ಕನ್ನಡ ತೀರ್ಪಿಗೆ ಪುರಸ್ಕಾರದ ಗೌರವ

ರಾಜ್ಯದ ಆಡಳಿತದಲ್ಲಿ ಕನ್ನಡ ಭಾಷಾ ಬಳಕೆಗೆ ಸರ್ಕಾರ ಆದ್ಯತೆ ನೀಡಿದೆ. ಎಲ್ಲಾ ಸರ್ಕಾರಿ ವಲಯಗಳಲ್ಲು ಕನ್ನಡ ಭಾಷೆಯ ಸಮರ್ಪಕ ಅನುಷ್ಠಾನ ಹಾಗೂ ಕಣ್ಗಾವಲಿಗೆ ಕನ್ನಡ ಅಭಿವೃದ್ದಿ ಪ್ರಾದಿಕಾರ ಕಾರ್ಯ ನಿರ್ವಹಿಸುತ್ತಿದೆ. ಆಡಳಿತ ಭಾಷೆಯಾಗಿ ಕನ್ನಡ ಜಾರಿಯಲ್ಲಿದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡದ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರನ್ನು ಗೌರವಿಸುವ ಕೆಲಸ ಆಗುತ್ತಿದೆ. ವಿಧಾನ ಸೌಧದ ಸಮ್ಮೆಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರುಗಳನ್ನು ಗೌರವಿಸಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದ ವರದಿ ಇಲ್ಲಿದೆ..

ನ್ಯಾಯಾಲಯದಲ್ಲಿ ಈ ನೆಲದ ಭಾಷೆಯಾದ ಕನ್ನಡದಲ್ಲಿ ವಾದ ಮಾಡುವುದು ಹಾಗೂ ತೀರ್ಪು ನೀಡುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಏರ್ಪಡಿಸಿದ್ದ 2015-16 ಹಾಗೂ 2016-17 ನೇ ಸಾಲಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 69 ನ್ಯಾಯಾಧೀಶರಿಗೆ ಮತ್ತು ಕನ್ನಡದಲ್ಲಿ ಪ್ರತಿವಾದ ಮಂಡಿಸಿದ 19 ಮಂದಿ ಸರ್ಕಾರಿ ಅಭಿಯೋಜಕರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರು ಹಾಗೂ ಸರ್ಕಾರಿ ಅಭಿಯೋಜಕರ ಜೊತೆಗೆ ಮುಂದಿನ ವರ್ಷದಿಂದ ಕನ್ನಡದಲ್ಲಿ ವಾದ ಮಂಡಿಸುವ ವಕೀಲರನ್ನು ಗುರುತಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವರಿಗೂ ಗೌರವಿಸುವಂತೆ   ಸೂಚನೆ ನೀಡಿದರು.

ಶಾಸ್ರ್ತೀಯ ಭಾಷೆ:

ಕನ್ನಡ ಭಾಷೆ ಬಹು ಸುಂದರ ಭಾಷೆ.  ಈ ಭಾಷೆಗೆ ಸುಮಾರು 2000 ವರ್ಷ ಇತಿಹಾಸವಿದ್ದು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೂಡಾ ಸಿಕ್ಕಿದೆ ಎಂದು ತಿಳಿಸಿದ ಮುಖ್ಯಮಂತ್ರಿ ನ್ಯಾಯಾ ಬಯಸಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವುದರಲ್ಲಿ ಪ್ರಮುಖ ಪಾತ್ರ ನ್ಯಾಯಾಧೀಶರದಾಗಿದೆ ಎಂದರು.

ಸರ್ಕಾರ ನೆರವು:

ಕನ್ನಡದಲ್ಲಿ ತೀರ್ಪು ನೀಡಲು ನ್ಯಾಯಾಲಯಗಳಿಗೆ ಹಲವು ತೊಂದರೆಗಳಿದ್ದು ಅಂತಹ ತೊಂದರೆಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರವು ಎಲ್ಲಾ ರೀತಿಯ ನೆರವು ನೀಡಲಿದೆ.   ಈ ನೆಲದ ಜನಸಾಮಾನ್ಯರು ಮಾತನಾಡುವ ಕನ್ನಡದಲ್ಲಿ ತೀರ್ಪು ಬಂದಲ್ಲಿ ತೀರ್ಪಿನ ಸಾಧಕಬಾಧಕಗಳ ಬಗ್ಗೆ ಕಕ್ಷಿದಾರರು ಚಿಂತನೆ ನಡೆಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಅವರು  ಅಭಿಪ್ರಾಯಪಟ್ಟರು.

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s