ಗಾಂಧೀಜಿಯವರ ಆಚಾರ-ವಿಚಾರಗಳತ್ತ ಒಂದು ನೋಟ

-ಎಸ್. ನಾರಾಯಣಸ್ವಾಮಿ 

ವರ್ತಮಾನದಲ್ಲಿ ಗಾಂಧೀಜಿ ಹೆಚ್ಚು ಪ್ರಸ್ತುತವಾಗುತ್ತಾರೆ. ಅಹಿಂಸೆಯ ತತ್ವಾದರ್ಶ ಮತ್ತು ಸರಳ ಉಡುಗೆ ತೊಡುಗೆಯ ಮೂಲಕ ತಮ್ಮ ಜೀವನವನ್ನೇ ಸಂದೇಶವಾಗಿ ನೀಡಿದ ಮಹಾತ್ಮ ಗಾಂಧೀಜಿಯವರು ಸದಾ ಕಾಲಕ್ಕೂ ಆದರ್ಶ ಮತ್ತು ಅನುಕರಣೀಯರು.. ಗಾಂಧೀಜಿಯವರು ಕಟ್ಟಾ ಸಸ್ಯಹಾರಿಯಾಗಿದ್ದರು. ಅವರು ಆಹಾರ ವಿಚಾರದಲ್ಲಿ ತುಂಬಾ ಗಮನಹರಿಸುತ್ತಿದ್ದರು.

ಸಸ್ಯಹಾರದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದೇ ಆಗಿತ್ತು. ಕಾಲ ಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಸಮರ್ಥವಾಗಿ ಬಳಕೆ ಮಾಡಿಕೊಂಡರು ಇತರರಿಗೆ ಮಾದರಿಯಾದರು. ಗಾಂಧೀಜಿಯವರ ಆಚಾರ ವಿಚಾರಗಳ ಕುರಿತ ಒಂದು ಲೇಖನ ಇಲ್ಲಿದೆ.

ಮನುಷ್ಯನ ಆರೋಗ್ಯಕ್ಕೆ ಆಹಾರ ಮತ್ತು ವಿಹಾರ ಬಹಳ ಮುಖ್ಯ-ಈ ವಿಷಯವನ್ನು ಬಹುವಾಗಿ, ಸದಾ ಪ್ರತಿಪಾದಿಸುತ್ತಿದ್ದವವರು ಮಹಾತ್ಮಗಾಂಧಿ, ಅವರು ಎಂದೂ ಈ ವಿಷಯದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಕೆಲವೊಮ್ಮೆ, ಅಥವಾ ಹಲವೊಮ್ಮೆ ಈ ವಿಷಯವನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು. ಉಪವಾಸ ಮತ್ತ ನಿರಶನ- ಇವುಗಳನ್ನು ಸದಾ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಅವರ ಆಹಾರದ ಬಗ್ಗೆ ತಿಳಿಯುವುದಾದರೆ- ಅವರದು ಬಹಳ ಹಿತ, ಮಿತ, ಮತ್ತು ಸಾತ್ವಿಕ ಆಹಾರ, ಆಡಿನ ಹಾಲು ಅವರಿಗೆ ಮುಖ್ಯವಾದ ಆಹಾರವಾಗಿತ್ತು. ನಂದಿಬೆಟ್ಟದಲ್ಲಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ತಂಗಿದ್ದಾಗ ಪಕ್ಕದ ಹೆಗಡಹಳ್ಳಿಯ ರೈತನೊಬ್ಬ ಇವರಿಗಾಗಿ ಒಂದು ಮೇಕೆಯನ್ನು(ಆಡು) ಗೊತ್ತುಪಡಿಸಿ ಕಳುಹಿಸಿದನು.

