ಗ್ರಾಮೀಣ ಮಕ್ಕಳಿಗೆ ಬೆಳಕು ತೋರಿದ ಹಳ್ಳಿಕೇರಿ ಗುದ್ಲೆಪ್ಪ

 

-ಎಂ ಜುಂಜಣ್ಣ, ಸಹಾಯಕ ನಿರ್ದೇಶಕರು ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ ಜಿಲ್ಲೆ

 

ಹಾವೇರಿ ಜಿಲ್ಲೆಯ ಹೊಸರಿತ್ತಿಯ ಹಳ್ಳಿಕೇರಿಯವರಿಗೆ ತಮ್ಮ ಹುಟ್ಟೂರಾದ ಹೊಸರಿತ್ತಿ ಬಗ್ಗೆ ಅಪಾರ ಅಭಿಮಾನ. ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗಾಗಿ ಮಹಾತ್ಮ ಗಾಂಧೀಜೀಯವರ ಆದರ್ಶಗಳನ್ನು ಪ್ರತಿಬಿಂಬಿಸುವ ಒಂದು ಗುರುಕುಲವನ್ನು ಸ್ಫಾಪಿಸಬೇಕೆಂಬುದು ಅವರ ಬಯಕೆ. ಅವರ ಷಷ್ಠಬ್ದಿಯ ಸಮಯದಲ್ಲಿ ಸ್ನೇಹಿತರು, ಹಿತೈಷಿಗಳು ಅರ್ಪಿಸಿದ ಹಣವನ್ನು ಗ್ರಾಮೀಣ ಗುರುಕುಲ ಸ್ಥಾಪನೆಗಾಗಿ ಹಳ್ಳಿಕೇರಿ ಗುದ್ಲೆಪ್ಪನವರು ಸಮರ್ಪಿಸಿದರು.

ದೇಶದ ವಿವಿಧ ಭಾಗಗಳಲ್ಲಿನ ಪ್ರಸಿದ್ಧ ವಸತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಶಿಕ್ಷಣ ತಜ್ಞರನ್ನು ಕಂಡು, ಗ್ರಾಮೀಣ ಮಕ್ಕಳಿಗೆ ಉಪಯುಕ್ತವಾಗಬಲ್ಲ ಸ್ವಾವಲಂಬನೆ ಶಿಕ್ಷಣ ಪದ್ಧತಿಯ ಬಗ್ಗೆ ವಿವರಗಳನ್ನುಸಂಗ್ರಹಿಸಿದರು. ವರದಾ ಆಶ್ರಮದಲ್ಲಿ ಜೀವನ ಶಿಕ್ಷಣ ತರಬೇತಿಯನ್ನು ಪಡೆದ ಶಿಕ್ಷಣ ತಜ್ಞ ಶ್ರೀ ಮ.ಗು. ಹಂದ್ರಾಳರು ಈ ಗುರುಕುಲದ ವಿಶೇಷ ಯೋಜನೆಯನ್ನು ರೂಪಿಸಿದರು.

ಈ ಗುರುಕುಲ ವಿಶೇಷ ಯೋಜನೆಗೆ ಕರ್ನಾಟಕ ಸರ್ಕಾರದ ಅಂಗಿಕಾರ ಪಡೆದು, 1984 ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಹೊಸರಿತ್ತಿಯಲ್ಲಿ ಗಾಂಧಿ ಗ್ರಾಮೀಣ ಗುರುಕುಲ ಪ್ರಾರಂಭವಾಯಿತು. ಈ ಗುರುಕುಲವು ವಿಶಾಲವಾದ 32 ಎಕರೆ ವಿಸ್ತೀರ್ಣದಲ್ಲಿ ಪಸರಿಸಿಕೊಂಡಿದೆ. ಈ ಭೂಮಿಯಲ್ಲಿ ತೆಂಗು, ಹಣ್ಣು, ಕಾಯಿಪಲ್ಲೆ ಬೆಳೆಯಲಾಗುತ್ತದೆ.

ಗುರುಕುಲ ಶಿಕ್ಷಣವು ಮಕ್ಕಳಲ್ಲಿ ತಾನು ಭಾರತೀಯನೆಂದು ಹೇಳುವ ಧೈರ್ಯ ನೀಡುತ್ತದೆ. ತಾನೇ ನೂತು ನೇಯ್ದ ಬಟ್ಟೆಗಳನ್ನು ಧರಿಸಿ ತಾನೇ ದುಡಿದು ಬೆಳೆದ ಆಹಾರವನ್ನು ಉಂಡು ನೆಮ್ಮದಿಯ ಸಹಜೀವನ ನಡೆಸುವ ಸ್ವಾವಲಂಬನೆಯ ಶಿಕ್ಷಣವಿದು. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಪ್ರಗತಿಪರ ಮಾರ್ಗ ಹೊಂದುವ ಶಿಕ್ಷಣವಿದು. ಬಡ ಕುಟುಂಬದಲ್ಲಿ ಜನಿಸಿ ಆರ್ಥಿಕ ಮುಗ್ಗಟ್ಟಿನಿಂದ ಬಳಲಿ ನಿಸ್ಸಹಾಯಕ ಸ್ಥಿತಿಯಲ್ಲಿರುವ ಗ್ರಾಮಾಂತರ ಪ್ರತಿಭಾವಂತ ಬಾಲಕರಿಗಾಗಿ ಆಶಾದಾಯಕ ಸಂಸ್ಥೆ ಇದು.

