ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಅಹವಾಲುಗಳನ್ನು ಆಲಿಸಲು ಮತ್ತು ಬರ ನಿರ್ವಹಣೆ ಪ್ರಗತಿ ಪರಿಶೀಲಿಸಲು ರಾಜ್ಯಾದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಗೆ ತೆರಳಿದ ಮುಖ್ಯಮಂತ್ರಿಗಳು ಅಲ್ಲಿ ಸಾರ್ವಜನಿಕ ಅಹವಾಲುಗಳನ್ನು ಆಲಿಸಿದರು. ಇದಕ್ಕೂ ಮುಂಚೆ ಮೈಸೂರಿನ ಜನತಾದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು ಈ ಸಂದರ್ಭದ ವರದಿ ಇಲ್ಲಿದೆ.

ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡರೆ ಕಿವಿಗೊಟ್ಟು ಕೇಳಿ. ಅವರು ಕೊಡುವ ಅರ್ಜಿಗಳನ್ನು ಕಣ್ಣು ಬಿಟ್ಟು ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಹೇಳಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಜನ ಸಂಪರ್ಕ ಸಭೆ ಮತ್ತು  ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ  ಅವರು ಪಾಲ್ಗೊಂಡಿದ್ದರು.

ಜನ ಸಂಪರ್ಕ ಸಭೆಯ ಮುನ್ನ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸಮಸ್ಯೆಗಳನ್ನು ಹೊತ್ತು ನಿಮ್ಮಲ್ಲಿಗೆ ಬರುವ ಜನರನ್ನು ಪ್ರೀತಿಯಿಂದ ಕಾಣಿರಿ ಎಂದರು.

ಸಮಸ್ಯೆಗಳಿಗೆ ಕಿವಿಯಾಗಿ:

ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಸ್ಮಶಾನದ ಕೊರತೆ ಇದೆ. ಸ್ಮಶಾನಗಳಿಗೆ ಸರ್ಕಾರಿ ಜಮೀನು ನೀಡುವ ಕೆಲಸ ತುರ್ತಾಗಿ ಆಗಬೇಕು.‌ಅಧಿಕಾರಿಗಳು ಜನರನ್ನು ಪ್ರೀತಿಯಿಂದ ಮಾತನಾಡಿಸಿ ಸಮಸ್ಯೆಗಳನ್ನು ಕೇಳಬೇಕು. ಅವರ ಕೆಲಸ ಆಗುವುದೋ ಇಲ್ಲವೇ ಎಂಬುದನ್ನು ತಿಳಿಸಬೇಕು. ಯಾವುದೇ ಕೆಲಸವನ್ನು ವಿಳಂಬ ಇಲ್ಲದೆ ಮಾಡಿಕೊಡಬೇಕು. ವಿಳಂಬ ಮಾಡುವುದು ಭ್ರಷ್ಟಾಚಾರಕ್ಕಿಂತ ದೊಡ್ಡದು ಎಂದರು.

ಸಾರ್ವಜನಿಕರನ್ನು ವರ್ಷಾನುಗಟ್ಟಲೆ ಕಚೇರಿಗಳಿಗೆ ಅಲೆಸಬೇಡಿ. ನಾವೆಲ್ಲಾ ಇರುವುದು ಜನರ ಸೇವೆ ಮಾಡುವುದಕ್ಕಾಗಿ. ಜನರಿಗೆ ನ್ಯಾಯ ಕೊಡುವುದು ವಿಳಂಬವಾದರೆ ಗೆದ್ದವನು ಸೋತ ಸೋತವನು ಸತ್ತ ಎಂಬ ಮಾತಿನಂತೆ ಆಗುತ್ತದೆ.

ತ್ವರಿತ ವಿಲೇವಾರಿ:

ಕಂದಾಯ ಇಲಾಖೆ ಅದರಲ್ಲೂ ಭೂಮಾಪನಕ್ಕೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತದೆ. ಇದು ಎಲ್ಲ ಜಿಲ್ಲೆಗಳಲ್ಲಿ ಇದೆ. ಹೀಗಾಗಿ ಸರ್ವೆ, ಹದ್ದುಬಸ್ತು ನಿಗದಿ ಕೋರಿ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s