ಆಹಾರದಷ್ಟೆ ನೈರ್ಮಲ್ಯವು ಸಹ ಅವರ ದಿನಚರಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ತಾವು ಉಳಿಯುವ ಸ್ಥಳವು ಕೆಟ್ಟ ವಾಸನೆಯಿಂದ ಮುಕ್ತವಾಗಿರಬೇಕೆಂದು ಬಯಸುತ್ತಿದ್ದರು. ಒಮ್ಮೆ ನಂದಿ ಬೆಟ್ಟದಲ್ಲಿ ತಂಗಿದ್ದಾಗ ಹೊರಗಡೆ ಬಯಲಿನಲ್ಲಿ ಒಂದು ದಿನ ಸಂಜೆ  ಪ್ರಾರ್ಥನೆಯ ಪ್ರಾರಂಭದಲ್ಲಿ ಕೆಲವು ನೊಣಗಳು ಕಾಣಿಸಿಕೊಂಡಿದ್ದನ್ನು ಗಾಂಧೀಜಿ ಕಂಡರು. ಆಗ ಸುತ್ತ ಕುಲಿತಿದ್ದವರನ್ನು ಕರೆದು “ಇಲ್ಲಿಗೆ ಸಮೀಪದಲ್ಲಿ ಎಲ್ಲಿಯೋ ಕೊಳೆ ಸೇರಿರಬೇಕು, ಅದಕ್ಕೆ ನೊಣಗಳು ಬಂದಿವೆ” ಎಂದರು. ಅಲ್ಲಿದ್ದವರು “ ಇಲ್ಲಿ ಎಲ್ಲವೂ ಶುಚಿಯಾಗಿದೆ, ಎಲ್ಲೂ ಕೊಳೆ ಇಲ್ಲ” ಎಂದರು. ಗಾಂಧೀಜಿ  ಹಾಗೆ ಇರಲೇ ಇರದು, ಹೋಗಿ ನೋಡಿ?” ಎನ್ನಲು ಕಟ್ಟಡಕ್ಕೆ ಸ್ವಲ್ಪ ದೂರದಲ್ಲಿ ಪಾತ್ರೆಗಳನ್ನು ತೊಳೆದ ಮುಸುರೆ ಬಿದ್ದಿತು.  ನೊಣಗಳು ಅದನ್ನು ಮುತ್ತಿದ್ದವು. ಅದನ್ನು ತೆಗೆದು ಹಾಕಿದ ಮೇಲೆ ನೊಣಗಳು ಮಾಯವಾದವು. ನಂತರ ತಮ್ಮ ಸಂಗಡಿರೊಂದಿಗೆ ಪ್ರಾರ್ಥನೆಯನ್ನು ಪ್ರಾರಂಭಿಸಿದರು.

ಉಪವಾಸ:

ಗಾಂಧೀಜಿಯವರು ತಮ್ಮ ಆರೋಗ್ಯದಲ್ಲಿ ಏರುಪೇರಾದರು ಉಪವಾಸ ಮಾಡಿ ದೇಹವನ್ನು ದಂಡಿಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ತಮ್ಮ ದೇಹ ದಂಡನೆ ಮಾಡಿಕೊಳ್ಳುವುದನ್ನೇ ಮುಂದೆ ಭಾರತ ಸ್ವತಂತ್ರಗೊಳಿಸಲು ಅಸ್ತ್ರವನ್ನಾಗಿ ಮಾಡಿಕೊಂಡರು. ಅಲ್ಲದೇ ಹಿಂದು ಮುಸ್ಲಿಂ ಗಲಬೆಗಳು ಹೆಚ್ಚಾದಾಗ ಅದನ್ನು ತಹಬದಿಗೆ ತರಲು ತಮ್ಮ ‘ಉಪವಾಸ’ ಅಸ್ತ್ರವನ್ನು ಬಳಸಿದರು. ಈ ಸಂದರ್ಭದಲ್ಲಿ ಹಿಂದು ಮುಸ್ಲಿಂ ನಾಯಕರು ಮುಂದಾಳತ್ವ ವಹಿಸಿ ತಮ್ಮ ಜನಾಂಗವನ್ನು ಮನವೊಳಿಸಿ ಗಲಭೆಗಳನ್ನು ನಿಯಂತ್ರಿಸಿದ ನಂತರವಷ್ಟೆ ಗಾಂಧೀಜಿಯವರು ತಮ್ಮ ಉಪವಾಸವನ್ನು ನಿಲ್ಲಿಸಿದರು.