ಇಲ್ಲಿ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗುತ್ತದೆ. 5 ನೇ ವರ್ಗದಿಂದ 10 ನೇ ವರ್ಗದವರೆಗೆ ಕರ್ನಾಟಕ ರಾಜ್ಯ ಅಭ್ಯಾಸ ಪಠ್ಯಕ್ರಮ ಕಲ್ಪಿಸಲಾಗಿದೆ. ಸಾಮಾನ್ಯ ಶಿಕ್ಷಣದ ಜೊತೆಗೆ ಗ್ರಾಮೀಣ ಜನತೆಗೆ ಸ್ವಾವಲಂಬಿಯಾಗುವಂತಹ ಉದ್ಯೋಗಗಳಾದ ಕೈ-ತೋಟ, ಕೃಷಿ, ನೂಲು, ನೇಯ್ಗೆ, ರೇಷ್ಮೆ, ವ್ಯವಸಾಯ, ಹೈನುಗಾರಿಕೆ, ಆಧುನಿಕ ಕೃಷಿ, ಕಂಪ್ಯೂಟರ್ ಜ್ಞಾನ ನೀಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವುದು, ಶೀಲ ಸಚ್ಚಾರಿತ್ರ್ಯ ರೂಪಿಸುವುದು, ದೈಹಿಕ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿಕಾಸವನ್ನು ಸಾಧಿಸುವುದು, ನಾಗರಿಕ ಪ್ರಜ್ಞೆ ಮೂಡಿಸುವುದು, ಸ್ವದೇಶಾಭಿಮಾನ, ಸ್ವಾವಲಂಬನೆ, ಸದಾಚಾರ, ಸದಾ ಜೀವನ ಇವು ಈ ವಿದ್ಯಾರ್ಥಿಗಳಲ್ಲಿ ಮೂಡಿಸುವುದರ ಕಡೆಗೆ ಇಲ್ಲಿ ವಿಶೇಷ ಗಮನ ನೀಡಲಾಗಿದೆ.

ವಸತಿ ಗೃಹಗಳಲ್ಲಿ ವಿದ್ಯಾರ್ಥಿಗಳೇ ತಮ್ಮ ಪಾಲಿನ ಕರ್ತವ್ಯಗಳನ್ನು ನೆರವೇರಿಸಿಕೊಳ್ಳುವರು. ಶೌಚಾಲಯ, ಸ್ನಾನಗೃಹ, ಅಡುಗೆಮನೆ ಸ್ವಚ್ಛತೆಯನ್ನು ಪರ್ಯಾಯ ಕ್ರಮಗಳಲ್ಲಿ ವಿದ್ಯಾರ್ಥಿಗಳೇ ನಿರ್ವಹಿಸುವರು. ಶ್ರೀಮಂತ, ಬಡವ ಎಂಬ ಬೇಧ-ಭಾವವಿಲ್ಲದೇ ಎಲ್ಲರೂ ಸಹೋದರರಂತೆ ಸಹಬಾಳ್ವೆಯ ಸಹ ಜೀವನ ನಡೆಸುವುದು ಮಾದರಿಯಾಗಿದೆ. ವಿದ್ಯಾರ್ಥಿಗಳಿಗೆ ಖಾದಿ ಸಮವಸ್ತ್ರ ಮತ್ತು ಊಟ, ಪಠ್ಯಪುಸ್ತಕ, ನೋಟ್ ಬುಕ್, ಲೇಖನ ಸಾಮಾಗ್ರಿ, ಬಟ್ಟೆ ತೊಳೆಯುವ ಸೋಪು ಹಾಗೂ ಮೈಗೆ ಹಚ್ಚುವ ಸೋಪು, ಪೇಸ್ಟ್ ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿ ಯಾವುದೇ ಶುಲ್ಕ ಸಂಗ್ರಹವಿಲ್ಲ.

ವಿದ್ಯೆಯಿಂದಲೇ ವಿಶ್ವ ಉದ್ಧಾರ ಸಾಧ್ಯ ಎಂದು ಮನಗಂಡಿದ್ದ ಹಳ್ಳಿಕೇರಿಯವರು. ಅಂತೆಯೇ ನಾಡಿನಾದ್ಯಾಂತ ಹುಟ್ಟಿಕೊಂಡು ಸಂಭ್ರಮಿಸುತ್ತಿರುವ ಹತ್ತಾರು ಶಿಕ್ಷಣ ಸಂಸ್ಥೆಗಳಿಗೆ ಅವರ ಸ್ಫೂರ್ತಿಯೇ ಮೂಲ ಉಸಿರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s