನೀಡುತ್ತದೆಯೋ ಆ ವಿದ್ಯಾರ್ಥಿಗಳು ಮಾತ್ರ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಆ ರೀತಿ ಗುಣಾತ್ಮಕ ಶಿಕ್ಷಣ ಪಡೆಯಲು ತಾಂತ್ರಿಕ ವಸ್ತು ಪ್ರದರ್ಶನಗಳು ಸಹಾಯಕಾರಿಯಾಗುತ್ತವೆ ಎಂದು ಸಚಿವರು ತಿಳಿಸಿದರು.

ವಸ್ತು ಪ್ರದರ್ಶನ:
ಈ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ 35 ಕಾಲೇಜುಗಳ 125 ಮಾದರಿಗಳು ಭಾಗವಹಿಸಿದ್ದವು ಅದರಲ್ಲಿ ಸೈಕಲ್ ಚಾಲಿತ ನೀರಿನ ಪಂಪ್, ಫೈರ್ ಅಲಾರಾಂ, ಮಳೆ ನೀರು ಸಂಗ್ರಹಣೆ, ಮೊಬೈಲ್ ಚಾಲಿತ ಗೃಹಪಯೋಗಿ ವಸ್ತುಗಳು, ವಿದ್ಯಾರ್ಥಿನಿಯರು ತಯಾರಿಸಿದ ಸಿದ್ಧ ಉಡುಪುಗಳ ಮಾದರಿಗಳು ಗಮನ ಸೆಳೆದವು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s