ಹರಿ ಜನರಿಗಾಗಿ ಪ್ರತ್ಯೇಕ ಚುಣಾವಣೆಯನ್ನು ನಡೆಸುವುದನ್ನು ವಿರೋಧಿಸಿ 1933ರ ಮೇ 8 ರಿಂದ 28ರವರೆಗೆ ಗಾಂಧೀಜಿಯವರು 21 ದಿವಸ ಧೀರ್ಘ ಉಪವಾಸ ಮಾಡಿದ ವಿಷಯ ಈಗ ಇತಿಹಾಸವಾಗಿದೆ. ಈ 21 ದಿವಸಗಳ ಅವಧಿಯನ್ನು ಆಧಾರವಾಗಿಟ್ಟುಕೊಂಡು ಅಂದು ಲಾಲ್ ಬಾಗಿನ ನಿರ್ದೇಶಕರಾಗಿದ್ದ ಡಾ.ಎಚ್ ಎಸ್ ಮರಿಗೌಡರು ಒಂದು ಯೋಜನೆಯನ್ನು ರೂಪಿಸಿದರು. ಅದರಂತೆ ಪ್ರತಿಯೊಬ್ಬರು ಸೊಪ್ಪು ತರಕಾರಿಗಳನ್ನು ಹೆಚ್ಚು ಬೆಳೆಯಬೇಕು, ಬೆಳೆದು ಸ್ವಾವಲಂಭಿಗಳಾಗಬೇಕು, ಮತ್ತು ತಾವು ಬೆಳೆದ ಸೊಪ್ಪು ತರಕಾರಿಗಳನ್ನು ಊಟದಲ್ಲಿ ಹೆಚ್ಚಾಗಿ ಬೆಳೆಸಿದರೆ ದೃಡಕಾಯರಾಗಿ ಶರೀರ ಶ್ರಮದ ಕೆಲಸಗಳನ್ನು ಮಾಡುವುದು ಸುಲಭ- ಇದು ಗಾಂಧೀಜಿಯವರ ಕಲ್ಪನೆ. ಈ ಕಲ್ಪನೆಯನ್ನು ಕಾರ್ಯಗೊಳಿಸಿದವರು ಡಾ.ಎಂ ಎಚ್ ಮರಿಗೌಡರು; ಸೊಪ್ಪು ತರಕಾರಿಗಳನ್ನು ಕೇವಲ 20-21 ದಿವಸದಲ್ಲಿ ಬೆಳೆಯಬಹುದೆಂದು ಪ್ರಾತ್ಯಕ್ಷಿಕವಾಗಿ ತೋರಿಸಿಕೊಟ್ಟರು. ಅವರು ಈ ಪ್ರಾತ್ಯಕ್ಷಿಕ ಮಾದರಿಯನ್ನು ಗಾಂಧೀಜಿ ಉಪವಾಸ ಮಾಡಿದ ಅವಧಿಗೆ ಸೂಕ್ತವಾಗಿ ಸಮೀಕರಿಸಿದ್ದಾರೆ. ಹೇಗೆಂದರೆ ಹಿತ್ತಲ್ಲಲ್ಲಿಯು ಅಥವಾ ಊರ ಹೊರಗಡೆ ಕಣದ ಬಳಿಯಲ್ಲಿ ಮಡಿಗಳನ್ನು ಮಾಡಿ ಅವುಗಳಲ್ಲಿ ಕೀರೆ, ದಂಟು, ಸಬ್ಬಸಿಗೆ, ಅರಿವೆ, ಚಕ್ಕೊತ್ತ ಸೊಪ್ಪುಗಳ, ಬೀಜಗಳನ್ನು ನೆಟ್ಟು  20 ದಿವಸ ಪೋಷಣೆ ಮಾಡಿದರ ಸಾಕು- ಸೊಪ್ಪುಗಳು ಬೆಳೆದು 21ನೇ ದಿವಸ ಅಂದರೆ ಗಾಂಧೀಜಿ ಉಪವಾಸದ ಕೊನೆಯ ದಿನ ಆ ಸೊಪ್ಪುಗಳನ್ನು ಕಟಾವು ಮಾಡಿ ಅಡುಗೆ ಮಾಡಿ ಊಟ ಮಾಡುವುದು ಸಾಧ್ಯ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಡಾ ಎಂ ಎಚ್ ಮರಿಗೌಡರಿಗೆ ಗಾಂಧಿಜಿಯವರ ಆದರ್ಶಗಳ ಮೇಲೆ ಎಷ್ಟೊಂದು ಗೌರವ ಇತ್ತು ಎಂದರೆ ಗಾಂಧೀಜಿಯವರ ಜನ್ಮ ಶತಮಾನೋತ್ಸವ ಆಚರಣೆಯ ಪ್ರಯುಕ್ತ 1969 ರಿಂದ 1974 ರವರೆಗೆ ಗಾಂಧಿಯವರ ನೆನಪಿನಲ್ಲಿ ಸುಮಾರು 100 ತೋಟಗಾರಿಕಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಮುಖ್ಯವಾಗಿ ದೇವನಹಳ್ಳಿ ವಿಮಾನ ನಿಲ್ದಾಣದ ಎದುರು “ಮಹಾತ್ಮ ಗಾಂಧಿ ಜನ್ಮಶತಮಾನೋತ್ಸವ ತೋಟಗಾರಿಕಾ ಕ್ಷೇತ್ರ “ ಸೇರಿದಂತೆ ಕನ್ನಮಂಗಲ, ಬಗಿನಗೆರೆ, ಭೈರಮಂಗಲ ಹೀಗೆ ಇನ್ನೂ ಮುಂತಾದ ಸ್ಥಳಗಳಲ್ಲಿ ಒಟ್ಟು ಸುಮಾರು ನೂರು ತೋಟಗಾರಿಕೆ  ಕ್ಷೇತ್ರಗಳನ್ನು ಸ್ಥಾಪಿಸಿ ಅವುಗಳಿಗೆ ಗಾಂಧೀಜಿಯವರ ಹೆಸರನ್ನಿಟ್ಟು ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ.

ಗಾಂಧೀಜಿಯವರ ಬಗ್ಗೆ ಸ್ಮರಣಿಕೆಯಾಗಿ ಒಂದು ನಿಯತಕಾಲಿಕ ಪತ್ರಿಕೆಯನ್ನು 1970 ರ ಅಕ್ಟೋಬರ್ ಎರಡರಂದು ಅವರ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಪ್ರಾರಂಭಿಸಿದರು. ಇದು ತೋಟಗಾರ ಎಂಬ ನಾಮಾಂಕಿತದಲ್ಲಿ ಲಾಲ್ ಬಾಗಿನ ಮೈಸೂರು ಉದ್ಯಾನ ಕಲಾಸಂಘದಿಂದ ಇಂದಿಗೂ ಪ್ರಕಟಗೊಳ್ಳುತ್ತಿದೆ. ಈ ಪತ್ರಿಕೆಯ ಮುಖಪುಟದಲ್ಲಿ ಗಾಂಧೀಜಿಯ ಭಾವ ಚಿತ್ರವನ್ನು ಅನೂಚಾನವಾಗಿರುವಂತೆ ವಿನ್ಯಾಸಗೊಳಿಸಿದ್ದಾರೆ.

ಗಾಂಧೀಜಿಯವರು ವಕೀಲರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರೂ ಸಹ 1927ರಲ್ಲಿ ಬೆಂಗಳೂರಿನಲ್ಲಿ ತಂಗಿದ್ದಾಗ ಆಡುಗೋಡೆಯಲ್ಲಿನ ಇಂಪೀರಿಯಲ್ ಡೇರಿಗೆ(ಈಗಿನ ನದರಿ ರಾಷ್ಟ್ರೀಯ ಹೈನುಗಾರಿಕಾ ಸಂಶೋದನಾ ಸಂಸ್ಥೇ) ಗೆ ಭೇಟಿ ನೀಡಿದರು. ಆಗ ಅದು ಬ್ರಿಟಿಷ್ ಸರ್ಕಾರದಲ್ಲಿ ಕ್ಷೀರೋತ್ಪಾದನೆಯ ಸಂಶೋಧನೆಯ ಕೇಂದ್ರವಾಗಿತ್ತು, ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ತಾವು ಒಬ್ಬ ರೈತರೆಂದು ನಮೂದಿಸಿ ಸಹಿ ಮಾಡಿರುತ್ತಾರೆ. ಅವರಿಗೆ ರೈತಾಪಿ ಜನರ ಮೇಲೆ ಇದ್ದ ಪ್ರೀತಿ ಕಾಳಜಿ ಬಗ್ಗೆ ಈ ವಿಷಯ ಉದಾಹರಣೆಯಾಗಿದೆ.

ಭಾರತ ಅಖಂಡವಾಗಿರಬೇಕೆಂದು ಬಯಸುತ್ತಿದ್ದ ಗಾಂಧೀಜಿ 1946 ಅಂತ್ಯದಲ್ಲಿ ಬಂಗಾಳದಲ್ಲಿ ಕೋಮು ಗಲಭೆಗಳಿಂದ ನಡೆದ ದರೋಡೆ, ರಕ್ತಪಾತ, ಹೊಡೆದಾಟಗಳಿಂದ ಜನ ತತ್ತರಿಸಿದಾಗ ನೌಕಾಲಿಯಲ್ಲಿ ಪ್ರವಾಸ ಮಾಡಿದ ಗಾಂಧೀಜಿ ಭಾರತದ ಬಡವರ ಆಹಾರ ಭದ್ರತೆಯ ಬಗ್ಗೆ ಬಹಳ ಮಾರ್ಮಿಕವಾಗಿ ನುಡಿದಿದ್ದಾರೆ – ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಆಹಾರವನ್ನು ತಾನೆ ಬೆಳೆಯಬೇಕು, ಅಥವಾ ಕೊಂಡು ತಿನ್ನುವ ಶಕ್ತಿಯನ್ನಾದರೂ ಬೆಳೆಸಿಕೊಳ್ಳುವಂತ ವಾತವರಣವನ್ನು ಸರ್ಕಾರ ಸೃಷ್ಟಿಸಬೇಕೆ ಹೊರತು ಧಾನ ಧರ್ಮ ದಯೆಯಿಂದ ಆಹಾರವನ್ನು ನೀಡಬಾರದು. ಈ ತರಹೆಯ ಯೋಜನೆಗಳಿಂದ ತಮ್ಮ ಸರ್ಕಾರ ನಮ್ಮ ಜನರನ್ನು ಸೋಮಾರಿಗಳನ್ನಾಗಿ ಹಾಗೂ ಪರಾವಲಂಭಿಗಳನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಹೀಗೆ ಗಾಂಧೀಜಿಯವರು ಭಾರತದ ರೈತರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು, ಅಲ್ಲದೆ ಅವರು ಯಾವತ್ತೂ ರೈತರು ಸ್ವಾವಲಂಭಿಗಳಾಗಿರಬೇಕೆಂದು ಬಯಸುತ್ತಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s